ಬಿಬಿಎಂಪಿಯಲ್ಲೂ ರೆಸಾರ್ಟ್ ಪಾಲಿಟಿಕ್ಸ್: ಪಕ್ಷೇತರರಿಗೆ ಡಿಮ್ಯಾಂಡ್

ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯರಾಜಕಾರಣದ ರೆಸಾರ್ಟ್ ಪಾಲಿಟಿಕ್ಸ್ ಇದೀಗ ಪಾಲಿಕೆಗೂ ಬಂದಿದೆ. ಬಿಬಿಎಂಪಿಯಲ್ಲಿ ಅಧಿಕಾರವನ್ನು ಪಡೆಯಲು ಬಿಜೆಪಿ, ಕಾಂಗ್ರೆಸ್ ಕಸರತ್ತು ಆರಂಭಿಸಿದೆ.

ಪಕ್ಷೇತರರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ ಎಂಬುದರ ಸುಳಿವಿನ ಹಿಂದೆ ಕಾಂಗ್ರೆಸ್ ಮುಖಂಡರು ಆರು ಮಂದಿ ಪಕ್ಷೇತರ ಕಾರ್ಪೊರೇಟರ್ ಗಳನ್ನು ಹಿಡಿದಿಟ್ಟುಕೊಳ್ಳಲು ಹೈದರಾಬಾದ್ ಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಪಕ್ಷೇತರರು ಒಂದು ಬಾರಿ ಬಜೆಪಿಯಿಂದೊಗೆ ಕಾಣಿಸಿಕೊಂಡರೆ ಇನ್ನೊಂದು ಬಾರಿ ಕಾಂಗ್ರೆಸ್ ನೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಪಕ್ಷೇತರರಿಗೆ ಭಾರಿ ಡಿಮ್ಯಾಂಡ್ ಬಂದಿದೆ.

ಹೈದರಾಬಾದ್ ಅಥವಾ ತಮಿಳುನಾಡಿಗೆ ಕರೆದೊಯ್ಯಲು ತೀರ್ಮಾನಿಸಿದ್ದಾರೆ, ಒಮ್ಮೆ ಗೋವಾಕೆ ಕರೆದೊಯ್ಯಲು ಚಿಂತನೆ ನಡೆಸಿತ್ತು ಎನ್ನಲಾಗಿದೆ. ಮಂಗಳವಾರ ಅಥವಾ ಬುಧವಾರ ಪ್ರವಾಸಕ್ಕೆ ತೆರಳುವ ನಿರೀಕ್ಷೆ ಇದೆ. ಬಿಜೆಪಿ ಮುಖಂಡರು ನಮ್ಮೊಂದಿಗೆ ಸಭೆ ನಡೆಸಿ ಬೆಂಬಲ ಕೇಳಿದ್ದು ನಿಜ ಆದರೆ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ, ಹೀಗಾಗಿ ನಾವು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೇವೆ ಎಂದು ಪಕ್ಷೇತರ ಸದಸ್ಯರೊಬ್ಬರು ಹೇಳಿದ್ದರು.

Resort politics in BBMP mayor election

ಬಿಜೆಪಿಯು ಪಕ್ಷೇತರರಿಗೆ ಉಪ ಮೇಯರ್ ಸ್ಥಾನ, ವಿದೇಶ ಪ್ರವಾಸ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡುತ್ತಿದೆ. ಎನ್ನುವ ಕಾಂಗ್ರೆಸ್ ಮುಖಂಡರ ವಾದವನ್ನು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ತಳ್ಳಿ ಹಾಕಿದ್ದಾರೆ. ಪಕ್ಷೇತರರಿಗೆ ಯಾವುದೇ ಆಮಿಷ ಒಡ್ಡಿಲ್ಲ, ಈ ಬಗ್ಗೆ ಧರ್ಮಸ್ಥಳದ ಮಂಜುನಾಥಸ್ವಾಮಿ ಎದುರು ಪ್ರಮಾಣ ಮಾಡೋಣ ಆಗ ಎಲ್ಲರಿಗೂ ವಾಸ್ತವ ತಿಳಿಯುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+