ಬೆಂಗಳೂರು; ಶಾಲೆ ಸಮೀಪ ಬ್ರಿವರಿ ತೆರೆಯಲು ಜನರ ವಿರೋಧ

ಬೆಂಗಳೂರು, ಜನವರಿ 21 : ಶಾಲೆಯ ಸಮೀಪ ಚಿಕ್ಕ ಬ್ರಿವರಿ ಘಟಕ ತೆರೆಯಲು ಸಿದ್ಧತೆ ನಡೆಸುತ್ತಿದ್ದು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನುಮತಿ ನೀಡಬಾರದು ಎಂದು ಬಿಬಿಎಂಪಿ ಆಯುಕ್ತ ಬಿ. ಎಸ್. ಅನಿಲ್‌ ಕುಮಾರ್‌ಗೆ ದೂರು ನೀಡಲಾಗಿದೆ.

ದೊಡ್ಡಕನ್ನಲ್ಲಿ-ಕಾಡುಬೀಸನಹಳ್ಳಿ ರಸ್ತೆಯಲ್ಲಿರುವ ಗೀರ್ ಶಾಲಾ ರಸ್ತೆಯಲ್ಲಿ ಚಿಕ್ಕ ಬ್ರಿವರಿ ಘಟಕ ಸ್ಥಾಪನೆಯಾಗುತ್ತಿದೆ. ಜನವಸತಿ ಪ್ರದೇಶ ಮತ್ತು ಶಾಲೆ ಇರುವ ರಸ್ತೆಯಲ್ಲಿ ಬ್ರಿವರಿ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು ಹೇಗೆ? ಎಂದು ಜನರು ಪ್ರಶ್ನಿಸಿದ್ದಾರೆ.

ಗೀರ್ ಇಂಟರ್ ನ್ಯಾಷನಲ್ ಸ್ಕೂಲ್, ನ್ಯೂ ಹಾರಿಜನ್ ಸ್ಕೂಲ್ ನಡುವಿನ 500 ಮೀಟರ್ ದೂರದಲ್ಲಿಯೇ ಚಿಕ್ಕ ಬ್ರಿವರಿ ಘಟಕ ಆರಂಭಗೊಳ್ಳುತ್ತಿದೆ. ಇಲ್ಲಿ 500 ಸೀಟುಗಳ ಬ್ರಿವರಿ ಆರಂಭವಾದರೆ ಜನವಸತಿ ಪ್ರದೇಶದಲ್ಲಿರುವವರಿಗೆ ತೊಂದರೆಯಾಗಲಿದೆ.

Residents Opposes For Microbrewery Near School

ಈ ರಸ್ತೆಯಲ್ಲಿ ಈಗಲೇ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲ. ಬ್ರಿವರಿ ಆರಂಭವಾದರೆ ಅಲ್ಲಿಗೆ ಬರುವ ಜನರು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು. ರಸ್ತೆಯಲ್ಲಿ ಈಗಾಗಲೇ ದಟ್ಟಣೆ ಹೆಚ್ಚಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬ್ರಿವರಿ ಆರಂಭವಾದರೆ ಜನವಸತಿ ಪ್ರದೇಶದಲ್ಲಿನ ಜನರಿಗೆ ಶಬ್ಧ, ಪಾರ್ಕಿಂಗ್, ಜನರ ದಟ್ಟಣೆಯಿಂದ ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ, ಬಿಬಿಎಂಪಿ ಇದಕ್ಕೆ ಅನುಮತಿ ನೀಡಬಾರದು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಮಾಯಾರಾವ್ ಎಂಬುವವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಿಬಿಎಂಪಿಗೆ ಈ ಕುರಿತು ದೂರು ನೀಡಿ, ಅದನ್ನು ತಮಗೂ ಕಳಿಸಿ ಎಂದು ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+