Get Updates
Get notified of breaking news, exclusive insights, and must-see stories!

ದೊಡ್ಡಬಳ್ಳಾಪುರ: 5 ತಿಂಗಳ ಭ್ರೂಣವನ್ನು ಚರಂಡಿಗೆ ಎಸೆದ ಪಾಪಿಗಳು

ಬೆಂಗಳೂರು, ಮಾರ್ಚ್ 24: ಇನ್ನು ಅಮ್ಮನ ಅಪ್ಪುಗೆಯನ್ನು ಕಾಣದ, ಕಣ್ಣೇ ತೆರೆಯದ 5 ತಿಂಗಳ ಭ್ರೂಣವನ್ನು ಆಸ್ಪತ್ರೆ ಸಿಬ್ಬಂದಿ ಚರಂಡಿಗೆ ಎಸೆದಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಜನರನ್ನು ರಕ್ಷಣೆ ಮಾಡುವ ವೈದ್ಯರಿಂದಲೇ ಇಂತಹ ಘಟನೆ ನಡೆದಿರುವುದು, ಸಮಾಜಕ್ಕೆ ಒಂದು ಕಳಂಕವಾಗಿದೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಮನಕಲಕುವ ಈ ಧಾರುಣ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆ ತ್ಯಾಜ್ಯ ಹೊರಗೆ ಹೋಗುವ ಕೊಳವೆಯಲ್ಲಿ ಭ್ರೂಣ ಪತ್ತೆಯಾಗಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ 5 ತಿಂಗಳ ಭ್ರೂಣ ಚರಂಡಿ ಪಾಲಾಗಿದೆ.

ಭ್ರೂಣ ಹತ್ಯೆ ನಿಷೇಧ ಇದ್ದರೂ ಸಹ ಕಾನೂನು ಬಾಹಿರವಾಗಿ ವೈದ್ಯರು ಭ್ರೂಣ ಹತ್ಯೆ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಖಾಸಗಿ ಆಸ್ಪತ್ರೆ ಜನನಿಬಿಡ ಪ್ರದೇಶದಲ್ಲಿದ್ದು, ಘಟನೆಯ ಬಗ್ಗೆ ಪೊಲೀಸರು ಮತ್ತು ಆಸ್ಪತ್ರೆ ವೈದ್ಯರ ನಡುವೆ 1 ಗಂಟೆಯ ಕಾಲ ಮಾತುಕತೆ ನಡೆದಿದ್ದು, ಈ ಬಗ್ಗೆ ಅನುಮಾನಗಳು ಸಾರ್ವಜನಿಕರನ್ನ ಕಾಡುತ್ತಿದೆ.

Residents find aborted Fetus in gutter at Doddaballapur

ದೊಡ್ಡಬಳ್ಳಾಪುರ ಡಿವೈಎಸ್ಪಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+