ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ
ಬೆಂಗಳೂರು, ಜನವರಿ 17: ಲಾಲ್‌ಬಾಗ್‌ನಲ್ಲಿ ಶುಕ್ರವಾರ ಜನವರಿ 18ರಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ಮಹಾತ್ಮಗಾಂಧಿಯವರ 150 ನೇ ಜನ್ಮದಿನಾಚರಣೆ ಅಂಗವಾಗಿ ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ಗಾಂಧೀಜಿಯವರಿಗೆ ಅರ್ಪಿಸಲಾಗಿದೆ.
ಸಬರಮತಿ ಆಶ್ರಮ, ರಾಜ್‌ಘಾಟ್ ಸೇರಿದಂತೆ ಅನೇಕ ಆಕರ್ಷಣೆಗಳು ಇರಲಿವೆ. ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಅನೇಕ ವರ್ಣದ ಪುಷ್ಪ ಜೋಡಣೆಯ ನಡುವೆ ಧ್ಯಾನಸ್ಥ ಗಾಂಧಿ ಎಲ್ಲರನ್ನು ಸ್ವಾಗತಿಲಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಪುಷ್ಪಗಳಿಂದ ಸಬರಮತಿ ಆಶ್ರಮ ಇರಲಿದೆ.
1.2 ಲಕ್ಷದಂತೆ 2 ಬಾರಿಗೆ 2.4 ಲಕ್ಷ ಕೆಂಪು ಗುಲಾಬಿ, ಒಂದು ಬಾರಿಗೆ 1.6 ಲಕ್ಷ ಬಿಳಿ ಸೇವಂತಿಗೆ ಹೂವುಗಳಂತೆ ಎರಡು ಬಾರಿಗೆ 3.2 ಲಕ್ಷ ಶ್ವೇತ ವರ್ಷದ ಸೇವಂತಿಗೆ ಹೂವುಗಳು ಹಾಗೂ ಒಂದು ಬಾರಿಗೆ 40 ಸಾವಿರದಂತೆ 2 ಬಾರಿಗೆ 80 ಸಾವಿರ ಕಿತ್ತಳೆ ಬಣ್ಣದ ಗುಲಾಬಿ ಹೂವುಗಳನ್ನು ಬಳಸಳಾಗುವುದು. ಒಟ್ಟು 6.4 ಲಕ್ಷ ಹೂವುಗಳಿಂದ ಸಬರಮತಿ ಆಶ್ರಮ ರೂಪುಗೊಳ್ಳುತ್ತಿದೆ.

ಸಬರಮತಿ ಆಶ್ರಮದ ಪುಷ್ಪ ಮಾದರಿಯ ಎಡಬದಿಗೆ ಹುಬ್ಬಳ್ಳಿಯ ಶಿವಲಿಂಗಪ್ಪ ಬಡಿಗೇರ್ ಅವರು ಸಿರಿಧಾನ್ಯಗಳಲ್ಲಿ ಮೊಮ್ಮಗ ಕನು ಗಾಂಧಿ ಕೂಲು ಹಿಡಿದು ಗಾಂಧಿಯವರನ್ನು ಕರೆದೊಯ್ಯುವ ಸಿರಿಧಾನ್ಯ ಪ್ರತಿಮೆಯನ್ನು ಗಾಜಿನ ಮನೆಯ ಆವರಣದಲ್ಲಿ ಇರಿಸಲಾಗುತ್ತಿದೆ.












Click it and Unblock the Notifications