Darshan Thoogudeepa: 'ದರ್ಶನ್ ಮನೆಗೆ ಬಂದರೆ ಊಟ ಹಾಕ್ತೀವಿ ': ರೇಣುಕಾಸ್ವಾಮಿ ಸ್ವಾಮಿ ತಂದೆ
ಬೆಂಗಳೂರು, ಜುಲೈ 26: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್‌ನನ್ನು ಜೈಲಿನಿಂದ ಹೊರ ತರಲು ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ದರ್ಶನ್ ಕುಟುಂಬ ಹರಸಾಹಸಪಡುತ್ತಿದ್ದರೆ, ಇತ್ತ ಮಗನನ್ನು ಕಳೆದುಕೊಂಡ ರೇಣುಕಾಸ್ವಾಮಿ ಕುಟುಂಬ ಕಣ್ಣೀರಿನಲ್ಲೇ ದಿನ ಕಳೆಯುತ್ತಿದೆ.
ತಮ್ಮ ದುಃಖದ ನಡುವೆಯೂ ದರ್ಶನ್ ಬಗ್ಗೆ ಮಾತನಾಡಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ 'ದರ್ಶನ್ ರಿಲೀಸ್ ಆದಮೇಲೆ ಮನೆಗೆ ಬಂದ್ರೆ ಬೇಡ ಅನ್ನಲ್ಲ. ನಾವು ಜಂಗಮರು ಮನೆಗೆ ಯಾರೇ ಬಂದರೂ ಊಟ ಹಾಕುತ್ತೇವೆ ಎನ್ನುವ ಉದಾರದ ಮಾತುಗಳನ್ನಾಡಿದ್ದಾರೆ.

ನಮ್ಮ ಮನೆಗೆ ಯಾರೂ ಬಂದರೂ ಬರಲಿ. ನಾವು ಜಂಗಮರು. ನಾವು ದ್ವೇಷ ಅಸೂಹೆ ಏನು ಮಾಡುವುದಿಲ್ಲ. ಮನೆ ಬಾಗಿಲಿಗೆ ಬಂದವರನ್ನು ನಿರಾಕರಣೆ ಮಾಡಲು ಆಗುವುದಿಲ್ಲ. ಆ ದಿನದ ಪರಿಸ್ಥಿತಿ ಹೇಗೆ ಇರುತ್ತದೆ ಗೊತ್ತಿಲ್ಲ. ನಾನು ಆ ಬಗ್ಗೆ ಏನೂ ಕಮೆಂಟ್ ಮಾಡುವುದಿಲ್ಲ. ಯಾರೂ ಬಂದರೂ ಬರಲಿ. ಅವರೇ ಇವರೇ ಅನ್ನುವುದಿಲ್ಲ ನನಗೆ. ನಮ್ಮ ಮನೆಗೆ ಯಾರೂ ಬಂದರೂ ಸ್ವಾಗತನೇ.
ನಾವು ಎಲ್ಲರಿಗೂ ಗೌರವ ಕೊಡುತ್ತೇವೆ, ಪ್ರೀತಿ ವಿಶ್ವಾಸದಿಂದ ಇರುತ್ತೇವೆ. ನಮಗೆ ಆಗಿರುವ ಅನ್ಯಾಯಕ್ಕೆ ಕಾನೂನಿಂದ ಏನೂ ನಡೆಯುತ್ತದೆ ನಡೆಯಲಿ. ಯಾರೇ ನಮ್ಮ ಮನೆಗೆ ಬಂದರೂ ಬರಲಿ, ನಮ್ಮ ಅಭ್ಯಂತರ ಇಲ್ಲ. ಮನೆ ಬಾಗಿಲಿಗೆ ದರ್ಶನ್ ಬಂದರೆ ಬನ್ನಿ ಎಂದು ಕರೆಯುತ್ತೇವೆ. ಆ ಪ್ರಸಂಗ ಬಂದಾಗ ನಾವು ಮಾತನಾಡುತ್ತೇವೆ. ಈಗ ಅದರ ಬಗ್ಗೆ ಬೇಡ. ಊಹಾಪೋಹಾ ಅಂತೆ ಕಂತೆಗಳ ಮಾತು ಬೇಡ ಎಂದಿದ್ದಾರೆ.
ಇನ್ನು ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಬೇಗ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಮಾತನಾಡಿದ ರೇಣುಕಾಸ್ವಾಮಿ ಕಾಶಿನಾಥಯ್ಯ, ದರ್ಶನ್ ಪತ್ನಿಯುಂಟು, ಮಂತ್ರಿಯುಂಟು ನಮಗ್ಯಾಕೆ ಆ ವಿಚಾರ?. ಅವರ ಪ್ರಯತ್ನ ಅವರು ಮಾಡುತ್ತಿದ್ದಾರೆ. ಆದರೆ ಸರ್ಕಾರ ಅದೆನೆಲ್ಲಾ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications