ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶುಭ ಸುದ್ದಿ; ಬೆಂಗಳೂರಲ್ಲಿ ಕೋವಿಡ್ ಸೋಂಕು ಗುಣಮುಖ ಹೆಚ್ಚಳ

|
Google Oneindia Kannada News

ಬೆಂಗಳೂರು, ಆಗಸ್ಟ್ 05: ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವುದು ಬೆಂಗಳೂರು ನಗರದಲ್ಲಿ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 63,033. ಸಕ್ರಿಯ ಪ್ರಕರಣಗಳ ಸಂಖ್ಯೆ 34,021. ನಗರದಲ್ಲಿ ಸೋಂಕು ಹರಡುವಿಕೆ ತಡೆಯಲು ಬಿಬಿಎಂಪಿ ಹಲವಾರು ಕ್ರಮ ಕೈಗೊಂಡಿದೆ.

Recommended Video

BS Yediyurappa , Manipal ಆಸ್ಪತ್ರೆಯಿಂದಲೇ ನಿರಂತರ ಕೆಲಸ | Oneindia Kannada

ಬೆಂಗಳೂರು ನಗರದ ಜನರಿಗೆ ಶುಭ ಸುದ್ದಿಯೊಂದಿದೆ. ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಇದುವರೆಗೂ 27,877 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ದೆಹಲಿ ಅಲ್ಲ ಈಗ ಆಂಧ್ರಪ್ರದೇಶ ಮೂರನೇ ಕೊರೊನಾ ಪೀಡಿತ ರಾಜ್ಯ ದೆಹಲಿ ಅಲ್ಲ ಈಗ ಆಂಧ್ರಪ್ರದೇಶ ಮೂರನೇ ಕೊರೊನಾ ಪೀಡಿತ ರಾಜ್ಯ

ಜೂನ್ ತನಕ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿತ್ತು. ಜೂನ್ 10ರ ಬಳಿಕ ಮತ್ತು ಜುಲೈ ತಿಂಗಳಿನಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ 1 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ದಾಖಲಾಗುತ್ತಿದೆ.

ದೆಹಲಿಯಲ್ಲಿ 10 ಸಾವಿರಕ್ಕಿಂತ ಕಡಿಮೆ ಕೋವಿಡ್ ಸಕ್ರಿಯ ಕೇಸ್! ದೆಹಲಿಯಲ್ಲಿ 10 ಸಾವಿರಕ್ಕಿಂತ ಕಡಿಮೆ ಕೋವಿಡ್ ಸಕ್ರಿಯ ಕೇಸ್!

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಂಕಿ-ಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಕಳೆದ ಒಂದು ವಾರದಲ್ಲಿ 15,124 ಜನರು ಗುಣಮುಖರಾಗಿದ್ದಾರೆ.

ಬೆಂಗಳೂರು; 105 ವರ್ಷದ ಕೋವಿಡ್ ಸೋಂಕಿತ ರೋಗಿ ಸಾವು ಬೆಂಗಳೂರು; 105 ವರ್ಷದ ಕೋವಿಡ್ ಸೋಂಕಿತ ರೋಗಿ ಸಾವು

ಬಿಬಿಎಂಪಿಯಿಂದ ಮಾಹಿತಿ

ಬಿಬಿಎಂಪಿಯಿಂದ ಮಾಹಿತಿ

ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಜುಲೈ 29ರಿಂದ ಆಗಸ್ಟ್ 4ರ ವರೆಗಿನ ಅಂಕಿ-ಅಂಶಗಳನ್ನು ನೋಡಿದರೆ ಇದು ತಿಳಿಯಲಿದೆ.

15,124 ಜನರು ಗುಣಮುಖ

15,124 ಜನರು ಗುಣಮುಖ

ಬೆಂಗಳೂರು ನಗರದಲ್ಲಿ ಒಂದು ವಾರದಲ್ಲಿ ಜುಲೈ 29 ರಿಂದ ಆಗಸ್ಟ್ 4ರ ತನಕ 14,212 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆದರೆ, ಗುಣಮುಖರಾದವರ ಸಂಖ್ಯೆ 15,124.

ಬಿಬಿಎಂಪಿ ಆಯುಕ್ತರ ಟ್ವೀಟ್

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ನಗರದ ಒಂದು ವಾರದ ಕೋವಿಡ್ ಅಂಕಿ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ನಗರವೇ ಟಾಪ್

ಬೆಂಗಳೂರು ನಗರವೇ ಟಾಪ್

ಕರ್ನಾಟಕದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,45,830. ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಬೆಂಗಳೂರು ನಗರ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 63,033.

English summary
Total Coronavirus cases in Bengaluru city 63,033. Recovery rate in city hiked in past 7 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X