Apartment Tax: ಅಪಾರ್ಟ್ಮೆಂಟ್ ಹಾಗೂ ವಸತಿ ಸಮುಚ್ಛಯಗಳಿಗೆ ಶಾಕ್‌ ಕೊಟ್ಟ ಕೇಂದ್ರ ಸರ್ಕಾರ!

ಆಸ್ತಿದಾರರು, ಅಪಾರ್ಟ್ಮೆಂಟ್ ಹಾಗೂ ಫ್ಲಾಟ್‌ದಾರರಿಗೆ ಕೇಂದ್ರ ಸರ್ಕಾರವು ಶಾಕ್‌ವೊಂದನ್ನು ನೀಡಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ವಿವಿಧ ವಸ್ತುಗಳ ಹಾಗೂ ಸೇವೆಗಳ ಬೆಲೆ ಏರಿಕೆಯನ್ನು ಮಾಡಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆಯು ಶಾಕ್‌ನ ನಡುವೆಯೇ ಇದೀಗ ಆಸ್ತಿದಾರರಿಗೂ ಸಂಕಷ್ಟ ಎದುರಾಗಿದೆ. ಬಹುಮಹಡಿ ಅಪಾರ್ಟ್ಮೆಂಟ್‌ಗಳಲ್ಲಿ ನಿವಾಸಿಗಳಿಗೆ ಕೇಂದ್ರ ಸರ್ಕಾರದ ನಿರ್ಧಾರ ಇನ್ನಷ್ಟು ಹಣವೆಚ್ಚವನ್ನು ತಂದೊಡ್ಡಲಿದೆ ಎಂದು ಹೇಳಲಾಗಿದೆ.

ಕೇಂದ್ರ ಬಿಜೆಪಿ ಸರ್ಕಾರವು ಇದೀಗ ನಿರ್ವಹಣಾ ಶುಲ್ಕದ ಮೇಲೆಯೂ ಜಿಎಸ್‌ಟಿ ವಿಧಿಸುವುದಕ್ಕೆ ಮುಂದಾಗಿದೆ. ಇದರಿಂದ ಬೆಂಗಳೂರು ಸೇರಿದಂತೆ ದೇಶದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಫ್ಲಾಟ್ ನಿವಾಸಿಗಳಿಗೆ ಸಂಕಷ್ಟ ಎದುರಾಗಲಿದೆ. ಎಲ್ಲಾ ಅಪಾರ್ಟ್ಮೆಂಟ್ ನಿವಾಸಿಗಳು ಪ್ರತಿ ತಿಂಗಳು ಮೈಂಟೆನೆನ್ಸ್ (ನಿರ್ವಹಣಾ ಶುಲ್ಕ) ಪಾವತಿಸಬೇಕು ಎಂದು ಹೇಳಲಾಗಿದೆ. ಈ ಮೂಲಕ ವಸತಿ ಸಮುಚ್ಛಯಗಳಿಗೂ ಜಿಎಸ್‌ಟಿ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

Real Estate Flats and Apartments Residents Central BJP Government Given GST Shock

ಈ ಕ್ರಮಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಅಪಾರ್ಟ್ಮೆಂಟ್ ಮಾಲೀಕರ ಸಂಘದಿಂದ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಅಪಾರ್ಟ್ಮೆಂಟ್‌ಗಳ ನಿರ್ವಹಣೆ ಶುಲ್ಕವು 7,500 ರೂಗಳಿಗಿಂತ ಹೆಚ್ಚಾದ್ದರೆ ಶೇ. 15ರಷ್ಟು ಜಿಎಸ್ಟಿ ಪಾವತಿ ಮಾಡಬೇಕು. ಇಡೀ ಅಪಾರ್ಟ್ಮೆಂಟ್ ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ವಹಿವಾಟು 20 ಲಕ್ಷ ರೂಗಳಿಗಿಂತ ಒಳಗಿದ್ದರೆ, ಜಿಎಸ್ಟಿ ಅನ್ವಯ ಆಗುವುದಿಲ್ಲ ಎಂದೂ ಹೇಳಲಾಗಿದೆ.

ಕೇಂದ್ರ ನರೇಂದ್ರ ಮೋದಿ ಸರ್ಕಾರವು ಅಪಾರ್ಟ್ಮೆಂಟ್‌ಗಳಿಗೆ 7,500ಕ್ಕಿಂತ ಹೆಚ್ಚು ಮಾಸಿಕ ನಿರ್ವಹಣಾ ಶುಲ್ಕವನ್ನು ವಿಧಿಸಲು ನಿರ್ಧರಿಸಿದೆ. ಅಂದರೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಇದರ ಅರ್ಥ ವಸತಿ ಸಮುಚ್ಛಯಗಳಲ್ಲಿ ವಾಸಿಸುವವರು ಇನ್ಮುಂದೆ ವಸತಿ ಸಮುಚ್ಛಯಗಳ ನಿರ್ಹವಣೆಗೂ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

Take a Poll

ಕೇಂದ್ರ ಸರ್ಕಾರದ ಹೊಸ ನಿಯಮಾನುಸಾರ, ಅಪಾರ್ಟ್ಮೆಂಟ್ ನಿರ್ವಹಣಾ ವೆಚ್ಚವು ತಿಂಗಳಿಗೆ 75,000 ಮೀರಿದರೆ ಅಥವಾ ಒಟ್ಟಾರೆ ಅಪಾರ್ಟ್ಮೆಂಟ್‌ಗಳ ಒಟ್ಟು ನಿರ್ವಹಣಾ ವೆಚ್ಚವು ವಾರ್ಷಿಕವಾಗಿ 20 ಲಕ್ಷ ರೂಪಾಯಿ ಮೀರಿದರೆ ಶೇ.18 ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಅಪಾರ್ಟ್ಮೆಂಟ್‌ಗಳಿಗೆ ಸಂಕಷ್ಟ: ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರವು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನ ನಿವಾಸಿಗಳು ಇದ್ದಾರೆ. ಅಲ್ಲದೇ ಕರ್ನಾಟಕದ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಳಗಾವಿ ಭಾಗದಲ್ಲೂ ಅಪಾರ್ಟ್ಮೆಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಶೇ. 18 ಜಿಎಸ್‌ಟಿ ನಿಯಮವು ಯಾವ ಫ್ಲಾಟ್‌ಗಳಿಗೆ ಅನ್ವಯಿಸಲಿದೆ ಎನ್ನುವ ಬಗ್ಗೆ ಎಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎನ್ನುವ ಬಗ್ಗೆಯೂ ಸೂಚನೆ ನೀಡಲಾಗಿದೆ.

ಈ ಫ್ಲಾಟ್‌ಗಳಿಗೆ ಜಿಎಸ್‌ಟಿ ಅನ್ವಯಿಸಲ್ಲ: ಇನ್ನು ಎಲ್ಲಾ ಅಪಾರ್ಟ್ಮೆಂಟ್ ಅಥವಾ ಫ್ಲಾಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಹೇಳಾಗಿದೆ. ಈ ವಿಷಯದಲ್ಲಿ ಗೊಂದಲವಿದ್ದರೆ ಸ್ಥಳೀಯ ವಾಣಿಜ್ಯ ತೆರಿಗೆ ಕಚೇರಿಗೆ ಭೇಟಿ ನೀಡಬಹುದು. ಅಲ್ಲಿ 500 ರೂಪಾಯಿ ಶುಲ್ಕ ಪಾವತಿಸುವ ಮೂಲಕ ತಮ್ಮ ವಿವರ ಪಡೆದುಕೊಳ್ಳಬಹುದು ಎಂದೂ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+