ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಬಂಧಿಸಿದ ಸಿಸಿಬಿ

ಬೆಂಗಳೂರು, ಫೆಬ್ರವರಿ 21: ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿ ಪ್ರಭಾಕರ್ ರೆಡ್ಡಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಲಾಗಿದ್ದು ಅವರನ್ನು ಬಂಧಿಸಲಾಗಿದೆ.

ಪ್ರಭಾಕರ್ ಅವರ ರಾಜರಾಜೇಶ್ವರಿ ನಗರದ ಸಾಂತ್ವನ ನಿಲಯ, ಮೈಲಸಂದ್ರದ ನಿವಾಸ, ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ ಸೇರಿ ಒಟ್ಟು ಐದು ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

ಪ್ರಭಾಕರ್ ಅವರ ಮೇಲೆ ಭೂಕಬಳಿಕೆ ಸೇರಿ ಇನ್ನೂ ಹಲವು ಆರೋಪಗಳು ಇದ್ದವು. ಪ್ರಭಾರ್ ಅವರ ಮೇಲೆ 40 ಕ್ಕೂ ಹೆಚ್ಚು ದೂರುಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು ಎನ್ನಲಾಗಿದೆ.

Real estate businessman Prabhakar Reddy arrested by CCB police

ಪ್ರಭಾಕರ್ ರೆಡ್ಡಿ ಅವರ ಪ್ರಕರಣಗಳು ಸಿಸಿಬಿಗೆ ವರ್ಗಾವಣೆ ಆಗಿತ್ತು, ಹಾಗಾಗಿ ಇಂದು ಸಂಜೆ ವೇಳೆಗೆ ಡಿಸಿಪಿ ಗಿರೀಶ್ ಅವರ ನೇತೃತ್ವದ ಸಿಸಿಬಿ ಪೊಲೀಸರ ತಂಡವು ಪ್ರಭಾಕರ್ ರೆಡ್ಡಿ ಅವರ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಭಾಕರ್ ನಿವಾಸಕ್ಕೆ ದಾಳಿ ಮಾಡಿದ ವೇಳೆ ಅವರ ಕುಟುಂಬವು ಸಿಸಿಬಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+