ಕರ್ನಾಟಕದ ಈ ಜಿಲ್ಲೆಗೆ ರಿಯಲ್ ಎಸ್ಟೇಟ್ ಧಮಾಕ, ಭೂಮಿಗೆ ಚಿನ್ನದ ಬೆಲೆ: ಬೆಂ. ಗ್ರಾಮಾಂತರಕ್ಕೆ ಅದೃಷ್ಟ, ತುಮಕೂರಿಗೆ ಲಾಸ್!
ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳದ ಜೊತೆಗೆ ರಿಯಲ್ ಎಸ್ಟೇಟ್‌ಗೂ ಧಮಾಕ ತರುವ ಮತ್ತೊಂದು ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಈಗಾಗಲೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲಾಗಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ಲಕ್ ಬಂದಿದೆ. ಆದರೆ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಲಾಭ ಪಡೆದುಕೊಳ್ಳಬೇಕು ಎನ್ನುವ ಲೆಕ್ಕಾಚಾರವನ್ನು ಹಾಕಿದ್ದ ತುಮಕೂರಿಗೆ ಈ ವಿಚಾರದಲ್ಲಿ ಭಾರೀ ಹಿನ್ನಡೆ ಆಗಿದೆ. ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಆದ ಮೇಲೆ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಮಾಡಬೇಕು ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮನವಿ ಮಾಡಿದ್ದರು. ಆದರೆ, ಅದರ ಬದಲಾಗಿ ಬೆಂಗಳೂರಿನ ಈ ಭಾಗಕ್ಕೆ ರಿಯಲ್ ಎಸ್ಟೇಟ್ ಭಾಗ್ಯ ಸಿಗುತ್ತಿದೆ. ಅದರ ಸಂಪೂರ್ಣ ವಿವರ ನೋಡೋಣ.
ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳವಾಗುತ್ತಿದೆ. ಇದರೊಂದಿಗೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಹೆಸರನ್ನೂ ಬದಲಾವಣೆ ಮಾಡುವ ಮೂಲಕ ಹೊಸ ಬದಲಾವಣೆಗೆ ಸರ್ಕಾರ ಮುಂದಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ ನಂತರ ಇದೀಗ ಬೆಂಗಳೂರು ಗ್ರಾಮಾಂತರ ಪ್ರದೇಶವನ್ನು ಬೆಂಗಳೂರು ಉತ್ತರ ಎಂದು ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ ಮೇಲೆ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಹೊಸ ಕಳೆ ಬಂದಿದೆ. ರಿಯಲ್ ಎಸ್ಟೇಟ್ ಬೂಸ್ಟ್ ಆಗಿದ್ದು. ಭೂಮಿ, ಸೈಟು ಹಾಗೂ ಮನೆಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಸರ್ಕಾರ ಇದೀಗ ಇದರ ಮುಂದುವರಿದ ಭಾಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು ಅದರಲ್ಲಿ ಇದಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ಗ್ರಾಮಾಂತರದ ಪ್ರಮುಖ ಪ್ರದೇಶ: ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ಭಾಗದಲ್ಲಿ ಈಗಾಗಲೇ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಬೆಳವಣಿಗೆ ಇದೆ. ಈ ಭಾಗದಲ್ಲಿ ಭೂಮಿಗೆ ಈಗಾಗಲೇ ಬಂಗಾರದ ಬೆಲೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ದೇವನಹಳ್ಳಿಯಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದು. ಈ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಯಾದ ಮೇಲೆ ಸಹಜವಾಗಿಯೇ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಇದೀಗ ಸಂಪೂರ್ಣವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಬೆಂಗಳೂರು ಉತ್ತರ ಕನಸು ಕಾಣುತ್ತಿದ್ದ ತುಮಕೂರು ಜಿಲ್ಲೆಗೆ ನಿರಾಸೆ ಮೂಡಿದೆ.
ತುಮಕೂರಿಗೆ ಹಿನ್ನಡೆ: ಇನ್ನು ಬೆಂಗಳೂರಿನ ಬ್ರ್ಯಾಂಡ್‌ವ್ಯಾಲ್ಯೂ ಪಡೆಯುವ ಕನಸು ಕಾಣುತ್ತಿದ್ದ ತುಮಕೂರು ಜಿಲ್ಲೆಗೆ ಭಾರೀ ನಿರಾಸೆ ಎದುರಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಭಾಗದಲ್ಲಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಪ್ರಸ್ತಾವನೆ ಇತ್ತು. ಆದರೆ ಅದೂ ಆಗಲಿಲ್ಲ. ಆ ಮೇಲೆ ಮೆಟ್ರೋ ವಿಸ್ತರಣೆ ಮಾಡುವ ಪ್ರಸ್ತಾವನೆ ಆಗಿತ್ತು. ಅದು ಸಹ ಸಾಧ್ಯವಾಗಲಿಲ್ಲ. ಆದರೆ, ಇದೀಗ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಮಾಡುವ ಪ್ರಸ್ತಾವನೆಗೂ ಹಿನ್ನಡೆ ಆಗಿದೆ.












Click it and Unblock the Notifications