RCB vs SRH: ಪಂದ್ಯ ನೋಡಲು ವಾಹನ ತೆಗೆದುಕೊಂಡು ಹೋಗ್ತಾ ಇದ್ದೀರಾ? ಈ ಸುದ್ದಿ ನೋಡಿ
ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ಪಂದ್ಯ ನಡೆಯಲಿದ್ದು, ಈ ವೇಳೆ ಪಂದ್ಯ ವೀಕ್ಷಣೆಗಾಗಿ ಬರುವವರು ತಮ್ಮ ವಾಹನಗಳನ್ನು ಎಲ್ಲೆಲ್ಲಿ ಪಾರ್ಕಿಂಗ್ ಮಾಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 15) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಐಪಿಎಲ್ ಪಂದ್ಯ ಇಂದು ನಡೆಯಲಿದ್ದು, ಈ ವೇಳೆ ಟ್ರಾಫಿಕ್ ಸಮಸ್ಯೆಯನ್ನು ಸರಿದೂಗಿಸಲು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದು, ಕೆಲವು ಮಾರ್ಗಸೂಚಿಗಳ್ನು ಬಿಡುಗಡೆ ಮಾಡಿದ್ದಾರೆ.

ಪಂದ್ಯಕ್ಕೆ ವೀಕ್ಷಿಸಲು ಹೋಗುವವರ ವಾಹನ ನಿಲುಗಡೆಗೆ ಎಲ್ಲೆಲ್ಲಿ ಅವಕಾಶ ನೀಡಲಾಗಿದೆ ಹಾಗೂ ಎಲ್ಲೆಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎನ್ನುವ ಮಾಹಿತಿಯನ್ನು ಟ್ರಾಫಿಕ್ ಪೊಲೀಸರು ಇಲ್ಲಿ ತಿಳಿಸಿದ್ದಾರೆ ಗಮನಿಸಿ. ಈ ಸಂಚಾರ ನಿರ್ಬಂಧ, ಪಾರ್ಕಿಂಗ್ ನಿರ್ಬಂಧ ಹಾಗೂ ಪರ್ಯಾಯ ವಾಹನ ನಿಲುಗಡೆ ಸ್ಥಳಗಳ ಬಗ್ಗೆ ಮಾರ್ಗಸೂಚಿ ಇಂದು (ಏಪ್ರಿಲ್ 15) ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಜಾರಿಯಲ್ಲಿರಲಿದೆ.
ಎಲ್ಲೆಲ್ಲಿ ಪಾರ್ಕಿಂಗ್ ಮಾಡಬಹದು?: ಪಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಗ್ರೌಂಡ್, ಯುಬಿ ಸಿಟಿ ಪಾರ್ಕಿಂಗ್, ಬಿಎಂಟಿಸಿ ಟಿಟಿಎಂಸಿ ಶಿವಾಜಿನಗರ 1 ನೇ ಮಹಡಿ ಮತ್ತು ಹಳೆಯ ಕೆಜಿಐಡಿ ಕಟ್ಟಡ, ಕಿಂಗ್ಸ್ ರಸ್ತೆ.
ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?: ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ ಮತ್ತು ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಅಂಬೇಡ್ಕರ್ ವೇದಿಕೆ ರಸ್ತೆ, ಟ್ರಿನಿಟಿ ಜೆಎನ್, ಲಾವೆಲ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ, ನೃಪತುಂಗ ರಸ್ತೆ.
ಆರ್‌ಸಿಬಿ ಅಂಕಗಳ ವಿವರ: ಮ್ಯಾಚ್ ವಿವರ ನೋಡುವುದಾದರೆ, ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ ಒಂದೇ ಒಂದು ಗೆದ್ದು, 5ರಲ್ಲಿ ಸೋಲನುಭವಿಸಿದೆ. ಈ ಮೂಲಕ ಆರ್‌ಸಿಬಿ 2 ಪಾಯಿಂಟ್ ಗಳಿಸಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿದೆ. ಇದೀಗ ಇಂದು (ಏಪ್ರಿಲ್ 15) 7ನೇ ಪಂದ್ಯವನ್ನು ಎಸ್‌ಆರ್‌ಎಚ್ ವಿರುದ್ಧ ಸೆಣಸಲಿದ್ದು, ಇದರಲ್ಲಾದರೂ ಗೆದ್ದು ಸೋಲಿನ ಗಾಯವನ್ನು ಸ್ವಲ್ಪನಾದ್ರೂ ವಾಸಿ ಮಾಡಿಕೊಳ್ಳಲಿದೆಯಾ ಎಂದು ಕಾದುನೋಡಬೇಕಿದೆ.
ಎಸ್‌ಆರ್‌ಎಚ್ ಅಂಕಗಳ ವಿವರ: ಇನ್ನು ಎಸ್‌ಆರ್‌ಎಚ್ ತಂಡ ಇದುವರೆಗೂ ಆಡಿದ 5 ಪಂದ್ಯಗಳಲ್ಲಿ 3 ಗೆದ್ದು, ಇನ್ನೆರಡರಲ್ಲಿ ಸೋಲನುಭವಿಸಿದೆ. ಈ ಮೂಲಕ 6 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಇಂದು 6ನೇ ಪಂದ್ಯವನ್ನು ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಆಡಲಿದೆ.












Click it and Unblock the Notifications