ಕತ್ತರಿಸಿಹೋಗಿದ್ದ ಕೈ ಹಾಸ್ಮಾಟ್ ಆಸ್ಪತ್ರೆಯಲ್ಲಿ ಮತ್ತೆ ಜೋಡಣೆ
ಬೆಂಗಳೂರು, ಫೆಬ್ರವರಿ 23 : ಗೌರಿಬಿದನೂರು ತಾಲೂಕಿನಲ್ಲಿ ಗುರುವಾರ ರಾತ್ರಿ ನಡೆದ ಜಗಳದಲ್ಲಿ ಎಡಗೈ ಕತ್ತರಿಸಿ ಹೋಗಿದ್ದ ರವಿಕುಮಾರ್ ಅವರಿಗೆ ಇಲ್ಲಿನ ಹಾಸ್ಮಾಟ್ ಆಸ್ಪತ್ರೆಯಲ್ಲಿ ಶುಕ್ರವಾರ ಮತ್ತೆ ಕೈ ಜೋಡಣೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಸೀರೆ ಹಂಚಿಕೆ ಮಾಡಿದ ರಾಜಕೀಯ ಕಾರಣಕ್ಕೆ ಕೈ ಕತ್ತರಿಸಿದ್ದಲ್ಲ ಎಂಬ ಹೊಸ ಸುದ್ದಿ ಚಾಲ್ತಿಯಲ್ಲಿದೆ. ಕೈ ಕತ್ತರಿಸಿದ್ದರ ಹಿಂದೆ ಲೋಕೇಶ್ ನ ವೈಯಕ್ತಿಕ ದ್ವೇಷ ಇತ್ತು. ಹುಡುಗಿ ವಿಚಾರವಾಗಿ ಇದ್ದ ಅಸಮಾಧಾನವನ್ನು ರವಿಕುಮಾರ್ ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಮೂಲಕ ತೀರಿಸಿಕೊಳ್ಳಲಾಯಿತು ಎಂಬ ಮಾತು ಹರಿದಾಡುತ್ತಿದೆ.

ರವಿಕುಮಾರ್ ಸಂಬಂಧಿಕರ ಹುಡಗಿಯನ್ನು ಮದುವೆಯಾಗುವುದಕ್ಕೆ ಲೋಕೇಶ್ ಇಷ್ಟಪಟ್ಟಿದ್ದ. ಈ ವೇಳೆ ಹುಡುಗಿಗೆ ಇನ್ನೂ ಮದುವೆ ಮಾಡುವ ವಯಸಾಗಿಲ್ಲ. ಹಾಗಾಗಿ ಹುಡುಗಿಯನ್ನು ಕೊಡುವುದಿಲ್ಲ ಎಂದು ರವಿಕುಮಾರ್ ಹೇಳಿದ್ದರು. ಈ ಘಟನೆಯಿಂದ ಲೋಕೇಶ್ ಆಕ್ರೋಶಗೊಂಡಿದ್ದ. ಗುರುವಾರ ಸಂಜೆ ತನ್ನ ಆಕ್ರೋಶವನ್ನು ಆತ ತೀರಿಸಿಕೊಂಡಿದ್ದಾನೆ ಎಂದು ವರದಿಗಳು ಬರುತ್ತಿವೆ.












Click it and Unblock the Notifications