ಜಯನಗರ ಕಾಂಪ್ಲೆಕ್ಸ್ ಆರಂಭಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಜುಲೈ 26: ಉದ್ಘಾಟನೆಯಾಗಿ ಎರಡು ವರ್ಷವಾದರೂ ತೆರೆಯದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ - ತೆರೆಯಲು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಅವರ 'ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ' ಜುಲೈ 29ರಂದು ಧರಣಿ ಹಮ್ಮಿಕೊಂಡಿದೆ.
ಸಾರ್ವಜನಿಕ ಆಸ್ತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಇದೇ ನಿಟ್ಟಿನಲ್ಲಿ "ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯು ಸರ್ಕಾರಕ್ಕೆ ತಕ್ಷಣವೇ ನೂತನ ಕಾಂಪ್ಲೆಕ್ಸ್ ಬ್ಲಾಕ್ ಅನ್ನು ಬಾಡಿಗೆಗೆ ನೀಡಿ ಈ ಕೂಡಲೇ ಸಾರ್ವಜನಿಕ ಉಪಯೋಗಕ್ಕೆ ತೆರೆಯಬೇಕು ಮತ್ತು ಈಗ ಸರ್ಕಾರಕ್ಕೆ ತಿಂಗಳಿಗೆ ಆಗುತ್ತಿರುವ ಕನಿಷ್ಟ ರೂ. 60 ಲಕ್ಷ ಬಾಡಿಗೆ ನಷ್ಟವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ಇದೇ ಶನಿವಾರ, 29-07-2017, ಬೆಳಿಗ್ಗೆ 11ಕ್ಕೆ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಶಾಂತಿಯುತ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಯನಗರದ ಮತ್ತು ಸುತ್ತಮುತ್ತಲ ಬಡಾವಣೆಗಳ ಜನರು ಈ ಧರಣಿಯಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಸಾರ್ವಜನಿಕ ಆಸ್ತಿಯನ್ನು ಉಳಿಸಲು ಮುಂದಾಗಬೇಕೆಂದು ವೇದಿಕೆ ವಿನಂತಿಸುತ್ತದೆ.
ಏಷ್ಯಾದಲ್ಲಿಯೇ ಬೃಹತ್ ಯೋಜಿತ ಬಡಾವಣೆಯಾಗಿ ನಿರ್ಮಾಣವಾದ ಜಯನಗರಕ್ಕೆ ಹಾಗೂ ಬೆಂಗಳೂರು ನಗರದ ಪ್ರತಿಷ್ಠೆಯ ಸಂಕೇತವಾಗಿದ್ದ "ಜಯನಗರ ಶಾಪಿಂಗ್ ಕಾಂಪ್ಲೆಕ್ಸ್" ಅನೇಕ ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಆದರೂ ಕೂಡ ಇದು ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿಲ್ಲ.

ಪಾರ್ಕಿಂಗ್ ಸಮಸ್ಯೆಯಿಂದ ಜಯನಗರ ಹಾಗೂ ಬೆಂಗಳೂರಿನ ಜನತೆ ಪರದಾಡುತ್ತಿದ್ದಾರೆ, ನೂತನವಾಗಿ ನಿರ್ಮಿಸಿರುವ ಶಾಪಿಂಗ್ ಕಾಂಪ್ಲೆಕ್ಸ್ ಬ್ಲಾಕ್ ತೆರೆದರೆ ಸ್ವಲ್ಪಮಟ್ಟಿಗಾದರೂ ಈ ಸಮಸ್ಯೆ ಬಗೆಹರಿಯಬಹುದು. ಆದರೂ ಏತಕ್ಕಾಗಿ ಸಾರ್ವಜನಿಕರಿಗೆ ತೆರೆದಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಈಗ ಕಟ್ಟಿರುವ ಕಾಂಪ್ಲೆಕ್ಸ್‌ನ ಬಾಡಿಗೆಯಿಂದ ಬರಬೇಕಿದ್ದ ವಾರ್ಷಿಕ ಅಂದಾಜು ರೂ.7 ಕೋಟಿಯಷ್ಟು ಆದಾಯ ನಷ್ಟವುಂಟಾಗುತ್ತಿದ್ದು, ಜನತೆಯ ತೆರಿಗೆ ಹಣವೂ ಪೋಲಾಗುತ್ತಿರುವುದಲ್ಲದೆ ಅವರ ಬವಣೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್ ಉದ್ಘಾಟನೆಯಾದರೂ ಜನತೆಗೆ ಸಮರ್ಪಿಸಲು ಸರಕಾರಕ್ಕೇ ಏಕೆ ಸಾಧ್ಯವಾಗುತ್ತಿಲ್ಲ? ನಮ್ಮನ್ನು ಪ್ರತಿನಿಧಿಸಬೇಕಾದ ಪಾಲಿಕೆ ಸದಸ್ಯರು, ಶಾಸಕರು, ಎಂಪಿಗಳು ಏನು ಮಾಡುತ್ತಿದ್ದಾರೆ? ಈ ಉದಾಸೀನತೆಯನ್ನು ಜಯನಗರದ ಜನತೆ ಇನ್ನೆಷ್ಟು ಕಾಲ ಸಹಿಸಬೇಕು?
ಪುಟ್ಟಣ್ಣ ಕಣಗಾಲ ಚಿತ್ರಮಂದಿರ: ಇನ್ನು ನೂತನವಾಗಿ ನಿರ್ಮಿಸುವಾಗ ಪುಟ್ಟಣ್ಣ ಚಿತ್ರಮಂದಿರವನ್ನು ಪುನರ್ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆದರೆ ಈ ನೂತನ ಬ್ಲಾಕ್ ತೆರೆಯದೆ, ಎರಡನೇ ಹಂತದ ಕಾಮಗಾರಿಗಳು ಆರಂಭವಾಗಿ ಪೂರ್ಣವಾಗದೆ "ಪುಟ್ಟಣ್ಣ ಕಣಗಾಲ ಚಿತ್ರಮಂದಿರ" ವೂ ಮತ್ತೆ ಆರಂಭವಾಗುವುದಿಲ್ಲ. ಯಾಕೆಂದರೆ ಚಿತ್ರಮಂದಿರವು ಎರಡನೇ ಹಂತದ ಕಾಮಗಾರಿಯಲ್ಲಿದೆ.
ಹಾಗೆಯೇ, ಈಗ ಉದ್ಘಾಟನೆಗೊಂಡು ಎರಡು ವರ್ಷ ಆಗುತ್ತ ಬಂದಿರುವ ಈ ನೂತನ ಭಾಗ ಆರಂಭವಾಗದೆ, ಸದ್ಯ ನಿರ್ವಹಣೆಯಿಲ್ಲದೆ ಸೊರಗಿರುವ ಉಳಿದ ಭಾಗಗಳಲ್ಲಿ ರಿಪೇರಿ ಅಥವಾ ಇನ್ನಷ್ಟು ಸೌಲಭ್ಯಗಳೊಂದಿಗೆ ಉತ್ತಮ ಮಟ್ಟದ ವಾಣಿಜ್ಯ ಸಂಕೀರ್ಣ ನಿರ್ಮಾಣವೂ ಸಾಧ್ಯವಾಗುವುದಿಲ್ಲ. ಜಯನಗರ ಹಾಗು ಸುತ್ತಲಿನ ಬಡಾವಣೆಗಳಿಗೆ ಉತ್ತಮ ಮಟ್ಟದ ಶಾಪಿಂಗ್ ಕಾಂಪ್ಲೆಕ್ಸಿನ ಅವಶ್ಯಕತೆಯಿದೆ. ಆದರೆ ನೂತನ ಬ್ಲಾಕ್ ಆರಂಭವಾಗದೆ, ಇದು ಸಾಧ್ಯವಾಗುವುದಿಲ್ಲ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications