ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಕವಿ ಶಿವರುದ್ರಪ್ಪ ಅವರಿಗೆ ಅಂತಿಮ ನಮನ

By Mahesh
|
Google Oneindia Kannada News

ಬೆಂಗಳೂರು, ಡಿ.26: 'ಭಾವಗೀತೆಗಳೇ ಜಿಎಸ್ ಶಿವರುದ್ರಪ್ಪ ಅವರಿಗೆ ಚರಮ ಗೀತೆಯಾಗಿತ್ತು. ಅಲ್ಲಿ ವೇದ ಘೋಷಗಳಿಗಿಂತ ಕವಿ ಬರೆದ ಹೃದಯ ತಟ್ಟಿದ ಸಾಲುಗಳ ಗಾಯನವಿತ್ತು. ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಪಟ್ಟ ಶಿಷ್ಯ ಜಿ.ಎಸ್. ಶಿವರುದ್ರಪ್ಪ ಅವರ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಇಂದು ನಡೆದಿದ್ದು ಹೀಗೆ.

ಯಾವುದೇ ಸಂಪ್ರದಾಯ, ಪೂಜೆ-ಪುನಸ್ಕಾರಗಳಿಗೆ ಅವಕಾಶವೇ ಇರಲಿಲ್ಲ. ಅವರು ರಚಿಸಿದ ಕವಿತೆ ಮತ್ತು ಹಾಡುಗಳ ಮೂಲಕವೇ ಅವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಯಾವುದೇ ಸಂಪ್ರದಾಯ, ಪೂಜೆ-ಪುನಸ್ಕಾರಗಳಿಗೆ ಅವಕಾಶವೇ ಇರಲಿಲ್ಲ. ಅವರು ರಚಿಸಿದ ಕವಿತೆ ಮತ್ತು ಹಾಡುಗಳ ಮೂಲಕವೇ ಅವರಿಗೆ ಅಂತಿಮ ನಮನ ಸಲ್ಲಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದ ಆವರಣದಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅವರ ಪುತ್ರ ಜಿಎಸ್ ಜಯದೇವ್ ಅವರು ಜಿಎಸ್ ಎಸ್ ಅವರ ಆಶಯದಂತೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.[ಶಿವರುದ್ರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಜಯದೇವ್]

ಗುರುವಾರ ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಅವರ ಬನಶಂಕರಿ ಎರಡನೆ ಹಂತದಲ್ಲಿರುವ ನಿವಾಸಕ್ಕೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿಯೂ ಕೂಡ ಅವರು ರಚಿಸಿದ ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂಬ ಗೀತೆ ಮೂಲಕ ಮನೆಯಿಂದ ಸಾಹಿತ್ಯ ಪರಿಷತ್ ಬೀಳ್ಕೊಡಲಾಯಿತು. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗಿತ್ತು.[ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು]

ರಾಷ್ಟ್ರಕವಿ ಕುವೆಂಪು ಅವರು ಚಿಕ್ಕಮಗಳೂರಿನ ಅಳಿಯ ಆಗಿದ್ದರು. ಜಿ.ಎಸ್.ಎಸ್.ಕೂಡ ಚಿಕ್ಕಮಗಳೂರಿನ ಅಳಿಯ ಆಗಿದ್ದಾರೆ. ಚಿಕ್ಕಮಗಳೂರಿಗೂ, ರಾಷ್ಟ್ರಕವಿಗಳಿಗೂ ಅವಿನಾಭಾವ ಸಂಬಂಧವಿದೆ. ಜಿ.ಎಸ್.ಎಸ್.ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ವೈಎಸ್ ವಿ ದತ್ತ ಅವರು ಹೇಳಿದರು.[ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ವಿಧಿವಶ]

ರವೀಂದ್ರ ಕಲಾಕ್ಷೇತ್ರದಲ್ಲಿ ಗೀತ ಗಾಯನದ ಮೂಲಕ ನುಡಿ-ನಮನ ಸಲ್ಲಿಸಲಾಯಿತು. ಗಾಯನ ಕಾರ್ಯಕ್ರಮದಲ್ಲಿ ಉಪಾಸ ಮೋಹನ್, ನಾಗಚಂದ್ರಿಕಾ ಭಟ್, ಕಸ್ತೂರಿ ಶಂಕರ್, ಬಿ.ಕೆ.ಸುಮಿತ್ರಾ, ಶಿವಮೊಗ್ಗ ಸುಬ್ಬಣ್ಣ, ಕಿಕ್ಕೇರಿ ಕೃಷ್ಣಮೂರ್ತಿ, ರಾಜಾರಾಂ ಮೊದಲಾದವರು ಪಾಲ್ಗೊಂಡಿದ್ದರು.[ಜಿ.ಎಸ್ ಶಿವರುದ್ರಪ್ಪ ನಿಧನಕ್ಕೆ ಗಣ್ಯರ ಕಂಬನಿ]

ಕನ್ನಡಿಗರ ಕೋಟಿ ನಮನ ಎಂಬ ವಾಹನದಲ್ಲಿ ರವೀಂದ್ರ ಕಲಾಕ್ಷೇತ್ರದಿಂದ ಮೈಸೂರು ರಸ್ತೆ ಮಾರ್ಗವಾಗಿ ಜ್ಞಾನಭಾರತಿಯ ಕಲಾಗ್ರಾಮಕ್ಕೆ ಪಾರ್ಥಿವ ಶರೀರದ ಮೆರವಣಿಗೆ ಜರುಗಿತು. ದಾರಿಯುದ್ದಕ್ಕೂ ಕನ್ನಡ ಗೀತ ಗಾಯನಗಳು ಎಡಬಿಡದೆ ಮೊಳಗಿದವು. [ಭಾವ ಜೀವಿಯ ಕೈ ಹಿಡಿದ ಪ್ರೀತಿಯ ಸೆಲೆ!]

ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್, ಎಚ್.ಎಂ.ರೇವಣ್ಣ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಸಾಹಿತ್ಯ ಪ್ರೇಮಿಗಳು, ಚಲನಚಿತ್ರ ಮತ್ತು ಕಿರುತೆರೆಯ ನಟ-ನಟಿಯರು ಪಾಲ್ಗೊಂಡಿದ್ದರು.

ಗಣ್ಯರಿಂದ ನಮನ

ಗಣ್ಯರಿಂದ ನಮನ

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು, ನಿಸಾರ್ ಅಹಮದ್, ಚನ್ನವೀರ ಕಣವಿ, ಬಿಎಸ್‌ಆರ್ ಕಾಂಗ್ರೆಸ್‌ನ ಸಂಸ್ಥಾಪಕ, ಮಾಜಿ ಸಚಿವ ಶ್ರೀರಾಮುಲು, ಕನ್ನಡ ಸಾಹಿತ್ಯ ಪರಿಷತ್ ಆಧ್ಯಕ್ಷ ಪುಂಡಲೀಕ ಹಾಲಂಬಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಚ್.ಎಸ್.ವೆಂಕಟೇಶಮೂರ್ತಿ, ಶಾಸಕ ವೈ.ಎಸ್.ವಿ.ದತ್ತ, ಶೂದ್ರ ಶ್ರೀನಿವಾಸ್, ಮಾಜಿ ಗೃಹ ಸಚಿವ ಆರ್ ಅಶೋಕ್ ಮುಂತಾದವರು ಅಂತಿಮ ನಮನ ಸಲ್ಲಿಸಿದರು.

ಸಾರ್ವಜನಿಕರಿಂದ ದರ್ಶನ

ಸಾರ್ವಜನಿಕರಿಂದ ದರ್ಶನ

ಸಾರ್ವಜನಿಕರು ಗುರುವಾರ ಬೆಳಗ್ಗೆ ಅಪ್ತಕವಿ ಜಿಎಸ್ ಶಿವರುದ್ರಪ್ಪ ಅವರ ಅಂತಿಮ ದರ್ಶನ ಪಡೆದರು.

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಎದೆ ತುಂಬಿ ಹಾಡಿದೆನು ಅಂದು ನಾನು...ಕಾಣದ ಕಡಲಿಗೆ ಹಂಬಲಿಸಿದೆ ಮನ.. ಆಕಾಶದ ನೀಲಿಯಲ್ಲಿ ಚಂದ್ರ ತಾರೆ...ಹಣತೆ ಹಚ್ಚುವೆನು ನಾನು..ಸಂಜೆ ಬಾನಿನಂಚಿನಲ್ಲಿ....ಎಲ್ಲೋ ಹುಡುಕಿದೆ ಇಲ್ಲದ ದೇವರ.. ದೀಪವಿರದ ದಾರಿಯಲ್ಲಿ..ಯಾವ ರಾಗಕೊ ಏನೋ.. ಹರಿದೆ ಋಣ.. ಒಂದೇ ಎರಡೇ ಭಾವ ಲಹರಿಯ ಮಹಾಪೂರವೇ ಇಂದು ಹರಿದು ಬಂದಿತ್ತು.

ಅಂತ್ಯ ಸಂಸ್ಕಾರ ಬಗ್ಗೆ ಜಿಎಸ್ಎಸ್

ಅಂತ್ಯ ಸಂಸ್ಕಾರ ಬಗ್ಗೆ ಜಿಎಸ್ಎಸ್

ನಾನು ಯಾವ ಜಾತಿಗೂ ಸೇರಿದವನಲ್ಲ. ನಾನು ಕರ್ನಾಟಕದ ಆಸ್ತಿ. ಹಾಗಾಗಿ ನನ್ನ ಅಂತ್ಯಕ್ರಿಯೆಯಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನ ನಡೆಸಬಾರದು. ನನ್ನನ್ನು ಮಣ್ಣು ಮಾಡಬಾರದು. ಚಿತೆಗೇರಿಸಿ ಅಗ್ನಿ ಸ್ಪರ್ಷ ಮಾಡಬೇಕು. ಒಂದು ಹಿಡಿ ಚಿತಾಭಸ್ಮವನ್ನು ಕಾವೇರಿಯಲ್ಲಿ ಬಿಡಿ. ನನ್ನ ಹೆಸರಲ್ಲಿ ಸರ್ಕಾರವಾಗಲೀ ಅಥವಾ ಕುಟುಂಬವಾಗಲೀ ಆಡಂಬರದ ಕಾರ್ಯಕ್ರಮ ಮತ್ತು ಸ್ಮಾರಕ ನಿರ್ಮಾಣ ಮಾಡಬಾರದು.- ಜಿ.ಎಸ್ ಶಿವರುದ್ರಪ್ಪ ಅವರು ಅಂತಿಮ ಪತ್ತ್ರದಲ್ಲಿ ಬರೆದಿದ್ದರು.

ಆತ್ಮೀಯ ನಮನ

ಆತ್ಮೀಯ ನಮನ

ಆಪ್ತಕವಿ ಜಿಎಸ್ಎಸ್ ಗೆ ಆತ್ಮೀಯ ನಮನ

English summary
The last rites of noted Kannada poet, Rashtrakavi Dr G.S. Shivarudrappa, held at Kala Grama on the Jnanabharathi campus on Thursday evening. Before that public allowed to pay last respect the legendary poet in Ravindra Kalakshetra, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X