Get Updates
Get notified of breaking news, exclusive insights, and must-see stories!

Rameshwaram Cafe Blast: ಸಂಸದ ತೇಜಸ್ವಿ ಸೂರ್ಯಾಗೆ ರಾಮೇಶ್ವರಂ ಕೆಫೆ ಮಾಲೀಕರು ಹೇಳಿದ್ದೇನು?

ಬೆಂಗಳೂರು, ಮಾರ್ಚ್ 01: ಬೆಂಗಳೂರಿನ ಹೆಚ್‌ಎಎಲ್ ಠಾಣಾ ವ್ಯಾಪ್ತಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿ ಕನಿಷ್ಠ ಐವರು ಗಾಯಗೊಂಡಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಮಧ್ಯಾಹ್ನ ಸರಿಯಾಗಿ ಜನರು ಊಟಕ್ಕೆ ಬಂದಿದ್ದ ಸಮಯದಲ್ಲಿಯೇ ಘಟನೆ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಜನರು ಕಿಕ್ಕಿರಿದು ತುಂಬಿದ್ದ ಮಧ್ಯಾಹ್ನ 1:30 ರ ಸುಮಾರಿಗೆ ಘಟನೆ ಸಂಭವಿಸಿದೆ. ರಾಮೇಶ್ವರಂ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಿಸಿ ದುರಂತ ಸಂಭವಿಸಿದೆ ಎಂದು ಅನೇಕರು ಹೇಳಿದ್ದು. ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

Rameshwaram Cafe blast: MP Tejasvi Surya Questions CM Siddaramaiah

ರಾಮೇಶ್ವರಂ ಕೆಫೆಯಲ್ಲಿ ಸಿಲಿಂಡರ್ ಸ್ಫೋಟವಾಗಿರುವ ಬಗ್ಗೆ ನಮಗೆ ಕರೆ ಬಂದಿತ್ತು. ಕೂಡಲೇ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿತು. ಸಿಲಿಂಡರ್ ಸ್ಫೋಟವಾಗಿರಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಆದರೆ, ಅದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಸಣ್ಣ ಸ್ಫೋಟವಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದ್ದೇವೆ. ಮಧ್ಯಾಹ್ನ 1.30ರಿಂದ 2ರ ನಡುವೆ ಈ ಘಟನೆ ನಡೆದಿದೆ. ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದು ಸಿಲಿಂಡರ್ ಸ್ಟೋಟವಲ್ಲ!

ಘಟನೆ ನಡೆದ ಕೆಲವು ಗಂಟೆಗಳ ಬಳಿಕ ಇದರ ಕುರಿತು ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಸಿಲಿಂಡರ್ ಸ್ಪೋಟವಾಗಿಲ್ಲ ಎಂಬುದನ್ನು ಹೇಳಿದ್ದಾರೆ. ಅವರು ರಾಮೇಶ್ವರಂ ಕೆಫೆ ಸಂಸ್ಥಾಪಕ ನಾಗರಾಜ್ ಅವರ ಜೊತೆಗೆ ಫೋನಿನಲ್ಲಿ ಮಾತನಾಡಿರುವುದಾಗಿಯೂ, ಅವರು ಇದು ಸಿಲಿಂಡರ್ ಸ್ಪೋಟ ಅಲ್ಲವೆಂದು ಹೇಳಿರುವುದಾಗಿಯೂ ಟ್ವೀಟ್ ಮಾಡಿದ್ದಾರೆ.

Rameshwaram Cafe blast: MP Tejasvi Surya Questions CM Siddaramaiah

"ರಾಮೇಶ್ವರಂ ಕೆಫೆ ಸಂಸ್ಥಾಪಕ ಶ್ರೀ ನಾಗರಾಜ್ ಅವರ ರೆಸ್ಟೋರೆಂಟ್‌ನಲ್ಲಿ ಸ್ಫೋಟದ ಬಗ್ಗೆ ಮಾತನಾಡಿದೆ. ಗ್ರಾಹಕರು ಬಿಟ್ಟು ಹೋಗಿದ್ದ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದೆ. ಯಾವುದೇ ಸಿಲಿಂಡರ್ ಸ್ಫೋಟಗೊಂಡಿಲ್ಲ ಎಂದು ಅವರು ನನಗೆ ಮಾಹಿತಿ ನೀಡಿದರು. ಅವರ ಉದ್ಯೋಗಿಯೊಬ್ಬರು ಗಾಯಗೊಂಡಿದ್ದಾರೆ. ಇದು ಬಾಂಬ್ ಸ್ಫೋಟದ ಸ್ಪಷ್ಟ ಪ್ರಕರಣ ಎಂದು ತೋರುತ್ತದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಉತ್ತರ ನೀಡಬೇಕು" ಎಂದು ಆಗ್ರಹಿಸಿದ್ದಾರೆ.

ರಾಮೇಶ್ವರಂ ಕೆಫೆಯ ಮಾಲೀಕ ದಿವ್ಯಾ ರಾಘವೇಂದ್ರ ರಾವ್, "ನಾವು ನಮ್ಮ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರಿಗೆ ನೀಡಿದ್ದೇವೆ. ಸ್ಪೋಟಕ್ಕೆ ಕಾರಣವನ್ನು ಗುರುತಿಸಲು ಬಾಂಬ್ ಸ್ಕ್ವಾಡ್ ಕೂಡ ರೆಸ್ಟೋರೆಂಟ್‌ನಲ್ಲಿದೆ. ನಾವು ಪೊಲೀಸರೊಂದಿಗೆ ಸಹಕರಿಸುತ್ತಿದ್ದೇವೆ" ಎಂದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

ನಮಗೆ ಮಧ್ಯಾಹ್ನ 1:05 ರ ಸುಮಾರಿಗೆ ಸ್ಫೋಟದ ಶಬ್ದ ಕೇಳಿತು. ಕೆಫೆಯು ಹೊಗೆಯಿಂದ ತುಂಬಿತ್ತು. ಕೆಲವು ಸ್ಥಳಗಳು ಮತ್ತು ಸುಮಾರು 5 ರಿಂದ 6 ಮಂದಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಿದ್ದೇವೆ. ಕೇವಲ 30 ನಿಮಿಷಗಳ ನಂತರ ಅಗ್ನಿಶಾಮಕ ವಾಹನ ಬಂದಿತು" ಎಂದು ಸ್ಫೋಟದ ಸಮಯದಲ್ಲಿ ಅಲ್ಲಿಯೇ ಇದ್ದ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+