• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯಸಭೆ ಚುನಾವಣೆ ಹೊತ್ತಲ್ಲಿ ಭೋಜನಕೂಟ ಆಯೋಜಿಸಿದ ರಮೇಶ್ ಜಾರಕಿಹೊಳಿ

|

ಬೆಂಗಳೂರು, ಜೂನ್ 3: ರಾಜ್ಯಸಭೆ ಚುನಾವಣೆ ದಿನಾಂಕ ನಿಗದಿ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳು, ಗೌಪ್ಯ ಸಭೆ ಹಾಗೂ ಡಿನ್ನರ್ ಪಾರ್ಟಿಗಳು ನಡೆಯುತ್ತಿರುವುದು ತೀರಾ ಕುತೂಹಲ ಕೆರಳಿಸಿದೆ.

ಬೆಂಗಳೂರಿನ ಮಲ್ಲೇಶ್ವರಂನ ಅಪಾರ್ಟ್‌ಮೆಂಟ್ ನಲ್ಲಿ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿ ಭೋಜನಕೂಟ ಸಭೆ ಆಯೋಜಿಸಿದ್ದು, ಬಿಜೆಪಿ ಸಚಿವರು ಮತ್ತು ಶಾಸಕರು ಭಾಗಿ‌ಯಾಗಿದ್ದಾರೆ.

ರಮೇಶ್ ಜಾರಕಿಹೊಳಿಯ ಆ ಹೇಳಿಕೆ ಅಷ್ಟು ಪರಿಣಾಮ ಬೀರಿತಾ?

ರಾಜ್ಯಸಭಾ ಚುನಾವಣೆ ಹೊಸ್ತಿಲಲ್ಲಿ ಇಂತಹ ಸಭೆ ಆಯೋಜನೆ ಮಾಡಿರುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯಸಭೆ ಟಿಕೆಟ್‌ಗಾಗಿ ಬಿಜೆಪಿ ಪಕ್ಷದಲ್ಲಿ ಭಾರಿ ಪೈಪೋಟಿ ನಡೆಯುತ್ತಿದ್ದು, ಈ ಸಭೆ ಮೇಲೆ ಹೆಚ್ಚು ಗಮನ ನೀಡುವಂತಾಗಿದೆ.

ಆದರೆ, ಈ ಸಭೆಗೂ ರಾಜ್ಯಸಭೆ ಚುನಾವಣೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಲಾಗಿದೆ. ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಿಕ್ಕಿರುವ ಹಿನ್ನೆಲೆಯಲ್ಲಿ ಡಿನ್ನರ್ ಆಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂದ್ಹಾಗೆ, ಈ ಭೋಜನಕೂಟ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಚಿವ ಜಾರಕಿಹೊಳಿ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.

English summary
BJP MLA Ramesh jarkiholi appointed belagavi district in charge minister. so, he organized dinner party for his MLA friends at malleshwaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X