ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ : ಸಿದ್ದರಾಮಯ್ಯ
ಬೆಂಗಳೂರು, ಜುಲೈ 03: ಆನಂದ್ ಸಿಂಗ್ ಮಾತ್ರವೇ ರಾಜೀನಾಮೆ ಸಲ್ಲಿಸಿದ್ದಾರೆ, ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿಲ್ಲವೆಂದು ಸ್ಪೀಕರ್ ರಮೇಶ್ ಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
ಆನಂದ್ ಸಿಂಗ್ ಅವರು ಜಿಂದಾಲ್ ವಿಚಾರವಾಗಿ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದೇನೆ ಎನ್ನುತ್ತಿದ್ದಾರೆ, ಅವರೊಂದಿಗೆ ಮಾತನಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಮೇಶ್ ಕುಮಾರ್ ಅವರು ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದು ರಾಜೀನಾಮೆಯನ್ನು ಸ್ಪೀಕರ್ ಕಚೇರಿಗೆ ರವಾನಿಸಿದ್ದಾಗಿ ಹೇಳಿದ್ದರು. ಆದರೆ ರಮೇಶ್ ಕುಮಾರ್ ಅವರು ಇದನ್ನು ಅಲ್ಲಗಳೆದಿದ್ದು, ಫ್ಯಾಕ್ಸ್ ಮಷಿನ್ ಇಲ್ಲದ ಕಚೇರಿಗೆ ಫ್ಯಾಕ್ಸ್ ಮೂಲಕ ಹೇಗೆ ರಾಜೀನಾಮೆ ರವಾನಿಸಲು ಸಾಧ್ಯ ಎಂದು ಸಿಟ್ಟಾಗಿದ್ದರು.
ರಮೇಶ್ ಕುಮಾರ್ ಅವರು ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದು, ಅದಕ್ಕಾಗಿಯೇ ಹೀಗೆ ಅನೂರ್ಜಿತಗೊಳ್ಳಲೆಂದೇ ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications