ಅಮಾಯಕಿ ಮಗಳನ್ನು ರಕ್ಷಿಸಿ ಎಂದು ಎಸ್ಐಟಿಗೆ ಮನವಿ ಮಾಡಿದ ಪೋಷಕರು !
ಬೆಂಗಳೂರು, ಮಾರ್ಚ್ 27: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆ ಎನ್ನಲಾದ ಯುವತಿಯ ಪೋಷಕರು ಹಾಗೂ ಸಹೋದರರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಸಂತ್ರಸ್ತೆಯ ಪೋಷಕರು ಎಸ್ಐಟಿ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ ಪೋಷಕರ ಬಳಿ ಸಿಡಿ ಲೇಡಿ ಮಾತನಾಡಿದ್ದ ಅಡಿಯೋ ಬಹಿರಂಗವಾಗಿತ್ತು.ಈ ಅಡಿಯೋ "ಅಶ್ಲೀಲ ಸಿಡಿ ಪ್ರಕರಣಕ್ಕೆ" ಮಹತ್ವದ ತಿರುವು ನೀಡಿತ್ತು. ತನ್ನ ಪೋಷಕರು ಎಸ್ಐಟಿ ಅಧಿಕಾರಿಗಳ ಮುಂದೆ ಬಂದ ಬಳಿಕ ತಾನೇ ಸ್ವತಃ ಬಂದು ಹೇಳಿಕೆ ದಾಖಲಿಸುವುದಾಗಿಯೂ ಸಿಡಿಲೇಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರನ್ನು ಕರೆತಂದಿರುವ ಎಸ್ಐಟಿ ಅಧಿಕಾರಿಗಳು ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಸಂತ್ರಸ್ತೆ ಎನ್ನಲಾದ ಯುವತಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ನನ್ನ ಮಗಳು ಅಪಾಯದಲ್ಲಿದ್ದಾಳೆ. ಆಕೆ ಅಮಾಯಕಿ. ಯಾರ ಜತೆಗೆ ಇದ್ದಾಳೋ ನಮಗೆ ಗೊತ್ತಿಲ್ಲ. ಯಾರದ್ದೋ ಮಾತು ಕೇಳಿ ಈ ರೀತಿ ಹೇಳಿಕೆ ನೀಡುತ್ತಿರಬಹುದು. ಆ ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಹೇಳಿದ್ದಳು. ದಯವಿಟ್ಟು ಆಕೆಗೆ ರಕ್ಷಣೆ ನೀಡಿ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಇನ್ನು ಆಕೆಯ ಸಹೋದರರು ಕೂಡ ಹೇಳಿಕೆ ದಾಖಲಿಸಿದ್ದು, ಆಕೆಯ ಕರೆಯ ವಿವರಗಳು, ಹೇಳಿಕೊಂಡಿದ್ದ ಎಲ್ಲಾ ಸಂಗತಿಗಳನ್ನು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ತನಿಖೆ ಪಾರದರ್ಶಕತೆ ಭಾಗವಾಗಿ ಎಸ್ಐಟಿ ಅಧಿಕಾರಿಗಳು ಎಲ್ಲರ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ಸಂಶಯ, ಅನುಮಾನ ವ್ಯಕ್ತವಾಗದಂತೆ ಎಸ್ಐಟಿ ಅಧಿಕಾರಿಗಳ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದ ಬೆನ್ನಲ್ಲೇ ಎರಡು ದಿನ ಮೊದಲೇ ಪೋಷಕರು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

Recommended Video
ಗುರುವಾರ ಸಿಡಿಲೇಡಿ ಸಹೋದರರ ಜತೆ ಮಾತನಾಡಿದ್ದ ಅಡಿಯೋ ಕುರಿತ ಸಮಗ್ರ ವಿವರಗಳನ್ನು ಎಸ್ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಕರೆ ಮಾಡಿದ್ದ ಸಂಖ್ಯೆ, ಮಾತನಾಡಿದ ಸಂಗತಿ, ಆಕೆ ಹೇಳಿದ್ದ ಮಾತುಗಳನ್ನು ಸಹೋದರರು ಯಥಾವತ್ತಾಗಿ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications