• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಬಿಡೆಂಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

|

ಬೆಂಗಳೂರು, ನವೆಂಬರ್ 8: ನನಗೂ ಆಂಬಿಡೆಂಟ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ, ಆ ಸಂಸ್ಥೆಯವರು ನನ್ನನ್ನು ಮೊಬೈಲ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಅಷ್ಟೇ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಎಂಇಪಿಯ ನೌಹೀರಾ ಶೇಖ್‌ರಿಂದ ಕೋಟ್ಯಂತರ ಹಣ ಪಡೆದಿದ್ದ ರೆಡ್ಡಿ

ರಾಮಲಿಂಗಾರೆಡ್ಡಿಗೆ ಆಂಬಿಡೆಂಟ್ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಇದೆ ಎನ್ನುವ ಕುರಿತು ಸಾಕಷ್ಟು ಚರ್ಚೆಯಾಗಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು ಆ ಸಂಸ್ಥೆಯವರು ಒಂದು ನೂತನ ಮೊಬೈಲ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದ್ದರು ಸಚಿವನಾಗಿದ್ದ ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ, ನನಗೂ ಆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಬಂಧನ ಭೀತಿ: ಹೈದರಾಬಾದ್‌ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ

ಮಾಲೀಕರು ಹಾಗೂ ನನಗೂ ಕೂಡ ಯಾವುದೇ ಸಂಬಂಧವಿಲ್ಲ, ಸಚಿವನಾಗಿದ್ದಾಗ ಹಲವಾರು ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ಬಂದಿರುತ್ತೆ ಅದೇ ರೀತಿ ಈ ಸಂಸ್ಥೆಯಿಂದಲೂ ಬಂದಿತ್ತು ಕಾರ್ಯಕ್ರಮಕ್ಕೆ ಹೋಗಿ ಮೊಬೈಲ್ ಬಿಡುಗಡೆ ಮಾಡಿ ಬಂದಿದ್ದೆ, ಆ ಸಂಸ್ಥೆಯಲ್ಲಿ ಅವ್ಯವಹಾರ ಆಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.

ಆಂಬಿಡೆಂಟ್ ಕಂಪನಿ ಡೀಲ್ ಕುರಿತ ಮಾಹಿತಿ

ಆಂಬಿಡೆಂಟ್ ಕಂಪನಿ ಡೀಲ್ ಕುರಿತ ಮಾಹಿತಿ

ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಡಿ.ಜಿ. ಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ನಂ-9/ಎ, 1 ನೇ ಮಹಡಿ, ಕೆ.ಹೆಚ್.ಬಿ ಮುಖ್ಯರಸ್ತೆ, ಕನಕನಗರದಲ್ಲಿದೆ. ಈ ಕಂಪನಿಯನ್ನು ಸೈಯದ್ ಅಹಮದ್ ಫರೀದ್ ನಡೆಸುತ್ತಿದ್ದ, ಈತ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇ. 40 ನಿಂದ ಶೇ. 50 ಬಡ್ಡಿ ಹಣವನ್ನು ನೀಡುವುದಾಗಿ ನಂಬಿಸಿ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ.

ತನಿಗೆ ಸಿಸಿಬಿಗೆ ವರ್ಗಾವಣೆಯಾಗಿದ್ದು ಯಾವಾಗ?

ತನಿಗೆ ಸಿಸಿಬಿಗೆ ವರ್ಗಾವಣೆಯಾಗಿದ್ದು ಯಾವಾಗ?

ಈ ವಂಚನೆಯಲ್ಲಿ ವಂಚನೆಗೆ ಒಳಗಾಗಿರುವ ಸಾರ್ವಜನಿಕರು ನೀಡಿದ ಮನವಿ ಮೇರೆಗೆ ಈ ಸಂಬಂಧ ವರದಿಯಾಗಿರುವ ಎಲ್ಲಾ ಪ್ರಕರಣಗಳ ಮುಂದಿನ ತನಿಖೆಯನ್ನು ಬೆಂಗಳೂರು ನಗರದ ಸಿಸಿಬಿ ಘಟಕಕ್ಕೆ ಮಾನ್ಯ ಪೊಲೀಸ್ ಆಯುಕ್ತರು ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆಗೊಂಡ ಪ್ರಕರಣಗಳ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿ ಚುರುಕುಗೊಳಿಸಿದ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡಗಳು ಆರೋಪಿ ಸೈಯದ್ ಅಹಮದ್ ಫರೀದ್ ಈತನನ್ನು ದಸ್ತಗಿರಿಪಡಿಸಿ ವಿಚಾರಣೆಗೊಳಪಡಿಸಿದಾಗ ಈತ ಸಾರ್ವಜನಿಕರಿಂದ ಕೋಟ್ಯಂತರ ಹಣವನ್ನು ಸಂಗ್ರಹಿಸಿ ಹಲವಾರು ಜನರ ಬಳಿ ಹೂಡಿಕೆ ಮಾಡಿರುವುದಾಗಿ ಮತ್ತು ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಈತನ ಕಛೇರಿ ಮತ್ತು ಮನೆಗಳ ಮೇಲೆ ಇ.ಡಿ. ಇಲಾಖೆಯಿಂದ ದಾಳಿ ನಡೆದು ಈತನ ಬ್ಯಾಂಕ್‍ನ ಹಣಕಾಸಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ.

ಸಿಸಿಬಿ ದಾಳಿ, ಶೋಧ ಕಾಯ ಚುರುಕು

ಸಿಸಿಬಿ ದಾಳಿ, ಶೋಧ ಕಾಯ ಚುರುಕು

ಜನಾರ್ದನ ರೆಡ್ಡಿ ಬಂಧನಕ್ಕಾಗಿ ಬೆಂಗಳೂರು, ಬಳ್ಳಾರಿ ಮತ್ತು ಹೈದರಾಬಾದ್​ನಲ್ಲಿ ಪೊಲೀಸರು ಕಾದು ಕುಳಿತಿದ್ದಾರೆ.. ಬೆಂಗಳೂರಿನ ಪಾರಿಜಾತ ನಿವಾಸದ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಸಿರಗುಪ್ಪ ರಸ್ತೆಯಲ್ಲಿರುವ ಮನೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಎಸಿಪಿ ಮಂಜುನಾಥ್ ಅವರ ತಂಡದ ತನಿಖೆಗೆ ಗಾಲಿ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಹಾಗೂ ಶಾಸಕ ಬಿ ಶ್ರೀರಾಮುಲು ಅವರು ಸಹಕಾರ ನೀಡುತ್ತಿದ್ದಾರೆ.

ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣ

ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣ

2017ರ ಆಂಬಿಡೆಂಟ್ ವಂಚನೆ ಪ್ರಕರಣ ದೇವರ ಜೀವನಹಳ್ಳಿ ಠಾಣೆಯ ಪೊಲೀಸರಿಂದ ಮೊದಲಿಗೆ ತನಿಖೆ ಒಳಪಟ್ಟಿತ್ತು. ನಂತರ ಇದು ಬಹುಕೋಟಿ ಆರ್ಥಿಕ ವಂಚನೆ ಎಂದು ತಿಳಿದಿದ್ದರಿಂದ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಯಿತು. ಈ ಕುರಿತು ಹಲವಾರು ದಾಖಲೆ ವಶವಾದರೂ, 15,00ಕ್ಕೂ ಅಧಿಕ ಹೂಡಿಕೆದಾರರು ಕಳೆದುಕೊಂಡಿರುವ ಕೋಟ್ಯಂತರ ಹಣ ಸಿಕ್ಕಿಲ್ಲ. ಇದೀಗ ಡೀಲ್ ನಡೆದಿದೆ ಎನ್ನಲಾದ ಚಿನ್ನದ ಕುರಿತು ದಾಖಲೆ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

English summary
Former minister Ramalingareddy has clarified that he had no way connected with Ambident company since he was attended an event as minister shake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X