BMTC: ನಮ್ಮ ಮೆಟ್ರೋ ಫೀಡರ್‌ ಬಸ್‌ಗಳ ಸಂಚಾರಕ್ಕೆ ರಾಮಲಿಂಗಾ ರೆಡ್ಡಿ ಗ್ರೀನ್ ಸಿಗ್ನಲ್: ಮಾರ್ಗ, ಸಮಯ ವೇಳಾಪಟ್ಟಿ

ಬೆಂಗಳೂರು, ಆಗಸ್ಟ್ 13: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಬೆಂಗಳೂರು ನಗರ ಹಾಗೂ ಹೊರ ವಲಯದ ಪ್ರಯಾಣಿಕರಿಗೆ ದಕ್ಷ, ಉತ್ತಮ, ಸುಲಭ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಈ ಸಂಬಂಧ ಪ್ರತಿದಿನ 6217 ಬಸ್ಸುಗಳಿಂದ 65,206 ಟ್ರಿಪ್‌ಗಳ ಸೇವೆ ನೀಡಲಾಗುತ್ತಿದೆ. ಇದೀಗ ಮೊನ್ನೆಯಷ್ಟೇ ಓಪನ್‌ ಆದ ಮೆಟ್ರೋ ಮಾರ್ಗಕ್ಕೆ ಹಾಗೂ ಪ್ರಯಾಣಿಕರ ಗಮ್ಯ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಫಿಡರ್‌ ಬಸ್‌ಗಳ ಲೋಕಾರ್ಪಣೆ ಮಾಡಿದರು.

ಬಿಎಂಟಿಸಿ ಎಲ್ಲ ಬಸ್‌ಗಳು ನಿತ್ಯ 12.85 ಲಕ್ಷ ಕಿಲೋ ಮಿಟರ್‌ಗಳು ಕರಮಿಸುತ್ತವೆ. ಪ್ರತಿದಿನ ಸರಾಸರಿ 44 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದರು. ಬಳಿಕ ಹೊಸದಾಗಿ ಸೇವೆ ಶುರು ಮಾಡಿದ ಆರ್‌ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಿದರು. ಹೊಸ ಮೆಟ್ರೋ ಮಾರ್ಗದಲ್ಲಿ ಸಂಚಾರ ಅನುಭವ ಪಡೆದರು.

Ramalinga Reddy unveal BMTC New Metro Feeder Bus Services for Yellow Line

ಹಳದಿ ಮಾರ್ಗಕ್ಕೆ ಇನ್ನಷ್ಟು ಬೋಗಿಗಳನ್ನು ಸೇರ್ಪಡೆ ಮಾಡುವುದು ಮತ್ತು ಪೀಕ್ ಅವಧಿಯಲ್ಲಿ ರೈಲುಗಳ ಅವಧಿಯನ್ನು 5-10 ನಿಮಿಷಗಳಿಗೆ ಇಳಿಸುವುದು ಪ್ರಯಾಣವನ್ನು ಇನ್ನಷ್ಟು ಸುಗಮ, ವೇಗವಾದ ಹಾಗೂ ಸೌಕರ್ಯಯುತವಾಗಿಸುತ್ತದೆ. ನಮ್ಮ ಮೆಟ್ರೊ ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಪಾಲನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಹೇಳಿದರು.

ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಈ ಹಿಂದೊಮ್ಮೆ ಬಿಟಿಎಂ ಲೇಔಟ್ ಬಸ್ ನಿಲ್ದಾಣದಿಂದ ಮೆಟ್ರೋ ಫೀಡರ್ ಬಸ್ಸುಗಳಿಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಈವರೆವಿಗೂ ವಿವಿಧ ಮೆಟ್ರೋ ನಿಲ್ದಾಣಗಳಿಂದ 45 ಮಾರ್ಗಗಳಲ್ಲಿ 214 ಅನುಸೂಚಿಗಳಿಂದ ಒಟ್ಟು 2750 ಮೆಟ್ರೊ ಫೀಡರ್ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ.

ಪ್ರತಿ ದಿನ 1.20 ಲಕ್ಷಕ್ಕೂ ಅಧಿಕ ಸಾರ್ವಜನಿಕ ಪ್ರಯಾಣಿಕರು ಮೆಟ್ರೋ ಫೀಡರ್ ಸೇವೆಗಳಲ್ಲಿ ಉಪಯೋಗ ಪಡೆಯುತ್ತಿದ್ದಾರೆ.

ಮೆಟ್ರೋ ಬಸ್ ನಿಲ್ದಾಣಗಳಲ್ಲಿ ಹಾಗೂ ಮೆಟ್ರೋ ರೈಲಿನಲ್ಲಿ ಕ್ಯೂಆರ್ ಕೋರ್ಡ ಆಧಾರಿತ ಮೆಟ್ರೀ ಫೀಡರ್ ಬಸ್ಸುಗಳ ವೇಳಾಪಟ್ಟಿ, ಲೈವ್ ಟ್ರ್ಯಾಕಿಂಗ್ ಮತ್ತು ಇತರೇ ಸಂಬಂಧಿತ ಮಾಹಿತಿ ನೀಡುವ ಆಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ.

Ramalinga Reddy unveal BMTC New Metro Feeder Bus Services for Yellow Line

* ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸೂರು ಮುಖ್ಯ ರಸ್ತೆಯಲ್ಲಿ 100 ಮಾರ್ಗಗಳಲ್ಲಿ 619 ಅನುಸೂಚಿಗಳಿಂದ 3000 ಟ್ರಿಪ್‌ಗಳ ಸೇವೆ ನೀಡುತ್ತಿವೆ.

* ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ನಿಂದ ನಗರದ ಪ್ರಮುಖ ಸ್ಥಳಗಳಿಗೆ 14 ಮಾರ್ಗಗಳಲ್ಲಿ 80 ಅನುಸೂಚಿಗಳಿಂದ 700 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಮಾರ್ಗವಾಗಿ 4 ಮಾರ್ಗಗಳಲ್ಲಿ 87 ಅನುಸೂಚಿಗಳಿಂದ 592 ಟ್ರಿಪ್‌ಗಳು ಕಾರ್ಯಾಚರಣೆ ಮಾಡಲಾಗುತ್ತಿದೆ.

* ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ, ವಿಪ್ರೋಗೆ ನೈಸ್ ರಸ್ತೆಯಲ್ಲಿ 18 ಮಾರ್ಗಗಳಲ್ಲಿ, 60 ಅನುಸೂಚಿಗಳಿಂದ, 292 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ. ಪ್ರತಿದಿನ ಸರಾಸರಿ 14,000 ಪ್ರಯಾಣಿಕರು ಈ ಮಾರ್ಗಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಮೆಟ್ರೋ ಹಳದಿ ಲೈಬ್: ಫೀಡರ್ ಬಸ್ ಮಾರ್ಗ್‌ಗಳು

* ಹಳದಿ ಮೆಟ್ರೋ ಮಾರ್ಗಕ್ಕೆ ಸಂಸ್ಥೆಯಿಂದ ಒಟ್ಟು 4 ಮಾರ್ಗಗಳಲ್ಲಿ 12 ಬಸ್‌ಗಳಿಂದ 96 ಸುತ್ತುವಳಿಗಳನ್ನು ಮೆಟ್ರೋ ಫೀಡರ್ ಸೇವೆ ಆರಂಭಿಸಲಾಗಿದೆ.

* ಸದರಿ 4 ಮಾರ್ಗಗಳಲ್ಲಿ ಒಟ್ಟು 12 ಬಸ್ಸುಗಳಿಂದ 96 ಟ್ರಿಪ್ (ಆವರ್ತನ) ಸೇವೆ ನೀಡಲಾಗುತ್ತಿದೆ. ಈರಿ ಮಾರ್ಗಗಳಲ್ಲಿ ಹೊಸರೋಡ್, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೊಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಹಾಗೂ ಬೊಮ್ಮಸಂದ್ರ ಒಟ್ಟು 6 ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆಗಳ ಸೌಲಭ್ಯ ಆರಂಭಿಸಲಾಗಿದೆ.

ಫೀಡರ್‌ ಬಸ್‌ ಸಂಖ್ಯೆ, ಸಮಯ, ಮಾರ್ಗ

* ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ (MF-22) ಬಸ್ ಬೆಳಗ್ಗೆ 0820, 0850, 0920, 0950, 1045, 1130, 1200, 1230, 1300, 1355, 1425, 1455, 1525, 1555, 1625, 1655 ಗಂಟೆಗೆ ಕೊಡತಿ ವಿಪ್ರೋ ಗೆ ತಲುಪಲಿದೆ.

ಬಿಡುವ ವೇಳೆ: ಬೆಳಗ್ಗೆ 0710, 0740, 0810, 0840, 0935, 1030, 1100, 1130, 1200, 1230, 1300, 1330, 1425, 1455, 1525, 1555 ಸಮಯಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನ್ನಲ್ಲಿ ಮೂಲಕ ಕಾರ್ಯಾಚರಣೆ ಮಾಡಲಿದೆ.

* ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಸ್ (MF-22A): ಈ ಬಸ್ ಬೆಳಗ್ಗೆ 0840, 0920, 0945, 1030, 1225, 1250, 1255, 1320, 1540, 1605, 1620, 1650 ಗಂಟೆಗೆ ಕೊಡತಿ ವಿಪ್ರೋಗೆ ತಲುಪುತ್ತದೆ. ಅಲ್ಲಿಂದ ಬೆಳಗ್ಗೆ 0805, 0835, 1025, 1100, 1125, 1155, 1350, 1420, 1440, 1510, 1705, 1735 ಗಂಟೆಗೆ ಬಂದು ತಲುಪುತ್ತದೆ. ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್ , ಚಂದಾಪುರ ಕ್ರಾಸ್ ನಲ್ಲಿ ನಿಲುಗಡೆ ನೀಡುತ್ತದೆ.

* ಬೊಮ್ಮಸಂದ್ರ (MF-22B) ಮಾರ್ಗದ ಬಸ್: ಈ ಬಸ್ ಬೆಳಗ್ಗೆ 0830, 0900, 0925, 0955, 1045, 1115, 1140, 1210, 1230, 1300, 1340, 1410, 1435, 1505, 1530, 1600, 1640, 1710, 1735, 1805 ಗಂಟೆಗೆ ಸಂಚಾರ ಆರಂಭಿಸುತ್ತದೆ. ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, ಎಸ್-ಮಾಂಡೋ-3, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ ಮಾರ್ಗವಾಗಿ ಸಾಗುತ್ತದೆ.

* ಕೋನಪ್ಪನ ಅಗ್ರಹಾರ (MF-22C) ಬಸ್: ಬೆಳಗ್ಗೆ 0825, 0855, 0920, 0950, 1035, 1105, 1125, 1155, 1215, 1245, 1340, 1405, 1430, 1455, 1525, 1550, 1645, 1710, 1740, 1805 ಗಂಟೆಗೆ ಸಂಚಾರ ನಡೆಸುತ್ತದೆ. ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಎಸ್-ಮಾಂಡೋ-3, ತಿರುಪಾಳ್ಯ ಕ್ರಾಸ್, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರದಲ್ಲಿ ನಿಲುಗಡೆ ನೀಡುತ್ತದೆ. ಈ ಬಸ್‌ಗಳು ಆಯಾ ಮಾರ್ಗದ ಸಾವಿರಾರು ಜನರಿಗೆ ನಿತ್ಯ ಉತ್ತಮ ಸೇವೆ ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+