ಜಯಾ ಬೆನ್ನಿಗೆ ನಿಂತ ನ್ಯಾಯವಾದಿ ರಾಮ್ ಜೇಠ್ಮಲಾನಿ

ಬೆಂಗಳೂರು, ಸೆ.28: ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಹತ್ತು ಹಲವು ರಾಜಕಾರಣಿಗಳು, ಉದ್ಯಮಿಗಳು, ಖ್ಯಾತನಾಮರ ನೆಚ್ಚಿನ ಆಯ್ಕೆಯಾಗಿರುವ ಭಾರತದ ಪ್ರತಿಷ್ಠಿತ ನ್ಯಾಯವಾದಿ ರಾಮ್ ಜೇಠ್ಮಲಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿರುವ ಜೆ.ಜಯಲಲಿತಾ ಪರವಾಗಿ ಜೇಠ್ಮಲಾನಿ ವಾದಿಸಲಿದ್ದು, ಸೋಮವಾರ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಹಾಕಲಿದ್ದಾರೆ.

ವಿವಾದಿತ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ರಾಮ್ ಜೇಠ್ಮಲಾನಿ ಅವರನ್ನು ಭಾನುವಾರ ಎಐಎಡಿಎಂಕೆ ಪ್ರಮುಖ ನಾಯಕರು ಸಂಪರ್ಕಿಸಿ ಕೇಸಿನ ವಿಚಾರ ಮಾತುಕತೆ ನಡೆಸಿದ್ದಾರೆ. 18 ವರ್ಷಗಳ ಕಾನೂನು ಹೋರಾಟದ ನಂತರ ಜಯಲಲಿತಾ ಅವರು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಬೇಕಾಯಿತು.

ಜಯಲಲಿತಾ ಹಾಗೂ ಅವರ ಮೂವರು ಸಹಚರರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು 4 ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರು ದಂಡ ತೆರಬೇಕಾಗಿದೆ. ಸಿಬಿಐ ವಿಶೇಷ ನ್ಯಾಯಲಯ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ಸೋಮವಾರ(ಸೆ.29) ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಎಐಎಡಿಎಂಕೆ ನಿರ್ಧರಿಸಿದೆ.[ಜಯಲಲಿತಾ ಆಪ್ತ ಪನ್ನೀರ್ ಸೆಲ್ವಂಗೆ ಸಿಎಂ ಪಟ್ಟ]

Ram Jethmalani to repeat history, likely to defend jailed Jayalalithaa in court

ದಸರಾ ರಜೆ: ನ್ಯಾಯಾಲಯಗಳಿಗೆ 10 ದಿನಗಳ ದಸರಾ ರಜೆ ಇದೆ. ಅದರೆ, ಸೋಮವಾರದಂದು ಜಯಲಲಿತಾ ಅವರ ಜಾಮೀನು ಅರ್ಜಿ ಸಲ್ಲಿಸಬಹುದಾಗಿದ್ದು, ಹೈಕೋರ್ಟಿನಲ್ಲಿ ರಜಾದಿನಗಳ ನ್ಯಾಯಾಧೀಶರೊಬ್ಬರು ಅರ್ಜಿ ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ. ಮಂಗಳವಾರ ಹಾಗೂ ಬುಧವಾರದಂದು ಜಯಲಲಿತಾ ಅವರಿಗೆ ಅದೃಷ್ಟವಿದ್ದರೆ ಜಾಮೀನು ಅರ್ಜಿ ವಿಚಾರಣೆ ಇತ್ಯರ್ಥವಾಗಲಿದೆ. ಇಲ್ಲದಿದ್ದರೆ ಇನ್ನಷ್ಟು ದಿನಗಳ ಕಾಲ ಜೈಲಿನಲ್ಲೇ ಕಾಲ ದೂಡಬೇಕಾಗಿದೆ.[ಯಡಿಯೂರಪ್ಪ ಪರಿಶುದ್ಧ, ಪ್ರಾಮಾಣಿಕ: ಜೇಠ್ಮಲಾನಿ]

ಈ ನಡುವೆ ತಮಿಳುನಾಡಿನ ವಿತ್ತ ಸಚಿವ ಪನ್ನೀರ್ ಸೆಲ್ವಂ ಅವರು ಮುಂದಿನ ಮುಖ್ಯಮಂತ್ರಿಯಾಗಿ ಜಯಲಲಿತಾ ಅವರ ಸ್ಥಾನದಲ್ಲಿ ಕೂರುವುದು ಖಾತ್ರಿಯಾಗಿದೆ. ಎಐಎಡಿಎಂಕೆ ಶಾಸಕರು ಭಾನುವಾರ ಸಂಜೆ ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ನಾಳೆ ಮಧ್ಯಾಹ್ನ 12ರೊಳಗೆ ಪನ್ನೀರ್ ಸೆಲ್ವಂ ಅವರು ನೂತನ ಸಿಎಂ ಆಗಲಿದ್ದಾರೆ. ಇದೇ ವೇಳೆಗೆ ರಾಮ್ ಜೇಠ್ಮಲಾನಿ ಅವರು ತಮ್ಮ ಶಿಷ್ಯಂದಿರ ಮೂಲಕ ಕರ್ನಾಟಕ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+