ಕಾರ್ಗಿಲ್ ಯೋಧನಿಗೆ ಸರ್ಕಾರ ಗೌರವದಿಂದ ಬೀಳ್ಕೊಡಿ: ರಾಜೀವ್ ಚಂದ್ರಶೇಖರ್

ಬೆಂಗಳೂರು, ಏಪ್ರಿಲ್ 09: ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿನ್ನೆ(ಏ.08) ನಿಧನರಾದ ಕರ್ನಲ್ ರವೀಂದ್ರನಾಥ್ (56 ಎನ್ ಡಿಎ / 66 ಐಎಂಎ)ರವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಡಬೇಕೆಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

"ನಿನ್ನೆ ನಮ್ಮ ದೇಶ, ಓರ್ವ ವೀರ ಯೋಧ ಮತ್ತು ಕರ್ನಾಟಕದ ಮಣ್ಣಿನ ಮಗನನ್ನು ಕಳೆದುಕೊಂಡಿದೆ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 2 ರಾಜ್ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದ ಕರ್ನಲ್ ಎಂ.ಬಿ. ರವೀಂದ್ರನಾಥ್ ರವರು (ನಿವೃತ್ತ) ನಿಧನರಾಗಿದ್ದಾರೆ. ಕರ್ನಲ್ ರವೀಂದ್ರನಾಥ್ ರವರು ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆಗಾಗಿ, ಅದರಲ್ಲೂ ವಿಶೇಷವಾಗಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅವರ ಕೊಡುಗೆಗಾಗಿ 'ವೀರ ಚಕ್ರ' ಗೌರವ ಸಂದಿದೆ. ಅವರು ನಮ್ಮ ಆದರ ಮತ್ತು ಗೌರವಕ್ಕೆ ಅರ್ಹರಾಗಿರುತ್ತಾರೆ" ಎಂದು ಅವರು ಹೇಳಿದ್ದಾರೆ.

'ಕರ್ನಾಟಕದ ಮತ್ತು ದಾವಣಗೆರೆಯ ಹೆಮ್ಮೆಯ ಮಗನಾದ ಕರ್ನಲ್ ರವೀಂದ್ರನಾಥ್ ರವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದೇನೆ. ಆ ಮೂಲಕ ನಮ್ಮ ನಾಡಿನ ಹೆಮ್ಮೆಯ ಪುತ್ರನ ಅಪ್ರತಿಮ ದೇಶ ಸೇವೆಗೆ ನಾವು ಕೃತಜ್ಞತೆ ಸಲ್ಲಿಸಿದಂತಾಗುತ್ತದೆ' ಎಂದು ಅವರು ಕೋರಿಕೆ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+