ಆರ್. ಆರ್. ನಗರ ಚುನಾವಣೆ; ವೋಟರ್ ಐಡಿ ಕೊಡಿ ಎಂದು ಬೇಡಿಕೆ!
ಬೆಂಗಳೂರು, ಅಕ್ಟೋಬರ್ 19 : " ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನಲೆಯಲ್ಲಿ ನಿಮ್ಮ ವೋಟರ್ ಐಡಿ ಮತ್ತು ಮೊಬೈಲ್ ನಂಬರ್‌ಗಳನ್ನು ಯಾರಿಗೂ ನೀಡಬೇಡಿ" ಎಂದು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಮನವಿ ಮಾಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ, ಆರ್. ಆರ್. ಉಪ ಚುನಾವಣೆ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್, "ಬೇರೆಯವರ ಫೋಟೋ ಐಡಿ ಪಡೆಯುವಂತಿಲ್ಲ. ಈ ಕುರಿತು ದೂರವಾಣಿ ಮೂಲಕವೂ ಕೇಳುವಂತಿಲ್ಲ" ಎಂದರು.
ಆರ್. ಆರ್. ನಗರ ಚುನಾವಣೆ; ಜೆಡಿಎಸ್ಗೆ ಮತ್ತೊಂದು ಹಿನ್ನಡೆ
"ವೋಟರ್ ಐಡಿ, ದೂರವಾಣಿ ನಂಬರ್ ಕೇಳುವುದು ಅಪರಾಧವಾಗಿದೆ. ಇಂತಹ ಪ್ರಕರಣ ಕಂಡು ಬಂದರೆ ಕರೆ ಮಾಡಿದ ವ್ಯಕ್ತಿಗೆ ಒಂದು ವರ್ಷ ಜೈಲು ಶಿಕ್ಷೆಯಾಗುತ್ತದೆ. ಈ ಬಗ್ಗೆ ನಿಗಾ ಇಡುವಂತೆ ಪೊಲೀಸರಿಗೆ ಸಹ ಸೂಚನೆ ನೀಡಲಾಗಿದೆ" ಎಂದು ಆಯುಕ್ತರು ಹೇಳಿದರು.
ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು!
"ಆರ್. ಆರ್. ನಗರ ಉಪ ಚುನಾವಣೆಗಾಗಿ 22 ಅಭ್ಯರ್ಥಿಗಳಿಂದ 27 ನಾಮಪತ್ರ ಸಲ್ಲಿಕೆಯಾಗಿದೆ. ನವೆಂಬರ್ 3ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಒಟ್ಟು 678 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ" ಎಂದು ಮಂಜುನಾಥ ಪ್ರಸಾದ್ ವಿವರಣೆ ನೀಡಿದರು.
ಆರ್. ಆರ್. ನಗರ ಉಪ ಚುನಾವಣೆ; ಡಿಕೆಶಿ ತುರ್ತು ಸುದ್ದಿಗೋಷ್ಠಿ
"ಕ್ಷೇತ್ರದಲ್ಲಿ 4,62,201 ಮತದಾರರು ಇದ್ದಾರೆ. ಹೊಸದಾಗಿ ಹೆಸರು ನೋಂದಣಿ ಮಾಡಿದವರಿಗೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಚುನಾವಣೆ ವೀಕ್ಷಣೆಗಾಗಿ ಕೇಂದ್ರದಿಂದ ಇಬ್ಬರು ವೀಕ್ಷಕರು ಆಗಮಿಸಿದ್ದಾರೆ" ಎಂದು ತಿಳಿಸಿದರು.
ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ಮತದಾನ ನವೆಂಬರ್ 3ರಂದು ನಡೆಯಲಿದೆ. ಶ್ರೀ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ನವೆಂಬರ್ 10ರಂದು ನಡೆಯಲಿದೆ.
ಆರ್. ಆರ್. ಉಪ ಚುನಾವಣೆಗೆ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಹೆಚ್. ಕುಸುಮಾ ಮತ್ತು ಜೆಡಿಎಸ್‌ನಿಂದ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ.