Rajajinagar: ರಾಜಾಜಿನಗರದಲ್ಲಿ ಹಾಲಿ ಮತ್ತು ಮಾಜಿ ಬಿಜೆಪಿ ನಾಯಕರ ನಡುವೆ ತೀವ್ರ ಪೈಪೋಟಿ!
ಬೆಂಗಳೂರು, ಮೇ. 04: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಮತ್ತು ಮಾಜಿ ಬಿಜೆಪಿ ನಾಯಕರ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಹಲವಯ ಕೈಗಾರಿಕೆಗಳು ಮತ್ತು ರಾಜಧಾನಿಗೆ ವಲಸೆ ಬರುವವರ ಪ್ರಮುಖ ನಗರದವಾಗಿ ರಾಜಾಜಿನಗರ ಹೆಸರುವಾಸಿಯಾಗಿದೆ.
ಈ ಬಾರಿ ಬಿಜೆಪಿಯಿಂದ ಹಾಲಿ ಶಾಸಕ ಸುರೇಶದ ಕುಮಾರ್ ಕಣದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಿಜೆಪಿಯ ಮಾಜಿ ನಾಯಕರು. ಪುಟ್ಟಣ್ಣ ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಮುಂಚೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಮಾಜಿ ಬಿಜೆಪಿ ಎಂಎಲ್‌ಸಿಯಾಗಿರುವ ಪುಟ್ಟಣ್ಣ ಮತ್ತು ಹಾಲಿ ಶಾಸಕ ಸುರೇಶ್ ಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಡಾ.ಆಂಜನಪ್ಪ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಬಿ.ಟಿ.ನಾಗಣ್ಣ ಕಣಕ್ಕಿಳಿದಿದ್ದಾರೆ. ಇನ್ನು, ಬಿಜೆಪಿಯ ಸುರೇಶ್ ಕುಮಾರ್ ಐದು ಬಾರಿ ಕ್ಷೇತ್ರದಿಂದ ಶಾಸಕರಾಗಿ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಆದರೆ, ಇಷ್ಟು ವರ್ಷಗಳ ಕಾಲ ಕ್ಷೇತ್ರದ ಮೇಲೆ ಹಿಡಿತವಿದ್ದರೂ ಕೆಲವು ದೀರ್ಘಕಾಲದ ಸಮಸ್ಯೆಗಳು ಬಗೆಹರಿದಿಲ್ಲ. ಇದೇ ಕಾರಣದಿಂದ ಜನರ ವಿರೋಧವನ್ನು ಎದುರಿಸುತ್ತಿದ್ದಾರೆ.
ಪುಟ್ಟಣ್ಣ ಪಕ್ಷಕ್ಕೆ ಸೇರುವ ಮೊದಲೇ ಕಾಂಗ್ರೆಸ್‌ನಲ್ಲಿ ಕನಿಷ್ಠ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದರು. ಕಾಂಗ್ರೆಸ್‌ಗೆ ಪುಟ್ಟಣ್ಣ ಸೇರ್ಪಡೆಯಾದಾಗ ಪಕ್ಷದೊಳಗೆ ಅಸಮಾಧಾನವಿತ್ತು. ಆದರೆ, ಕಾಂಗ್ರೆಸ್ ಇತರ ನಾಯಕರನ್ನು ಸಮಾಧಾನಪಡಿಸಿದೆ. ಆದರೂ, ಚುನಾವಣೆಗೆ ಮುಂಚಿತವಾಗಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಳ್ಳುವ ಆತಂಕದಲ್ಲಿ ಕಾಂಗ್ರೆಸ್.

ರಾಜಾಜಿನಗರ ಕ್ಷೇತ್ರದ ಮತದಾರರು 1970ರ ದಶಕದಿಂದಲೂ ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ ಸೇರಿದಂತೆ ವಿವಿಧ ಪಕ್ಷಗಳಿಗೆ ಮತ ಹಾಕಿದ್ದಾರೆ. ಆದರೆ 1989 ರಿಂದ ಇಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಗೆಲುವು ಕಾಣುತ್ತಾ ಬಂದಿದೆ. ಹಾಲಿ ಶಾಸಕ ಎಸ್.ಸುರೇಶ್ ಕುಮಾರ್ ಅವರು 2004ರಲ್ಲಿ ಕಾಂಗ್ರೆಸ್ ನಾಯಕ ಎನ್.ಎಲ್.ನರೇಂದ್ರಬಾಬು ವಿರುದ್ಧ ಸೋಲು ಕಂಡಿದ್ದು ಬಿಟ್ಟರೆ 1994ರಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್ ಕುಮಾರ್ ಅವರು ಬೆಂಗಳೂರು ಮಾಜಿ ಮೇಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜಿ ಪದ್ಮಾವತಿ ಅವರನ್ನು 9,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಬಿಎಸ್ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಬ್ರಾಹ್ಮಣ ಸಮುದಾಯದ ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದಾಗ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.

ಕ್ಷೇತ್ರದ ಪ್ರಮುಖ ಸಮಸ್ಯೆಗಳು:
1 ಕುಡಿಯುವ ನೀರಿನ ಕೊರತೆ
2. ಸಂಚಾರ ಅಡಚಣೆ
3. ಮುಚ್ಚಿಹೋಗಿರುವ ಒಳಚರಂಡಿಗಳು
4. ತಗ್ಗು ಪ್ರದೇಶಗಳ ಪ್ರವಾಹ
5. ಕಿರಿದಾದ ರಸ್ತೆಗಳು
6. ರಸ್ತೆ ಗುಂಡಿಗೆ ಸಂಬಂಧಿಸಿದ ಸಾವುಗಳು












Click it and Unblock the Notifications