ಬೆಂಗಳೂರಿನಲ್ಲಿ ಮುಂಜಾನೆಯೇ ಮಳೆ, ಜನರಿಗೆ ಕಿರಿಕಿರಿ
ಬೆಂಗಳೂರು, ಸೆಪ್ಟೆಂಬರ್ 17 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಶನಿವಾರದಿಂದ ಮತ್ತೆ ಮಳೆ ಆರಂಭವಾಗಿದೆ. ಭಾನುವಾರ ಮುಂಜಾನೆಯೇ ಮಳೆ ಸುರಿಯುತ್ತಿದೆ. ಇನ್ನೂ 48 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದ ಜನರ ಮುಂಜಾನೆಯ ವಾಕಿಂಗ್‌ಗೆ ಮಳೆ ಅಡ್ಡಿ ಮಾಡಿದೆ. ಭಾನುವಾರ ಹೊರಗೆ ಹೋಗಲು ಪ್ಲಾನ್ ಮಾಡಿದವರು ಮಳೆ ನೋಡಿ ಸುಮ್ಮನಾಗಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿ ಬೆಳಗಿನ ಖರೀದಿಗೆ ಮಳೆ ಅಡ್ಡಿ ಉಂಟುಮಾಡಿದೆ.

ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು ಹಲವು ಬಡಾವಣೆಗಳಲ್ಲಿ ಮಳೆಯಾಗುತ್ತಿದೆ. ಜಯನಗರ, ಬಸವನಗುಡಿ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತ-ಮುತ್ತ ಮಳೆ ಜೋರಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Beautiful Sunday morning in the outskirts though pic.twitter.com/dPff5hK0A9
— Bengaluru Weather (@BngWeather) September 17, 2017
ಆಗಸ್ಟ್ 14ರಿಂದ ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಸೆಪ್ಟೆಂಬರ್ ತಿಂಗಳ ಮೊದಲ ಹತ್ತು ದಿನಗಳ ಕಾಲ ಭಾರೀ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತ್ತು.












Click it and Unblock the Notifications