ಬೆಂಗಳೂರಲ್ಲಿ ಹಲವೆಡೆ ಭಾರಿ ಮಳೆ, ಓರ್ವ ವ್ಯಕ್ತಿ ಬಲಿ

ಬೆಂಗಳೂರು, ಏಪ್ರಿಲ್ 17: ಬೆಂಗಳೂರಿಗೆ ಮಳೆರಾಯ ಆಗಮಿಸಿದ್ದು, ಸಂಜೆ ವೇಳೆಗೆ ಜಯನಗರ, ಬನಶಂಕರಿ, ಮಲ್ಲೇಶ್ವರ, ಮೆಜೆಸ್ಟಿಕ್ ಸೇರಿ ಹಲವೆಡೆ ಮಳೆ ಆಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇನ್ನೂ ಎರಡು ಮೂರು ದಿನಗಳು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಆಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದೆ.

ಮುಂದಿನ ಎರಡು-ಮೂರು ದಿನಗಳಲ್ಲಿ ಮಂಡ್ಯ, ತುಮಕೂರು, ಬೆಂಗಳೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Rain in Bengaluru, Mandya, Tumakuru will also see rains

ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ಲಘುವಾಗಿ ಆಗಿದ್ದ ಮಳೆ ಇಂದು ಸ್ವಲ್ಪ ಬಿರುಸು ಪಡೆದುಕೊಂಡಿತ್ತು. ಕೆಲವು ಭಾಗಗಳಲ್ಲಿ ಭಾರಿ ಮಳೆ ಆಗಿದ್ದು, ನಗರದ ಲುಂಬಿನಿ ಗಾರ್ಡನ್‌ ಬಳಿ ಮಳೆಯ ಆರ್ಭಟಕ್ಕೆ ಮರ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ನಾಳೆ ಸಂಜೆ ವೇಳೆಗೆ ಮತ್ತೆ ಮಳೆ ಆಗುವ ಸಾಧ್ಯತೆ ಇದ್ದು, ಮಧ್ಯಾಹ್ನವೇ ಮತದಾನ ಮಾಡಿದರೆ ಉತ್ತಮ, ಬಿಸಿಲಿದೆ ಸಂಜೆ ಹೋಗೋಣವೆಂದು ಉದಾಸೀನ ಮಾಡಿದರೆ ಸಂಜೆಗೆ ಮಳೆ ಬರುವ ಸಾಧ್ಯತೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+