Breaking; ಬೆಂಗಳೂರು ಮಳೆ, ಸಮಸ್ಯೆ ಎದುರಿಸಲು ಸಚಿವರ ತಂಡ ರಚನೆ

ಬೆಂಗಳೂರು, ಮೇ 20; ಬೆಂಗಳೂರು ನಗರದಲ್ಲಿ ಮಳೆ ಅವಾಂತರ ಮಾಡಿದೆ. ಸರ್ಕಾರ ಮತ್ತು ಬಿಬಿಎಂಪಿ ಮಳೆ ಪರಿಸ್ಥಿತಿ ನಿರ್ವಹಣೆ ಮಾಡುತ್ತಿರುವ ವಿಚಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದಲ್ಲಿನಮಳೆ ಪರಿಸ್ಥಿತಿ ನಿರ್ವಹಣೆಗೆ ಸಚಿವರ ತಂಡವನ್ನು ರಚನೆ ಮಾಡಿದ್ದಾರೆ. ಬೆಂಗಳೂರು ನಗರದ 8 ವಲಯಗಳಿಗೆ ಏಳು ಸಚಿವರ ಟಾಸ್ಕ್ ಫೋರ್ಸ್‌ ರಚನೆ ಮಾಡಿದ್ದಾರೆ.

ಮಳೆ ಅನಾಹುತಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

Rain In Bengaluru CM Forms Task Force To Monitor Situation

ಇದರಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕಾರ್ಯಪಡೆ ವಿವರ
* ಆರ್ ಅಶೋಕ್ - ದಕ್ಷಿಣ ವಲಯ
* ಡಾ. ಅಶ್ವಥ್ ನಾರಾಯಣ್ - ಪೂರ್ವ ವಲಯ
* ವಿ. ಸೋಮಣ್ಣ - ಪಶ್ಚಿಮ ವಲಯ
* ಎಸ್. ಟಿ. ಸೋಮಶೇಖರ್ - ಆರ್ ಆರ್ ನಗರ ವಲಯ
* ಬೈರತಿ ಬಸವರಾಜ್ - ಮಹದೇವಪುರ ವಲಯ
* ಗೋಪಾಲಯ್ಯ - ಬೊಮ್ಮನಹಳ್ಳಿ ವಲಯ
* ಮುನಿರತ್ನ - ಯಲಹಂಕ ಮತ್ತು ದಾಸರಹಳ್ಳಿ ವಲಯ

ಪೂರ್ವ ವಲಯದ ಕಥೆ ಏನು?; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಅಶ್ವಥ ನಾರಾಯಣಗೆ ಪೂರ್ವವಲಯ ಉಸ್ತುವಾರಿ ನೀಡಿದ್ದಾರೆ. ಆದರೆ ಸಚಿವರು ವಿದೇಶ ಪ್ರವಾಸದಲ್ಲಿದ್ದಾರೆ. ಈಗಾಗಲೇ ಲಂಡನ್ ಪ್ರವಾಸದಲ್ಲಿರುವ ಅವರು, ಮುಖ್ಯಮಂತ್ರಿಗಳ ಜೊತೆ ದಾವೋಸ್ ಪ್ರವಾಸಕ್ಕೂ ತೆರಳಲಿದ್ದಾರೆ.

ವಿದೇಶದಿಂದ ವಾಪಸ್ ಬರಲು ಇನ್ನೂ 5 ದಿನಗಳು ಬೇಕು. ಸಚಿವರು ವಿದೇಶದಿಂದ ವಾಪಸ್ ಆಗುವ ತನಕ ಪೂರ್ವ ವಲಯ ಯಾರು ನೋಡಿಕೊಳ್ಳುತ್ತಾರೆ? ಎನ್ನುವ ಪಶ್ನೆಗೆ ಉತ್ತರವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+