ಬೆಂಗಳೂರು: ಭಾರಿ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿ ವೃದ್ಧೆ ಸಾವು

ಬೆಂಗಳೂರು, ಮೇ 11: ಬೆಂಗಳೂರಿನಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಏಕಾಏಕಿ ಚರಂಡಿ ನೀರು ಮನೆಗೆ ನುಗ್ಗಿ ಮನೆಯಿಂದ ಹೊರ ಬರಲಾರದೆ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ರತ್ನಮ್ಮ (55) ಮೃತ ವೃದ್ಧೆ. ಮನೆಯಲ್ಲಿ ವೃದ್ಧೆ ರತ್ನಮ್ಮ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

ಮನೆಯ ಪಕ್ಕದಲ್ಲೇ ರಾಜಕಾಲುವೆ ದುರಸ್ಥಿಯಾಗುತ್ತಿದ್ದು, ರಾತ್ರಿಯ ಭಾರೀ ಮಳೆಗೆ ಏಕಾಏಕಿ ಮನೆಗೆ ಒಳಚರಂಡಿ ನೀರು ನುಗ್ಗಿದೆ. ಈ ವೇಳೆ ಮನೆಯಿಂದ ಹೊರಬರಲಾರದೇ ವೃದ್ಧೆ ಸಾವಿಗೀಡಾಗಿದ್ದಾರೆ. ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಮೇ 15ರವರೆಗೂ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೇ 15ರವರೆಗೂ ಸಂಜೆ ಅಥವಾ ರಾತ್ರಿ ಮಳೆ ಮುಂದುವರೆಯುವ ಸೂಚನೆ೩ಯನ್ನು ಹವಾಮಾನ ಇಲಾಖೆ ನೀಡಿದೆ. ನಗರದಲ್ಲಿ ಮೇ 12 ಮತ್ತು 13ರಂದು ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.

Rain hits with thunderstorm in Bengaluru

ಗುರುವಾರ 24.5 ಮಿ.ಮೀ ಮಳೆಯಾಗಿದ್ದು, ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ 8.4 ಮಿ.ಮೀ ಮಳೆ ದಾಖಲಾಗಿದೆ. ರಾತ್ರಿ 7.30ರ ವೇಳೆಗೆ ಪ್ರಾರಂಭವಾಗಿದ್ದ ಮಳೆ ರಾತ್ರಿ 10 ಗಂಟೆಯವರೆಗೂ ಸತತವಾಗಿ ಸುರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+