Railways Budget 2024: ರೈಲ್ವೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?, ಹಂಚಿಕೆ-ಅಂಕಿ ಸಂಖ್ಯೆಗಳು ವಿವರ
ನವದೆಹಲಿ, ಫೆಬ್ರವರಿ 01: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಗಳವಾರ ಪ್ರಸಕ್ತ ಸಾಲಿನ 2024-2025 ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡಿಸಿದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಮಹತ್ತರ ಬದಲಾವಣೆಗಳು ಆಗಿವೆ. ಆದಷ್ಟು ಈ ಬಜೆಟ್ ಮೇಲೆ ಇಟ್ಟಿದ್ದ ನಿರೀಕ್ಷೆಗಳನ್ನು ವಿತ್ತ ಸಚಿವರು ಹುಸಿ ಮಾಡದೇ ಕೆಲವು ಘೋಷಣೆಗಳನ್ನು ಮಾಡಿದ್ದಾರೆ.
ಈ ಭಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು, ಭಾರತಿಯ ರೈಲ್ವೆ ಅಭಿವೃದ್ಧಿಗೆ 2.4 ಲಕ್ಷ ಕೋಟಿ ರೂಪಾಯಿ ಬಂಡವಾಳವನ್ನು ಘೋಷಿಸಿದ್ದಾರೆ. ಇದು ಭಾರತೀಯ ರೈಲ್ವೇಗೆ ಈ ಬಾರಿ ಸಿಕ್ಕ ಅತ್ಯಧಿಕ ಬಂಡವಾಳವಾಗಿದೆ. 2013-2014ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗಾಗಿ ಮಾಡಿದ ಬಂಡವಾಳದ ವೆಚ್ಚದ ಒಂಬತ್ತು ಪಟ್ಟು ಹೆಚ್ಚು ಇಂದಿನ ಹಂಚಿಕೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತೀಯ ರೈಲ್ವೆ ಅಡಿಯಲ್ಲಿ ಮೂರು ಪ್ರಮುಖ ಕಾರಿಡಾರ್ ಯೋಜನೆ ಆರಂಭಗೊಳ್ಳಲಿವೆ. ರೈಲ್ವೆ ಬಹು-ಮಾದರಿ ಸಂಪರ್ಕವನ್ನು ಸಕ್ರಿಯಗೊಳಿಸಲು, ಪ್ರಯಾಣದ ವೇಗವನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಈ ಯೋಜನೆಗಳನ್ನು ಪ್ರಧಾನಮಂತ್ರಿ ಗತಿ ಶಕ್ತಿ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ ಎಂದರು.
ಮೂರು ಕಾರಿಡಾರ್ ಯೋಜನೆ ಮಾಹಿತಿ
* ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್.
* ಪೋರ್ಟ್-ಕನೆಕ್ಟಿವಿಟಿ ಕಾರಿಡಾರ್.
* ಹೆಚ್ಚಿನ ದಟ್ಟಣೆಯ ಸಾಂದ್ರತೆಯ ಕಾರಿಡಾರ್.
ಸದ್ಯ ರೈಲುಗಳ ದಟ್ಟಣೆಯ ಇರುವ ಕಾರಿಡಾರ್‌ಗಳಲ್ಲಿ ದಟ್ಟಣೆ ಕಡಿಮೆಯಾದರೆ, ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆಯೂ ಕಡಿಮೆಯಾಗುತ್ತದೆ. ಇದು ಪ್ರಯಾಣಿಕರಿಗೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೂ ಇದು ಅನುಕೂಲವಾಗಲಿದೆ.

ವಂದೇ ಭಾರತ್ ಬೋಗಿಗೆ ಪರಿವರ್ತನೆ
2019ರಿಂದ ಮೊದಲ ಪ್ರಯಾಣವನ್ನು ಪ್ರಾರಂಭಿಸಿದ ವಂದೇ ಭಾರತ್, ಕಳೆದ ಐದು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಮೂಲಾಧಾರವಾಗಿದೆ. ಜನರಿಂದ ಈ ರೈಲಿಗೆ ಭರಪೂರ ಸ್ಪಂದನೆ ದೊರೆತಿದೆ. ಇದು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಆಗಿದ್ದು, ದೇಶದ ಹಲವಾರು ಸ್ಥಳಗಳ ನಡುವೆ ಸಂಪರ್ಕವನ್ನು ಸುಲಭ ಮತ್ತು ವೇಗಗೊಳಿಸಿದೆ.
ಈ ವಿಬಿ ರೈಲು ಯೋಜನೆಗೆ ಬಜೆಟ್ ನಲ್ಲಿ, ವಿತ್ತ ಸಚಿವರು ಸೀತಾರಾಮನ್ 40,000 ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ರೈಲು ಬೋಗಿಗಳಾಗಿ ಪರಿವರ್ತಿಸಲಾಗುವುದು. ಪ್ರವಾಸೋದ್ಯಮವನ್ನು ಹೆಚ್ಚಿಸಲು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಸ್ವದೇಶ್ ದರ್ಶನ್ ಯೋಜನೆ ಪ್ರಸ್ತಾಪ
ಪ್ರವಾಸೋದ್ಯಮವನ್ನು ಉತ್ತೇಜಿಸಲು 2014-15ರಲ್ಲಿ ಪ್ರವಾಸೋದ್ಯಮ ಸಚಿವಾಲಯವು ಪ್ರಾರಂಭಿಸಿದ ಸ್ವದೇಶ್ ದರ್ಶನ್ ಯೋಜನೆಯನ್ನು ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾಯಿತು. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ವಿಶೇಷ ರೈಲುಗಳಲ್ಲಿ ಹಲವಾರು ಥೀಮ್ ಆಧಾರಿತ ಪ್ರವಾಸಿ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ. ಇದರಿಂದ ನಮ್ಮ ಸಂಸ್ಕೃತಿ ಪರಂಪರೆ ಇತರರಿಗೂ ತಿಳಿಯುವಂತಾಗಿದೆ ಎಂದರು.
ದೇಶದಲ್ಲಿ ಸದ್ಯ ಮಹಾಪರಿನಿರ್ವಾನ್ ಎಕ್ಸ್‌ಪ್ರೆಸ್, ಭಾರತ್ ದರ್ಶನ್ ರೈಲುಗಳು, ಪುಂಜ್ ತಖ್ತ್ ರೈಲು, ಪ್ಯಾಲೇಸ್ ಆನ್ ವೀಲ್ಸ್, ಡೆಕ್ಕನ್ ಒಡಿಸ್ಸಿ ಸೇರಿದಂತೆ ಕೆಲವು ಪ್ರವಾಸೋದ್ಯಮ ರೈಲುಗಳಿವೆ. ಇದರಿಂದ ಮಹತ್ವದ ಸ್ಥಳಗಳಿಗೆ ಭೇಟಿ ನೀಡುವುದು, ಉತ್ತಮ ಪ್ರಯಾಣದ ಅನುಭವ ಸಾಧ್ಯವಾಗಿದೆ.
ಮುಂದಿನ ದಿನಗಳಲ್ಲಿ ಸಾಮಾನ್ಯ ರೈಲ್ವೆ ಬೋಗಿಗಳ ಪರಿವರ್ತನೆ ವಂದೇ ಭಾರತ್ ರೈಲ್ವೆ ಉಪಕ್ರಮಕ್ಕೆ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications