Firecrackers Ban: ರೈಲು, ಬಸ್‌ಗಳಲ್ಲಿ ಪಟಾಕಿ ಸಾಗಾಣೆ ನಿಷೇಧ: ಸಿಕ್ಕಿಬಿದ್ದರೆ ಏನಿದೆ ಗೊತ್ತಾ ಶಿಕ್ಷೆ?
ಬೆಂಗಳೂರು, ಅಕ್ಟೋಬರ್ 16: ದೀಪಾವಳಿ ಹಬ್ಬ ಬಂತೆಂದರೆ ಸಾಕು ಊರುಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿರುತ್ತದೆ. ಮುಂದಿನ ವಾರ ಇರುವ ಬೆಳಕಿನ ಹಬ್ಬ ದೀಪಾವಳಿಯನ್ನು ಬಣ್ಣ ಬಣ್ಣದ ದೀಪಗಳ ಬೆಳಗುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಅದಕ್ಕಾಗಿ ನಾಗರಿಕರು ತಾವಿದ್ದ ಸ್ಥಳದಲ್ಲಿ ಪಟಾಕಿ ಖರೀಸಿದರೆ ತೊಂದರೆ ಇಲ್ಲ. ಆದರೆ ತಮ್ಮ ಊರುಗಳಿಗೆ ತೆರಳುವಾಗ ಬೇರೆ ಕಡೆಯಿಂದ ರೈಲಿನಲ್ಲಿ ಪಟಾಕಿ ಕೊಂಡ್ಯೊಯ್ದರೆ ಕಾನೂನು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಹೌದು, ಇದು ಕೇವಲ ರೈಲುಗಳಿಗೆ ಮಾತ್ರವಲ್ಲದೇ ರಾಜ್ಯ ಸಾರ್ವಜನಿಕ ಸಾರಿಗೆ ಪ್ರಯಾಣಿಕರಿಗೂ ಅನ್ವಯವಾಗುತ್ತದೆ. ಈಗಾಗಲೇ ಪ್ರಯಾಣಿಕರು ಹಬ್ಬದ ಪ್ರಯುಕ್ತ ಹಾಗೂ ಇತರ ಸಂದರ್ಭಗಳಲ್ಲಿ ಪಟಾಕಿಗೆ ಹಾಗೂ ಸ್ಪೋಟಗೊಳ್ಳೂವಂತಹ ವಸ್ತುಗಳ ಸಾಗಾಣೆಯನ್ನು ರೈಲ್ವೆ ಇಲಾಖೆ, ರಾಜ್ಯ ಸಾರಿಗೆ ಇಲಾಖೆ ನಿಷೇಧಿಸಿವೆ. ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ತಿಳಿಸಿವೆ. ಸದ್ಯ ಈ ಬಗ್ಗೆ ರೈಲ್ವೆ ಇಲಾಖೆಯು ಒಂದು ವಾರದಿಂದಲೂ ಜಾಗೃತಿ ಮೂಡಿಸುತ್ತಿದೆ. ಒಂದು ವೇಳೆ ರೈಲಿನಲ್ಲಿ ಪಟಾಕಿ ಸಾಗಾಣೆ ಕಂಡು ಬಂದರೆ ಏನು ಶಿಕ್ಷೆ, ದಂಡ ವಿದೆ ಎಂಬ ಮಾಹಿತಿ ನೀವು ತಿಳಿಯಿರಿ.

ನಾಗರಿಕರ ಸುರಕ್ಷತೆ, ಜೀವ ರಕ್ಷಣೆಗೆ ಆದ್ಯತೆ
ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ ಮತ್ತು ಅಂತಾರಾಜ್ಯಗಳಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ಪಟಾಕಿ ಅಥವಾ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಯಬೇಕೆಂದು ರೈಲ್ವೆ ಇಲಾಖೆ ಒತ್ತಾಯಿಸಿದೆ. ರೈಲ್ವೆ ಸುರಕ್ಷತಾ ನಿಯಮಗಳ ಅಡಿಯಲ್ಲಿ ಅಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಜೀವಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಎಲ್ಲಾ ಪ್ರಯಾಣಿಕರು ಜವಾಬ್ದಾರಿಯುತವಾಗಿ ಪ್ರಯಾಣಿಸಬೇಕು. ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಸುರಕ್ಷಿತ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ನೀವು ಪಟಾಕಿ ತರುವಾಗ, ಕೊಳ್ಳುವಾಗ ಜವಾಬ್ದಾರಿಯುತವಾಗಿ ಪ್ಯಾಕ್ ಮಾಡಲು ಮರೆಯದಿರಿ. ನೀವು ನಿಮ್ಮ ಮಕ್ಕಳು, ಸ್ನೇಹಿತರು, ಕುಟುಂಬಸ್ಥರ ಸುರಕ್ಷತೆಗೆ ಆದ್ಯತೆ ನೀಡಬೇಕು. ಹಬ್ಬದ ವೇಳೆ ಪ್ರಯಾಣವನ್ನು ನಿಯಮಗಳಡಿ ಆಚರಣೆಗಳಂತೆ ಮಾಡೋಣ ಎಂದು ನೈಋತ್ಯ ರೈಲ್ವೆ ವಲಯ ಕರೆ ನೀಡಿದೆ.
ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು?
ಒಂದು ವೇಳೆ ರೈಲಿನಲ್ಲಿ ಪಟಾಕಿ ತೆಗೆದುಕೊಂಡು ಹೋದರೆ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಅಂತಹ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅವರ ವಿರುದ್ಧ ಶಿಕ್ಷೆ ಮತ್ತು ದಂಡ ವಿಧಿಸುತ್ತದೆ. ನಿಯಮ ಉಲ್ಲಂಘಿಸಿದರೆ, 3 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹5,000 ದಂಡ ವಿಧಿಸಬಹುದು. ಕೆಲವೊಂದು ಪ್ರಕರಣಗಳಲ್ಲಿ ಈ ಎರಡನ್ನೂ ವಿಧಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರಯಾಣಿಕರ ಸುರಕ್ಷತೆ ಮತ್ತು ರೈಲಿಗೆ ಸಂಭವಿಸಬಹುದಾದ ಗಂಭೀರ ಅಪಾಯಗಳನ್ನು ತಡೆಯಲು ಕಟ್ಟುನಿಟ್ಟಾದ ನಿಯಮ ಇದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಯಾವ ಕಾಯ್ದೆಯಡಿ ಕ್ರಮ ಕೈಗೊಳ್ಳಾಗುತ್ತದೆ?
* ಕಾನೂನು ಕ್ರಮ: ತಪ್ಪಿತಸ್ಥರ ವಿರುದ್ಧ ಭಾರತೀಯ ಕಾಯ್ದೆ ಆಯ್ಕೆಯ ಸೆಕ್ಷನ್ 164ರ ಅಡಿಯಲ್ಲಿ ಕ್ರಮಗೊಳ್ಳಲಾಗುತ್ತದೆ.
* ಶಿಕ್ಷೆ ಏನು: 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹5,000 ದಂಡ.
* ಕಟ್ಟುನಿಟ್ಟಾದ ನಿಯಮ: ರೈಲುಗಳಲ್ಲಿ ಬೆಂಕಿ ಹತ್ತಿಕೊಳ್ಳುವ ಮತ್ತು ಸ್ಫೋಟಗೊಳ್ಳುವ ವಸ್ತುಗಳನ್ನು ಸಂಪೂರ್ಣವಾಗಿ |ಸಾಗಿಸುವುದನ್ನು ನಿಷೇಧಿಸಲಾಗಿದೆ.
* ಕರ್ನಾಟಕ ಸಾರಿಗೆ ಇಲಾಖೆ ಸಹ ಬಸ್‌ಗಳಲ್ಲಿ ಪಟಾಕಿ ಒಯ್ಯವುದನ್ನು ನಿಷೇಧಿಸಿ ಜನರ ರಕ್ಷಣೆಗೆ ಆದ್ಯತೆ ನೀಡಿದೆ. ಒಯ್ದದ್ದು ಗೊತ್ತಾದರೆ ಕಾನೂನು ರಿತ್ಯಾ ಕ್ರಮಗಳ ಜರುಗಿಸುವುದಾಗಿ ಈ ಹಿಂದಿನ ಆದೇಶದಲ್ಲಿ ತಿಳಿಸಿದೆ.












Click it and Unblock the Notifications