ರೈಲ್ವೆ ನಿಲ್ದಾಣಗಳು ಹಾಗೂ ರೈಲಿನಲ್ಲಿ ಶೀಘ್ರ ಉಚಿತ ವೈಫೈ
ಬೆಂಗಳೂರು, ಮಾರ್ಚ್ 26: ರೈಲು ಸಂಚರಿಸುವ ಸಾಕಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್ ವರ್ಕ್ ನ ಸಮಸ್ಯೆ ಇದೆ, ಇದರಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಇದೆಲ್ಲವನ್ನು ಗಮನಸಿದ ನೈಋತ್ಯ ರೈಲ್ವೆಹಾಗೂ ಈಶಾನ್ಯ ರೈಲ್ವೆ ಇಲಾಖೆಯು ರೈಲು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಅಳವಡಿಸಲು ಮುಂದಾಗಿದೆ.
ಇದರಿಂದ ರೈಲು ಹಾಗೂ ರೈಲ್ವೆ ನಿಲ್ದಾಣ ಎಲ್ಲಿಯೇ ಇದ್ದರೂ, ಸಂಬಂಧಿಕರು, ಸ್ನೇಹಿತರನ್ನು ಸಂಪರ್ಕಿಸಬಹುದಾಗಿದೆ. ರಾಜ್ಯಾದ್ಯಂತ ರೈಲ್ವೆ ಪ್ರಯಾಣಿಕರಿಗಾಗಿ ಉಚಿತ ವೈಫೈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಹಲವಾರು ಬಸ್ ನಿಲ್ದಾಣಗಳು ಹಾಗೂ ಸತಿ ಹೆಚ್ಚು ಜನರು ಓಡಾಡುವ ಪ್ರದೇಶಗಳಲ್ಲಿ ಅಲ್ಲಲ್ಲಿ ವೈಫೈ ಅಳವಡಿಸುತ್ತಿದ್ದಾರೆ.

ಸುಮಾರು 1ಸಾವಿರಕ್ಕೂ ಹೆಚ್ಚು ರೈಲ್ವೆ ನಿಲ್ದಾಣ ಹಾಗೂ 1900ಕ್ಕೂ ಹೆಚ್ಚು ದಕ್ಷಿಣ ರೈಲ್ವೆ ಹಾಗೂ ಈಶಾನ್ಯ ರೈಲ್ವೆಯ 400ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ಹಾಗೂ 600 ರೈಲುಗಳಲ್ಲಿ ವಯಫೈ ಅಳವಡಿಸಲಾಗುತ್ತದೆ.
ಈಗಾಗಲೇ ಲಖನೌನಲ್ಲಿ 350 ರೈಲುಗಳಿಗೆ ವೈಫೈ ಅಳವಡಿಸಲಾಗಿದೆ.












Click it and Unblock the Notifications