#RahulStumped? ನೋ ವೆ ಅಂತಾರೆ ಕಾರ್ಮೆಲ್ ಯುವತಿ
ಬೆಂಗಳೂರು, ನವೆಂಬರ್ 27 : #RahulStumped. ಟ್ವಿಟ್ಟರುಗಳಲ್ಲಿ, ವಾಟ್ಸಾಪ್ ಗಳಲ್ಲಿ, ಫೇಸ್ ಬುಕ್ ಗಳಲ್ಲಿ, ಟಿವಿ ಚಾನಲ್ಲುಗಳಲ್ಲಿ, ವೃತ್ತಿಪತ್ರಿಕೆಗಳಲ್ಲಿ, ರಾಜಕೀಯ ಅಂಗಳದಲ್ಲಿ, ವಠಾರಗಳಲ್ಲಿ, ಅಡುಗೆಮನೆಗಳಲ್ಲಿ ಚರ್ಚಿತವಾಗುತ್ತಿರುವ ಬಹುಚರ್ಚಿತ ವಿಷಯ. ಬಹುತೇಕ ಕಡೆಗಳಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯಕ್ಕೆ ಈಡು ಮಾಡಿದವರೇ ಹೆಚ್ಚು.
ಆದರೆ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಿದ ವಿದ್ಯಾರ್ಥಿನಿಯೊಬ್ಬರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಸುದೀರ್ಘ ಪತ್ರ ಈ ಸಂವಾದದ ಪಾಸಿಟಿವ್ ಸೈಡನ್ನು ತೆರೆದಿಟ್ಟಿದೆ. ಎಲೆಕ್ಸಿರ್ ನಹಾರ್ ಎಂಬ ಯವತಿ ಬರೆದ ಲೇಖನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿ ಅವರು ಸ್ವಚ್ಛ ಭಾರತ ಅಭಿಯಾನ ಮತ್ತು ಮೇಕ್ ಇನ್ ಇಂಡಿಯಾದ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಸಮೂಹದಿಂದ ಬಂದ ಕೂಗನ್ನು 'ತೀರ ಅತೀ' ಎನ್ನುವಂತೆ ಚರ್ಚಿಸಲಾಗುತ್ತಿದೆ ಎಂಬುದು ಆಕೆಯ ನಿಲುವು. ತನ್ನ ವಾದಕ್ಕೆ ಪುಷ್ಟಿ ನೀಡುವಂತೆ, ಪ್ರಸಾದ್ ಬಿದ್ದಪ್ಪ ಮಾಡೆಲ್ ಮ್ಯಾನೇಜ್ಮೆಂಟ್ ನಲ್ಲಿ ರೂಪದರ್ಶಿ ಆಗಿದ್ದ ಎಲೆಕ್ಸಿರ್, ಲೇಖನಕ್ಕೆ ಭಾರೀ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. [ರಾಹುಲ್, ನೀವು ಹೇಳಿದ್ದಕ್ಕೆಲ್ಲ ಜೈ ಅನ್ನುವವರಲ್ಲ ನಾವು!]

ರಾಹುಲ್ ಗಾಂಧಿ ಅವರು, 'ಸ್ವಚ್ಛ ಭಾರತ ಯಶಸ್ವಿಯಾಗಿದೆಯೆ?' ಎಂದಿದ್ದಕ್ಕೆ, ಗುಂಪಿನಿಂದ 'ಹೌದು/ಇಲ್ಲ' ಎಂಬ ಕೂಗು ಕೇಳಿಬಂದಿತ್ತು. ಮೇಕ್ ಇನ್ ಇಂಡಿಯಾ ಕುರಿತು ಕೇಳಿದ ಇದೇ ರೀತಿಯ ಪ್ರಶ್ನೆಗೂ 'ಹೌದು/ಇಲ್ಲ' ಎಂಬ ವಿದ್ಯಾರ್ಥಿನಿಯರ ಕೂಗಿಗೆ ರಾಹುಲ್ ಕಕ್ಕಾಬಿಕ್ಕಿಯಾಗಿದ್ದರು ಮತ್ತು ಮುಜುಗರಕ್ಕೊಳಗಾಗಿದ್ದರು.
'ಬೆಂಗಳೂರಿನ ಹುಡುಗಿಯರು ತುಂಬಾ ಸ್ಮಾರ್ಟ್ ರಾಹುಲ್, ಮತ್ತೆ ಯಾವುದಾದರೂ ಕಾಲೇಜಿಗೆ ಹೋಗುವ ಮುನ್ನ ಯೋಚಿಸಿ' ಎಂಬೆಲ್ಲ ಟ್ವೀಟುಗಳು ಹರಿದಾಡತೊಡಗಿದ್ದವು. ಸ್ಕ್ರಿಪ್ಟ್ ಇಲ್ಲದಿದ್ದರೆ ಇಂಥ ಅವಘಡ ಸಂಭವಿಸುತ್ತದೆ ಎಂದು ಮಾತಾಡುವವರಿಗೆ ಎಲೆಕ್ಸಿರ್ ನಹಾರ್ ಮಾತಿನ ಪ್ರಹಾರ ಮಾಡಿದ್ದಾರೆ. ಅವರು ಇನ್ನೂ ಏನೇನು ಹೇಳಿದ್ದಾರೆ ಕೆಳಗಿನ ಅವರ ಸ್ಟೇಟಸ್ ಓದಿರಿ. [ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ ರಾಹುಲ್!]
An Open Letter to #RahulStumped Enthusiasts Those ‘No Ragging’ posters you vaguely see around educational institutions...
Posted by Elixir Nahar on25 November 2015












Click it and Unblock the Notifications