'ಬಸವಣ್ಣ ಸಮಾಜಕ್ಕೆ ಬೆಳಕು' : ಶೆಟ್ಟರ್ ಮೂಲಕ ಲಿಂಗಾಯತರಿಗೆ ರಾಹುಲ್ ಗಾಳ
ರಾಜ್ಯ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಕರ್ನಾಟಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಲಿಂಗಾಯತರನ್ನು ಸೆಳೆಯುವ ಪ್ರಯತ್ನ ಮಾಡಿದರು.
ದೆಹಲಿಯಿಂದ ಹುಬ್ಬಳಿಗೆ ಆಗಮಿಸಿದ ರಾಹುಲ್ ಗಾಂಧಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಕೂಡಲ ಸಂಗಮಕ್ಕೆ ತೆರಳಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ರಾಹುಲ್ ಗಾಂಧಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಶಾಲು ಹೊದಿಸಿ, ಬಸವಣ್ಣ ಅವರ ಮೂರ್ತಿ ನೀಡುವ ಮೂಲಕ ಗೌರವಿಸಲಾಯಿತು.

ಬಳಿಕ ಮಾತನಾಡಿದ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕರೆಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಸ್ವಾಮಿಜಿ ಅವರು ಮಾತನಾಡುವಾಗ ಹೇಳಿದರು, ಪ್ರಜಾಪ್ರಭುತ್ವವನ್ನು ಬಸವಣ್ಣ ಅವರು ರಕ್ಷಣೆ ಮಾಡಿದರು. ಇದು ಸತ್ಯ. ಇದನ್ನು ಅಲ್ಲಗಳಿಯಲು ಆಗುವುದಿಲ್ಲ. ಪ್ರಜಾಪ್ರಭುತ್ವ, ಸಂಸದೀಯ ಸಂಸತ್ತು ಬರಲು ಬಸವಣ್ಣ ನವರ ಅನುಭವ ಮಂಟಪ ಕಾರಣ. ಸಮಾಜದಲ್ಲಿ ಅವತ್ತು ಕತ್ತಲು ಇತ್ತು. ಆಗ ಬಸವಣ್ಣನವರು ಸಮಾಜಕ್ಕೆ ಬೆಳಕನ್ನು ತಂದು ಕೊಟ್ಟರು. ಅದು ಈಗಲೂ ಬೆಳಕನ್ನು ನೀಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಸವಣ್ಣನಿಗೂ ಇತರರಿಗೂ ಇರುವ ವ್ಯತ್ಯಾಸ ಏನು? ರಾಹುಲ್ ಗಾಂಧಿ
ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಸವಣ್ಣನಿಗೂ ಇತರರಿಗೂ ಇರುವ ವ್ಯತ್ಯಾಸ ಏನು? ಎನ್ನುವುದುಕ್ಕೆ ಉತ್ತರಿಸಿದರು. 'ಇನ್ನೊಬ್ಬರಿಗೆ ಸವಾಲು ಮಾಡುವುದು ತುಂಬಾ ಸರಳ ನಮ್ಮನ್ನು ನಾವೇ ಸವಾಲು ಹಾಕಿಕೊಳ್ಳುವುದು ಕಷ್ಟ. ಸಣ್ಣ ವಯಸ್ಸಿನಲ್ಲಿ ಬಸವಣ್ಣನವರಿಗೆ ಇಂತಹ ದೊಡ್ಡ ವಿಚಾರಗಳು ಹೇಗೆ ಬಂತು? ಇದಕ್ಕೆ ಸ್ವಾಮೀಜಿಗಳು ಉತ್ತರ ಕೊಟ್ಟರು. ಈ ವಿಚಾರ ಯಾಕೆ ಬಂತು ಅಂದರೆ ಬಸವಣ್ಣ ಅವರ ಗೆಳೆಯರ ಪರಿಸ್ಥಿತಿ ನೋಡಿ ಅವರಿಗೆ ಈ ರೀತಿ ಬದಲಾವಣೆ ತರಬೇಕು ಎಂದು ಮನಸ್ಸಾಯಿತು. ಜಾತಿ ವಿರುದ್ಧ, ತಿರಸ್ಕಾರದ ಬಗ್ಗೆ, ಸಮಾಜದ ಬಗ್ಗೆ ತಮ್ಮನ್ನು ತಾವು ಸವಾಲು ಹಾಕಿಕೊಳ್ಳುವ ಪ್ರಯತ್ನ ಮಾಡಿದರು. ಪ್ರಶ್ನೆ ಕೇಳಿಕೊಂಡ ಮೇಲೆ ಹೃದಯದಲ್ಲಿ ಅನಿಸಿದ್ದು ಜೀವನ ಪೂರ್ತಿ ಅದನ್ನು ಮಾಡಲು ನಿರ್ಧರಿಸಿದರು. ಬಹಳ ಜನ ಸವಾಲು ಹಾಕಿಕೊಳ್ಳುತ್ತಾರೆ. ಆದರೆ ಸಮಾಜದಲ್ಲಿ ಧ್ವನಿ ಎತ್ತುವುದಿಲ್ಲ. ಅವರಿಗೆ ಸತ್ಯದ ಬಗ್ಗೆ ಗೊತ್ತಾಗುತ್ತದೆ. ಆದರೆ ಪ್ರಶ್ನೆ ಮಾಡುವುದಿಲ್ಲ. ಇದೇ ಬಸವಣ್ಣನಿಗೂ ಇತರರಿಗೂ ಇರುವ ವ್ಯತ್ಯಾಸ ಎಂದು ರಾಹುಲ್ ಗಾಂಧಿ ಹೇಳಿದರು.

'ಅಸಮಾನತೆಯ ಬಗ್ಗೆ ಪ್ರಶ್ನೆ ಮಾಡಿದ ಬಸವಣ್ಣ'
ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಬಸವಣ್ಣ ಅಸಮಾನತೆಯ ಬಗ್ಗೆ ಪ್ರಶ್ನೆ ಮಾಡಿದರು. ಅದನ್ನು ಸಮಾಜ ಮುಂದೆ ಅನುಷ್ಠಾನ ಮಾಡಿದರು. ಬಸವಣ್ಣನ ಮುಂದೆ ಹೂವು ಹಾಕಿರುವುದಕ್ಕೆ ಕಾರಣ ಇದೆ. ಇದನ್ನು ನೀವು ತಿಳಿದುಕೊಳ್ಳಬೇಕಾಗಿದೆ. ಸತ್ಯವನ್ನು ತೆರದಿಡುವುದು ಸಮಾಜದಲ್ಲಿ ಅಷ್ಟು ಸುಲಭವಿಲ್ಲ. ಬಸವಣ್ಣ ಅವರನ್ನು ಹೆದರಿಸಲಾಯಿತು, ಬೆದರಿಸಲಾಯಿತು ಆದರೆ ಆವರು ಹಿಂದೆ ಸರಿಲಿಲ್ಲ. ಅವರು ಗಟ್ಟಿಯಾಗಿ ನಿಂತರು. ಹೀಗಾಗಿ ನಾವು ಅವರ ಪಾದಕ್ಕೆ ಹೂವನ್ನು ಸಲ್ಲಿಸಿದ್ದೇವೆ' ಎಂದು ಹೇಳಿದರು.
'ಸಮಾನತೆಯನ್ನು ಸಮಾಜಕ್ಕೆ ಸಾರಿದ ಬಸವಣ್ಣ'
ಎಲ್ಲರೂ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುತ್ತಾರೆ. ಸತ್ಯವನ್ನು ಅರಿತುಕೊಳ್ಳುತ್ತಾರೆ. ಆದರೆ ಸಮಾಜದಲ್ಲಿ ಅದನ್ನು ಹೇಳಲು ಮುಂದಾಗುವುದಿಲ್ಲ. ಅಂತವರನ್ನು ನಾವು ನೆನಪಿಸಿಕೊಳ್ಳುವುದಿಲ್ಲ. ಆದರೆ ತಮ್ಮ ಅರಿವಿಗೆ ಬಂದ ಸತ್ಯವನ್ನು ಬಸವಣ್ಣ ಸಮಾಜಕ್ಕೆ ಸಾರಿದರು. ಇಂದು ನನಗೆ ಬಂದು ತುಂಬಾ ಸಂತೋಷವಾಗಿದೆ. ಬಸವಣ್ಣ ಅವರು ಹೋರಾಟ ಮಾಡಿದ ರೀತಿಯನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ನನಗೆ ಈ ಸಂದರ್ಭದಲ್ಲಿ ಅದರನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಬಸವಣ್ಣ ಅವರು ನಮ್ಮ ಎಲ್ಲರಿಗೂ ಮಾರ್ಗದರ್ಶನವಾಗಿದ್ದಾರೆ ಎಂದು ರಾಹುಲ್ ಗಾಂಧಿ ಬಸವ ಜಯಂತಿಯಂದು ಕೂಡಲ ಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
'ನಾನು ಬಸವಣ್ಣ ಅವರ ಸಿದ್ಧಾಂತಗಳನ್ನು ಓದಿದ್ದೇನೆ' ರಾಹುಲ್ ಗಾಂಧಿ
ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 'ನಾನು ಬಸವಣ್ಣ ಸಿದ್ಧಾಂತಗಳನ್ನು ಓದಿದ್ದೇನೆ. ಅವರು ತಮ್ಮ ಸಿದ್ಧಾಂತಗಳಲ್ಲಿ ಹೇಳಿದ್ದಾರೆ ನೀವು ಹೆದರಬೇಡಿ, ಸತ್ಯದ ಮಾರ್ಗದದಲ್ಲಿ ನಡೆಯಿರಿ ಎಂದು. ಆದರೆ ಕೆಲವು ಮಂದಿ ಮಾತ್ರ ಇದನ್ನು ಪಾಲಿಸುತ್ತಾರೆ. ಅದರಲ್ಲಿ ಬಸವಣ್ಣ ಅವರು ಮೊದಲಿಗರು ಹೀಗಾಗಿ ಅವರು ಸಮಾಜದಲ್ಲಿ ಬೆಳಕು ಆಗಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
-
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್












Click it and Unblock the Notifications