ಸಾರ್ಥಕ ಸಮಾವೇಶಲ್ಲಿ ಮೋದಿ ಲೇವಡಿ ಮಾಡಿದ ರಾಹುಲ್!

ಬೆಂಗಳೂರು, ಅ.16 : 'ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ಸಮಯವನ್ನು ಕಡಿಮೆ ಮಾಡಿದ್ದಾರೆ. ಏಕೆಂದರೆ ಅವರಿಗೆ ಮಾತನಾಡಲು ಏನೂ ಇಲ್ಲ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬುಧವಾರ ಕೆಪಿಸಿಸಿ ಆಯೋಜಿಸಿದ್ದ 'ಸಾರ್ಥಕ ಸಮಾವೇಶ' ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ಮೊದಲ ಬಾರಿಗೆ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಮೋದಿ ಮಿತ್ರ ರಾಷ್ಟ್ರಗಳ ನಡುವೆ ಸಮಸ್ಯೆ ಸೃಷ್ಟಿಸಿದ್ದಾರೆ' ಎಂದು ಆರೋಪಿಸಿದರು.

Rahul Gandhi address party rally in Bengaluru on August 16, 2017, speech highlights

'ನರೇಂದ್ರ ಮೋದಿ ತಮ್ಮ ಭಾಷಣದ ಸಮಯವನ್ನು ಕಡಿತಗೊಳಿಸಿದ್ದಾರೆ. ಏಕೆಂದರೆ ಅವರ ಬಳಿ ಮಾತನಾಡಲು ಏನೂ ಇಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಅವರು ಹೇಳಿದ್ದರು. ಆದರೆ, ಎಂಟು ವರ್ಷಗಳಲ್ಲೇ ನಿರುದ್ಯೋಗ ಅಧಿಕವಾಗಿದೆ. ಮೋದಿ ಇದನ್ನು ಆಗಸ್ಟ್ 15ರ ಭಾಷಣದಲ್ಲಿ ಹೇಳಿಲ್ಲ' ಎಂದು ದೂರಿದರು.

ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಸಾಮರಸ್ಯದ ಬೀಡಾಗಿರುವ ಕರ್ನಾಟಕದಲ್ಲಿ ಕೋಮುವಾದದ ಮೂಲಕ ಶಾಂತಿಯನ್ನು ಕದಡಲು ಪ್ರಯತ್ನಿಸುವವರಿಗೆ ರಾಜ್ಯದ ಜನತೆ ತಕ್ಕ ಬುದ್ಧಿ ಕಲಿಸಲಿದ್ದಾರೆ. ಅಧೀನದಲ್ಲಿರುವ ಇಲಾಖೆಗಳ ಮೂಲಕ ರಾಜಕೀಯ ದ್ವೇಷದಿಂದ ದಾಳಿ ನಡೆಸುವ ಕ್ರಮವನ್ನು ನಾವು ಕಠಿಣವಾಗಿ ವಿರೋಧಿಸುತ್ತೇವೆ ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+