Double-Decker Flyover: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಇಂದು ಓಪನ್, ವಿವರಗಳು ಇಲ್ಲಿವೆ
ಬೆಂಗಳೂರು, ಜೂನ್. 15: ಬೆಂಗಳೂರಿನ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಮೇಲ್ಸೇತುವೆ, ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಗೆ 3.3 ಕಿಲೋಮೀಟರ್ ದೂರವನ್ನು ಸಂಪರ್ಕಿಸುತ್ತದೆ. ಹಲವು ವಿಳಂಬಗಳ ನಂತರ ಜೂನ್ 15 ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ ಸಿದ್ಧವಾಗಿದೆ.
ಈ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಯು ಎರಡು ಹಂತಗಳನ್ನು ಒಳಗೊಂಡಿದೆ. ಮೊದಲನೆಯದು ಕೆಳ ಹಂತ, ನೆಲದಿಂದ ಎಂಟು ಮೀಟರ್ ಎತ್ತರದಲ್ಲಿ, ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಎರಡನೇಯದು ಮೇಲಿನ ಹಂತವು 16 ಮೀಟರ್ ಎತ್ತರದಲ್ಲಿದೆ. ಇದನ್ನು ಮೆಟ್ರೋ ಮಾರ್ಗಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಐಟಿ ಕೇಂದ್ರಗಳಿಗೆ ಸುಲಭ ಪ್ರಯಾಣ
ಈ ಡಬಲ್ ಡೆಕ್ಕರ್ ಮೇಲ್ಸೇತುವೆ ಕಾರ್ಯಾಚರಣೆಯಿಂದ ನಂತರ, ಫ್ಲೈಓವರ್ ದಕ್ಷಿಣ ಬೆಂಗಳೂರು ಮತ್ತು ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಪ್ರಮುಖ ಐಟಿ ಕೇಂದ್ರಗಳ ನಡುವಿನ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಇದು ಎಚ್‌ಎಸ್‌ಆರ್ ಲೇಔಟ್ ಮತ್ತು ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ಸಿಲಿಕಾನ್ ಸಿಟಿಯಲ್ಲಿ ಪೀಕ್ ಅವರ್‌ಗಳಲ್ಲಿ ರಸ್ತೆಗಿಳಿಯುವುದು ದೊಡ್ಡ ಕಷ್ಟವೇ ಸರಿ. ಈ ಡಬಲ್ ಡೆಕ್ಕರ್ ಮೇಲ್ಸೇತುವೆಯಿಂದಾಗಿ ಪೀಕ್ ಅವರ್‌ಗಳಲ್ಲಿ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವ ನಿರೀಕ್ಷೆಯಿದೆ. ಆರಂಭದಲ್ಲಿ, ಫ್ಲೈಓವರ್‌ನಲ್ಲಿ ವಾಹನಗಳ ಸಂಚಾರವು ರಾಗಿಗುಡ್ಡದಿಂದ ಸಿಲ್ಕ ಬೋರ್ಡ್ ವರೆಗಿನ ಒಂದು ದಿಕ್ಕಿಗೆ ಸೀಮಿತವಾಗಿರುತ್ತದೆ. ಅಧಿಕಾರಿಗಳ ಅಂತಿಮ ತಪಾಸಣೆ ನಡೆಯುತ್ತಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಐದು ಲೂಪ್‌ಗಳು ಮತ್ತು ಇಳಿಜಾರುಗಳ ನಿರ್ಮಾಣವು ನಡೆಯುತ್ತಿದೆ. ಈ ಜೂನ್‌ನಲ್ಲಿ A, B ಮತ್ತು C ರ‍್ಯಾಂಪ್‌ಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಜೂನ್ 2025 ರೊಳಗೆ D ಮತ್ತು E ರ‍್ಯಾಂಪ್‌ಗಳು ಪೂರ್ಣಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ತಿಳಿಸಿದ್ದಾರೆ.

ಈ ಡಬಲ್ ಡೆಕ್ಕರ್ ಫ್ಲೈಓವರ್ ಪೂರ್ಣಗೊಂಡಿರುವುದು ಬೆಂಗಳೂರಿನ ಮೂಲಸೌಕರ್ಯದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು. ಇದು ಸಿಗ್ನಲ್ ಮುಕ್ತ ಕಾರಿಡಾರ್ ಅನ್ನು ರಚಿಸುತ್ತದೆ. ಇಲ್ಲಿ ರಾಗಿಗುಡ್ಡದಿಂದ ವಾಹನಗಳು ಸೆಂಟ್ರಲ್ ಸಿಲ್ಕ್ ಬೋರ್ಡ್ ಕಡೆಗೆ ತಮಗೆ ಅನುಕೂಲವಾಗುವಂತೆ ಯಾವುದೇ ಸಿಗ್ನಲ್ ಕಾಟ ಇಲ್ಲದೆ ಚಲಾಯಿಸಬಹುದು. ಜೊತೆಗೆ ಈ ಫ್ಲೈಓವರ್ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.












Click it and Unblock the Notifications