ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರಕ್ಕೆ ಕಂಟಕವಾಗುವ ಪ್ಲಾಸ್ಟಿಕ್ ಬ್ಯಾಗ್ ಪತ್ತೆಗೆ ಕ್ಯೂಆರ್ ಕೋಡ್

|
Google Oneindia Kannada News

ಬೆಂಗಳೂರು, ಏಪ್ರಿಲ್ 27 : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ನ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ 2016ರಲ್ಲಿ ರಾಜ್ಯಾದ್ಯಂತ ಪ್ಲಾಸ್ಟಿಕ್ ಚೀಲಗಳು, ಫ್ಲೇಕ್ಸ್, ಬ್ಯಾನರ್ ಗಳು, ಪ್ಲೇಟ್ ಗಳು, ಕಪ್ ಗಳು ಮತ್ತು ಸ್ಪೂನ್ ಗಳನ್ನು ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಮತ್ತು ಬಳಕೆ ಮಾಡುವುದನ್ನು ನಿಷೇಧಿಸಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಆದರೆ ಸಾರ್ವಜನಿಕರಲ್ಲಿ ಪ್ಲಾಸ್ಪಿಕ್ ಬಳಕೆಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ವಿಫಲವಾದ ಕಾರಣ ಹೆಚ್ಚು ಪರಿಣಾಮಕಾರಿಯಾಗಿ ಯಶಸ್ವಿಗೊಂಡಿಲ್ಲ. ಇದಕ್ಕೆ ಪರ್ಯಾಯವಾಗಿ ಹಲವು ರೀತಿಯ ಪರಿಸರ ಸ್ನೇಹಿ ಪರಿಕರಗಳು ಮಾರುಕಟ್ಟೆಗೆ ಬಂದರೂ ಅವುಗಳನ್ನು ದೃಢೀಕರಿಸಲು ಯಾವುದೇ ಮಾಪನಗಳು ಲಭ್ಯವಿಲ್ಲ.

ಮೈಸೂರಿನಲ್ಲಿ ನಡೆಯಿತು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮದುವೆ! ಮೈಸೂರಿನಲ್ಲಿ ನಡೆಯಿತು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮದುವೆ!

ಈ ಉದ್ದೇಶದಿಂದಾಗಿ ಭಾರತ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರು ಮೂಲದ ಇಬಾನ್ ಟೆಕ್ ಸೆಲ್ಯೂಷನ್ ಕಂಪನಿ ಜೈವಿಕ ಮಿಶ್ರಣದ ಪಾಲಿಥೀನ್ ಚೀಲಗಳ ದೃಢೀಕರಣ ಪರೀಕ್ಷಿಸಲು ನೂತನ ಕ್ಯೂಆರ್ ಕೋಡ್ ಅನ್ನು ಕಂಡು ಹಿಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

QR Code technology to check low quality plastic bags

ಭಾರತದಂತಹ ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿದೆ. ದಿನನಿತ್ಯದ ಚಟುವಟಿಕೆಗಳಿಗೆ ಪ್ಲಾಸ್ಟಿಕ್ ಅತಿ ಅವಶ್ಯಕ ಎನ್ನುವಂತಾಗಿದೆ. ಆದರೆ ಪ್ಲಾಸ್ಟಿಕ್ ಚೀಲಗಳು ಮಣ್ಣಿನಲ್ಲಿ ಕರಗುವ ಗುಣ ಹೊಂದಿಲ್ಲದಿರುವುದರಿಂದ ಪರಿಸರದ ಮೇಲೆ ಅಪಾರ ಹಾನಿ ಉಂಟು ಮಾಡುತ್ತಿವೆ. ಇದರ ಬದಲಿಗೆ ಸಸ್ಯಜನ್ಯ ಮೂಲದಿಂದ ತಯಾರಿಸುವ ಜೈವಿಕ ಪ್ಲಾಸ್ಟಿಕ್ ಚೀಲಗಳು ಉತ್ತಮ ಪರಿಸರ ಸ್ನೇಹಿ ಆಯ್ಕೆಯಾಗಿದೆ.

ಆದರೆ ಇಂದು ಮಾರುಕಟ್ಟೆಯಲ್ಲಿ ನಕಲಿ ಜೈವಿಕ ಮಿಶ್ರಣದ ಪಾಲಿಥೀನ್ ಚೀಲಗಳ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನು ಕಂಡುಹಿಡಿಯಲು ಕಷ್ಟಸಾಧ್ಯ.

ಲಾಲ್‌ಬಾಗ್‌ನಲ್ಲಿ ಇನ್ನು ಪ್ಲಾಸ್ಟಿಕ್ ಬ್ಯಾಗ್ ಒಯ್ಯುವ ಹಾಗಿಲ್ಲ ಲಾಲ್‌ಬಾಗ್‌ನಲ್ಲಿ ಇನ್ನು ಪ್ಲಾಸ್ಟಿಕ್ ಬ್ಯಾಗ್ ಒಯ್ಯುವ ಹಾಗಿಲ್ಲ

ಇದನ್ನ ಅರಿತ ಇಬಾನ್ ಡಿಜಿಟಲ್ ಎಡ್ಜ್ ಅಡ್ವಾನ್ಸ್ ಸೆಲ್ಯೂಷನ್ಸ್ ಪ್ರೈ. ಲಿಮಿಟೆಡ್ ಕಂಪನಿಯೂ ನಕಲಿ ಜೈವಿಕ ಮಿಶ್ರಣದ ಚೀಲಗಳನ್ನು ಪತ್ತೆಹಚ್ಚಲು ಡೈನಾಮಿಕ್ ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ಬಳಸಿದೆ.

ಈ ಕ್ಯೂಆರ್ ಕೋಡ್ ತಂತ್ರಜ್ಞಾನವು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿಯನ್ನು ನೀಡಲಿದ್ದು, ಅದರಲ್ಲಿ ಜೈವಿಕ ಮಿಶ್ರಣದ ಪಾಲಿಥೀನ್ ಚೀಲಗಳನ್ನು ತಯಾರಿಸಿದ ತಯಾರಕರು, ಪಾಲುದಾರರು, ದೃಢೀಕರಣದ ವಿವರ ಹಾಗೂ ಗ್ರಾಹಕರಿಗೆ ಸಂಬಂಧಿಸಿದ ವಿವರಗಳನ್ನು ಪಡೆಯಬಹುದಾಗಿದೆ.

ಇದರಿಂದಾಗಿ ಮಾರುಕಟ್ಟೆಯಲ್ಲಿ ಜೈವಿಕ ಮಿಶ್ರಣದ ಪಾಲಿಥೀನ್ ಚೀಲಗಳು ಅಸಲಿಯೋ ಅಥವಾ ನಕಲಿಯೋ ಎಂದು ಸುಲಭವಾಗಿ ಪತ್ತೆ ಹಚ್ಚುವ ವಿಧಾನವಾಗಿದೆ.

ಪ್ಲಾಸ್ಟಿಕ್ ವಿರುದ್ಧ ಗಾಂಧಿಗಿರಿ: ಪ್ಲಾಗ್ ರನ್‌ಗೆ ನೀವೂ ಹೆಜ್ಜೆ ಹಾಕಿ ಪ್ಲಾಸ್ಟಿಕ್ ವಿರುದ್ಧ ಗಾಂಧಿಗಿರಿ: ಪ್ಲಾಗ್ ರನ್‌ಗೆ ನೀವೂ ಹೆಜ್ಜೆ ಹಾಕಿ

ಈಗಾಗಲೇ ಇಂಡಿಯನ್ ಕಂಪೋಸ್ಟೆಬಲ್ ಪಾಲಿಮರ್ ಅಸೋಸಿಯೇಷನ್ (ಐಸಿಪಿಎ) ಮತ್ತು ತಮಿಳುನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನಿಶಾನೆ ನೀಡಿದೆ. ಅಲ್ಲದೇ ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ಈ ಕ್ಯೂಆರ್ ಕೋಡ್ ಉತ್ತೇಜಿಸಲಿದೆ.

"ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಹಲವಾರು ಪ್ರಯತ್ನ ನಡೆಯುತ್ತಿದ್ದು, ಇದಕ್ಕಾಗಿ ಆನೇಕ ತಯಾರಕರು ಜೈವಿಕ ಮಿಶ್ರಣದ ಪಾಲಿಥೀನ್ ಚೀಲಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಆದರೆ ಆವುಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿದೆ ಎಂದು ಪರಿಶೀಲಿಸಲು ಯಾಂತ್ರಿಕ ಉಪಕ್ರಮಗಳಿಲ್ಲ. ಇದರಿಂದ ಡೈನಾಮಿಕ್ ಕ್ಯೂಆರ್ ಕೋಡ್ ತಂತ್ರಜ್ಞಾನವು ಹೆಚ್ಚು ಉಪಯುಕ್ತವಾಗಲಿದೆ" ಎಂದು ಐಸಿಪಿಎ ಸದಸ್ಯರು ಹಾಗೂ ಪ್ಲಾಸ್ಟೋ ಮ್ಯಾನುಫ್ಯಾಕ್ಚುರಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅಶ್ಫಾಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ ಆರೋಗ್ಯ ಇಲಾಖೆ

ಭಾರತದಲ್ಲಿ ಪ್ರತಿನಿತ್ಯ ಸುಮಾರು 150000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಮತ್ತು ಇದರಲ್ಲಿ ಹೆಚ್ಚು ಪಾಲು ನಕಲಿ ಜೈವಿಕ ಪ್ಲಾಸ್ಟಿಕ್ ಚೀಲಗಳೇ ಆಗಿವೆ. ಇದನ್ನು ಪತ್ತೆಹಚ್ಚುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ.

English summary
QR Code technology to check low quality plastic bags in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X