ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ
ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರಲ್ಲಿ ಮಳೆ ಬಂದರೆ ರಸ್ತೆಗಿಳಿಯಲು ಜನತೆ ಹೆದರುವಂಥ ಪರಿಸ್ಥಿತಿ ಮುಂದುವರೆದಿದೆ. ಸಂಜೆ ಮಳೆಯ ಆರ್ಭಟಕ್ಕೆ ಮತ್ತೊಮ್ಮೆ ಮಹಾನಗರ ಬೆಚ್ಚಿದೆ. ಮಳೆ ಬಗ್ಗೆ ಜಾಗೃತೆಯಿಂದಿರಿ, ಬಿಬಿಎಂಪಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಸಾರ್ವಜನಿಕರು ಇದಕ್ಕೆ ಉತ್ತರವಾಗಿ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ತಗ್ಗು ಪ್ರದೇಶಗಳು ಸೇರಿದಂತೆ ಹಲವೆಡೆ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗ್ಗೆ ಬಿಸಿಲು, ಮಧ್ಯಾಹ್ನಕ್ಕೆ ಮೋಡ ಕವಿದ ವಾತಾವರಣ, ಸಂಜೆ ತುಂತುರು, ರಾತ್ರಿಯಾದರೆ ಭೋರ್ಗರೆಯುವ ಮಳೆ ಅಬ್ಬರದ ನಡುವೆ ಬಿಬಿಎಂಪಿ ಸುಖ ನಿದ್ದೆಯಲ್ಲಿದೆ ಎಂದು ಬೆಂಗಳೂರಿಗರು ಕೆಂಡಕಾರಿದ್ದಾರೆ.
ಮುಂದಿನ 24 ಗಂಟೆಗಳ ಮಳೆ ಮುನ್ಸೂಚನೆ: ರಾಜ್ಯದ ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಕೆಲವೆಡೆ ಉತ್ತಮ ಮಳೆಯಾಗಲಿದ್ದು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ ಎಂದು ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಆದರೆ, ಬಿಬಿಎಂಪಿ ಎಚ್ಚೆತ್ತುಕೊಳ್ಳುವುದು ಯಾವಾಗ, ಗುಂಡಿ ಮುಚ್ಚುವ ನಾಟಕ ಮುಂದುವರೆಸಿದೆ, ಮಳೆ ಹಾನಿ ಬಗ್ಗೆ ಯಾವಾಗ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಟ್ವೀಟ್ ಗಳು ಬಂದಿವೆ...
| Array |
ಬಿಬಿಎಂಪಿಗೆ ನಿರ್ದೇಶನ ನೀಡಿದ್ದೇನೆ : ಎಚ್ಡಿಕೆ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ತಗ್ಗು ಪ್ರದೇಶದಲ್ಲಿರುವವರು ಜಾಗೃತರಾಗಿರಿ, ಬಿಬಿಎಂಪಿ ನೆರವು ಪಡೆಯಿರಿ ಎಂಬರ್ಥದಲ್ಲಿ ಹೇಳಿದ್ದರು. ಆದರೆ, ಸಿಎಂ ಟ್ವೀಟ್ ನೋಡಿದ ಜನತೆ, ಬಿಬಿಎಂಪಿ ಮೇಲಿನ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.
| Array |
ಸ್ವಲ್ಪ ಈ ಕಡೆ ನೋಡಿ ಸಾರ್, ಈ ರಸ್ತೆ ಹೇಗಿದೆ
ಸ್ವಲ್ಪ ಈ ಕಡೆ ನೋಡಿ ಸಾರ್, ಈ ರಸ್ತೆ ಹೇಗಿದೆ ಅಂತಾ, ಈ ರಸ್ತೆ ಅಗೆದು ಎಷ್ಟು ದಿನ ಆಗಿದೆಯೋ ಗೊತ್ತಿಲ್ಲ. ಬಿಬಿಎಂಪಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗಿರಲಿ, ಇರೋ ರಸ್ತೆ ಉಳಿಸಿದರೆ ಸಾಕು.
|
ಸುರಕ್ಷಿತವಾಗಿ ಮನೆ ಸೇರಲು ಸಾಧ್ಯವೇ?
ಭಾರಿ ಮಳೆ ಬಂದ ನಂತರ ಸೂಚನೆ ಕೊಡ್ತಾರೆ ಹವಾಮಾನ ಇಲಾಖೆ.ಅವರು ಹೇಳಿದಾಗ ಮಳೆ ಬರಲ್ಲ,ಸೋ ನೋ ಪ್ರಾಬ್ಲಮ್.ರಾಜಕಾಲುವೆ,ಮೋರಿ ಹೂಳು ತೆಗೆಸಿದ್ರಾ,ರಸ್ತೆ ಗುಂಡಿ ಮುಚ್ಚಿದ್ರಾ,ಬೀದಿ ದೀಪ ಇದ್ಯಾ,ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಿದ್ದಿರಾ,ಫ್ಲೈಒವರ್ ರಸ್ತೆಗಳು ಸರಿಯಿದ್ಯಾ,ನಾಯಿ ಕಾಟ?ಇವೆಲ್ಲವೂ ಸರಿ ಇದ್ದರೆ ಜನ ಸುರಕ್ಷಿತವಾಗಿ ಮನೆ ಸೇರ್ತಾರೆ.
|
ಹವಾಮಾನ ಇಲಾಖೆ ಮುನ್ಸೂಚನೆ ಸುಳ್ಳು
ಹವಾಮಾನ ಇಲಾಖೆ ಹಾಗೆ ಹೇಳಿದ್ದರೆ ಯೋಚಿಸಬೇಕಾದ ಅವಶ್ಯಕತೆ ಇಲ್ಲ. ಯಾಕೆಂದರೆ ಅವರು ಹೇಳೋದ್ರಲ್ಲಿ 90% ಸುಳ್ಳು. ಮುತ್ಯಾಲನಗರದ ಎರಡು ಬ್ರಿಡ್ಜ್ ಗಳಲ್ಲಿ ನೀರು ತುಂಬಿಕೊಂಡು ಯಾರೂ ಒಡಾಡಲು ಆಗುತ್ತಿಲ್ಲ. ಆ ಜಾಗಗಳು ಕಳ್ಳರ ಮನೆಯಾಗಿದೆ ಎಂದು ಹೇಳಿ ತಿಂಗಳಾಯಿತು
|
ಬಿಬಿಎಂಪಿ ದೊಡ್ಡ ವೇಸ್ಟ್ ಬಾಡಿ ಎಂದ ಜನತೆ
ಸಿಎಂ ನೀವು ಟೆಂಪಲ್ ಸುತ್ತಿ, ಬಿಬಿಎಂಪಿ ದೊಡ್ಡ ವೇಸ್ಟ್ ಎಂದು ಆಕ್ರೋಶ ಹೊರ ಹಾಕಿದ ಸಾರ್ಜಜನಿಕರು
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications