Breaking news; ಪಿಎಸ್‌ಐ ಹಗರಣ, ವಿವೇಕನಗರ ಠಾಣೆಯ ಪೇದೆೆ ಅಮಾನತು

ಬೆಂಗಳೂರು, ಮೇ 5: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ ಕರಿಬಸವನಗೌಡನನ್ನು ಅಮಾನತು ಮಾಡಲಾಗಿದೆ. ಪಿಎಸ್‌ಐ ಪರೀಕ್ಷೆಯನ್ನು ಬರೆದಿದ್ದ ಪೇದೆ ಉತ್ತೀರ್ಣನಾಗಿದ್ದ. ನೇಮಕಾತಿ ಪಟ್ಟಿಯಲ್ಲಿ ಸಹ ಕರಿಬಸವನ ಗೌಡ ಹೆಸರು ಪ್ರಕಟವಾಗಿತ್ತು. ಆದರೆ ಈ ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡಿರುವ ಆರೋಪವಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಇನ್ನು ಕರಿಬಸವನಗೌಡ ತನಗೆ ಪಿಎಸ್‌ಐ ಹುದ್ದೆಯ ಆರ್ಡರ್ ಕಾಪಿ ಬರುವ ಮುನ್ನವೇ ಪಿಎಸ್‌ಐನ ಸಮವಸ್ತ್ರವನ್ನು ಹಾಕಿಕೊಂಡು ಫೋಟೋವನ್ನು ತೆಗೆಸಿಕೊಂಡಿದ್ದ, ಈ ಫೋಟೋ ಕೂಡ ವೈರಲ್ ಆಗಿತ್ತು. ಸಮವಸ್ತ್ರವನ್ನು ಧರಿಸಿದ್ದ ಫೋಟೋಗಳನ್ನು ಹಾಕಿ ಕರಿಬಸವನ ಗೌಡರ ಗುಡಸಲಕೊಪ್ಪ ಗ್ರಾಮದಲ್ಲಿ ಶುಭಾಶಯವನ್ನು ಕೋರಿ ಫ್ಲೆಕ್ಸ್ ಗಳನ್ನು ಸಹ ಹಾಕಲಾಗಿತ್ತು.

ಇನ್ನು ಸಿಐಡಿ ಅಧಿಕಾರಿಗಳು ಅಮಾನತಾಗಿರುವ ಪೇದೆ ಕರಿಬಸವನ ಗೌಡರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನು ನಡೆಸುವ ಸಾಧ್ಯತೆಗಳಿವೆ.

Recommended Video

      ಚೆನ್ನೈ ಮತ್ತು ಮುಂಬೈಗೆ ಸಿಕ್ಕಿರೋ ಪ್ಲೇಆಫ್ ಕೊನೇ ಅವಕಾಶದಲ್ಲಿ ಸಕ್ಸಸ್ ಯಾರದಾಗುತ್ತೆ? | Oneindia Kannada
       PSI Recruitment Scam : Bengaluru Viveknagar police station constable suspended
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+