ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ರಿಂಗ್ ರೈಲು

By Mahesh
|
Google Oneindia Kannada News

ಬೆಂಗಳೂರು, ಡಿ. 11: ನಗರದ ಸಂಚಾರ ದಟ್ಟಣೆ ಸಮಸ್ಯೆ ಗೆ ಪರಿಹಾರವಾಗಿ ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಯೋಜನೆಗೆ ಮುಂದಾಗಿದೆ. ಬೆಂಗಳೂರು- ಬಂಗಾರಪೇಟೆ, ಬೆಂಗಳೂರು-ತುಮಕೂರು ಹಾಗೂ ಬೆಂಗಳೂರು- ಮಂಡ್ಯ ಮಧ್ಯೆ ಸಂಪರ್ಕ ಕಲ್ಪಿಸುವ ವಿದ್ಯುತ್ ಚಾಲಿತ ವರ್ತುಲ ರೈಲು ಸಂಚಾರಕ್ಕೆ ತೀರ್ಮಾನಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇಲ್ಕಂಡ ನೂತನ ರೈಲ್ವೆ ಯೋಜನೆಗೆ ಒಟ್ಟು 8,500 ಕೋಟಿ ರೂ.ವೆಚ್ಚವಾಗಲಿದ್ದು, ಮೂರು ಹಂತಗಳಲ್ಲಿ ವರ್ತುಲ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಯೋಜನೆಯ ರೂಪುರೇಷೆ, ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿದೆ ಎಂದರು.

Proposal on suburban railway system sent to Railway Ministry: Sorake

ಕೇಂದ್ರ ಮತ್ತು ರಾಜ್ಯ ಸರಕಾರ ಸಹಭಾಗಿತ್ವದ ಈ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಜ್ಯ ಸರಕಾರ 850 ಕೋಟಿ ರೂ.ಗಳನ್ನು ಒದಗಿಸಲಿದೆ. ಒಟ್ಟಾರೆ ವೆಚ್ಚದಲ್ಲಿ ಶೇ.50ರಷ್ಟನ್ನು ಕೇಂದ್ರ ಸರಕಾರ ಭರಿಸಲಿದೆ. ಎರಡನೆ ಹಂತದಲ್ಲಿ ಬೆಂಗಳೂರು-ದೊಡ್ಡಬಳ್ಳಾಪುರ ನಡುವಣ ರೈಲು ಮಾರ್ಗ ಕೈಗೆತ್ತಿಕೊಳ್ಳಲಾಗುವುದು ಎಂದು ವಿನಯಕುಮಾರ್ ಸೊರಕೆ ವಿವರಿಸಿದರು.[ ಓದಿ : ಅವಿಭಜಿತ ಕೋಲಾರ ಜಿಲ್ಲೆ ಕನಸು ನನಸು]

ರಾಮನಗರ-ಚನ್ನಪಟ್ಟಣ ಮತ್ತು ಮಂಡ್ಯ-ಶ್ರೀರಂಗಪಟ್ಟಣವನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಯವರಿಂದ ವರದಿ ಕೋರಲಾಗಿದೆ. ಈ ಸಂಬಂಧ ಅವರ ಪ್ರಸ್ತಾವ ಸಲ್ಲಿಸಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟು ಮೂರು ಹಂತಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದರು

ರಾಮನಗರ ಹಾಗೂ ಮಂಡ್ಯದಲಿ ನಡೆದಿರುವ ಭೂ ಹಗರಣಗಳಿಗೆ ಅಲ್ಲಿನ ಭೂ ಮಾಫಿಯಾ ಕಾರಣ. ಅಕ್ರಮ ಮನೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಗಳ ಸಕ್ರಮ ಸಂಬಂಧ ಕೂಡಲೇ ಮಾರ್ಗಸೂಚಿ ಮತ್ತು ಸುತ್ತೋಲೆ ಹೊರಡಿಸಲಾಗುವುದು ಎಂದರು, ಶೇ.50ರಷ್ಟು ನಕ್ಷೆ ಉಲ್ಲಂಘನೆಯಾಗಿದ್ದರೂ ಸಕ್ರಮ ಮಾಡಿಕೊಡಲಾಗುವುದು. ಆದರೆ, ವಾಣಿಜ್ಯ ಕಟ್ಟಡಗಳಿಗೆ ಶೇ.30ರಷ್ಟು ಉಲ್ಲಂಘನೆಯಾಗಿದ್ದರೆ, ಸಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸೊರಕೆ ತಿಳಿಸಿದರು.

English summary
Minister for Urban Development Vinay Kumar Sorake on Tuesday said that a detailed project report (DPR) for implementing suburban railway system in Bangalore has been submitted to the Railway Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X