B Khata: ಪ್ರಾಪರ್ಟಿದಾರರೇ ಗಮನಿಸಿ ಬಿ -ಖಾತಾ ಶಾಶ್ವತ ಪರಿಹಾರವಲ್ಲ, ಯಾಕೆ ?
B Khata: ರಾಜ್ಯ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಒಂದು ಬಾರಿಗೆ ಬಿ -ಖಾತಾ ಮಾಡಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಅನಧಿಕೃತ ಬಡಾವಣೆಗಳ ಆಸ್ತಿದಾರರು ದುಪ್ಪಟ್ಟು ತೆರಿಗೆಯನ್ನು ಪಾವತಿ ಮಾಡುವ ಮೂಲಕ ಬಿ - ಖಾತಾ ಮಾಡಿಸಿಕೊಳ್ಳಬಹುದಾಗಿದೆ. ಆದರೆ, ಈ ರೀತಿ ಬಿ - ಖಾತಾ ಮಾಡಿಸಿಕೊಂಡು ಬಿಟ್ಟರೆ ಎಲ್ಲಾ ಸಮಸ್ಯೆ ಪರಿಹಾರವಾಗಿ ಬಿಡುತ್ತದೆ ಎಂದು ಅನಧಿಕೃತ ಬಡಾವಣೆದಾರರು ಅಂದುಕೊಂಡಿದ್ದರೆ ತಪ್ಪು. ಸರ್ಕಾರದ ದಾಖಲೆಗಳ ಪ್ರಕಾರ ಅಥವಾ ಅಧಿಕೃತವಾಗಿ ಬಿ - ಖಾತಾ ಎನ್ನುವುದು ಸರ್ಕಾರದ ಪ್ರಕಾರ ಅಧಿಕೃತವಲ್ಲ. ಅಲ್ಲದೆ ಈ ರೀತಿಯ ಖಾತಾಗಳನ್ನು ಎ -ಖಾತಾಗೆ ವರ್ಗಾವಣೆ ಮಾಡುವುದಕ್ಕೆ ಬರುವುದೇ ಇಲ್ಲ.
ಹೌದು, ರಾಜ್ಯ ಸರ್ಕಾರವು ಇದೀಗ ಅನಧಿಕೃತ ಆಸ್ತಿಗಳಿಗೆ ರಾಜ್ಯದಾದ್ಯಂತ ಬಿ - ಖಾತಾ ನೀಡುವುದಾಗಿ ಹೇಳಿದೆಯಾದರೂ. ಇದು ಶಾಶ್ವತ ಪರಿಹಾರವಲ್ಲ. ಅಲ್ಲದೆ ಈ ರೀತಿ ಬಿ - ಖಾತಾ ಹೊಂದಿರುವವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುವುದಿಲ್ಲ. ಬ್ಯಾಂಕ್ ಸಾಲ ಸೇರಿದಂತೆ ಹಲವು ಸೌಲಭ್ಯಗಳು ಸಿಗುವುದಿಲ್ಲ. ಇದೀಗ ರಾಜ್ಯದಲ್ಲಿ ಆಸ್ತಿಗಳಿಗೆ ಇ ಖಾತಾ ನೀಡುವಾಗ ಬಿ -ಖಾತಾ ಗೊಂದಲ ಸರ್ಕಾರದ ಗಮನಕ್ಕೆ ಬಂದಿದ್ದು. ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಬಿ - ಖಾತಾ ನೀಡಲು ನಿರ್ಧರಿಸಿದೆ.

ಬಿ -ಖಾತಾ ಎನ್ನುವುದು ಶಾಶ್ವತ ಪರಿಹಾರವಲ್ಲ. ಅನಧಿಕೃತ ಬಡಾವಣೆಯಲ್ಲಿ ನಿವೇಶನ / ಜಾಗ ಖರೀದಿ ಮಾಡಿದ್ದರೆ ಸಣ್ಣ ರಿಲೀಫ್ ಮಾತ್ರ ಅಂತಲೇ ಹೇಳಲಾಗುತ್ತದೆ. ಬಿ ಖಾತೆ ಇದ್ದರೂ ಅದು ಕಾನೂನು ಪ್ರಕಾರ ಅಥವಾ ಕಾನೂನಿನ ಮಾನ್ಯತೆ ಈ ಆಸ್ತಿಗಳಿಗೆ ಸಿಗುವುದಿಲ್ಲ! ಆಸ್ತಿಗೆ ಸಂಬಂಧಿಸಿದ ಸೇವೆ ಪಡೆಯಲು ತಾತ್ಕಾಲಿಕ ದಾಖಲೆ ಅಂತಷ್ಟೇ ಇದನ್ನು ಪರಿಗಣಿಸಲಾಗುತ್ತದೆ. ಇನ್ನು ಮುಖ್ಯವಾಗಿ ಮಾಲೀಕತ್ವದ ದಾಖಲೆಗಳು ಇದ್ದರೆ ಕೂಡ ಅಕ್ರಮ ಆಸ್ತಿ ಅಂತಲೇ ಪರಿಗಣಿಸಲಾಗುತ್ತದೆ.
ಬಿ ಖಾತಾಗೆ ಎಲ್ಲಾ ಸೌಲಭ್ಯ ಸಿಗಲ್ಲ
* ಬಿ ಖಾತಾ ಇರುವವರಿಗೆ ಹಲವು ಸೌಲಭ್ಯ ಸಿಗುವುದಿಲ್ಲ.
* ಎಲ್ಲಾ ಬ್ಯಾಂಕ್‌ಗಳು ಸಹ ಇದಕ್ಕೆ ಸಾಲ ಕೊಡಲ್ಲ.
* ಕೆಲವೇ ಹಣಕಾಸು ಸಂಸ್ಥೆಗಳು ಬಿ ಖಾತೆಯನ್ನು ಪರಿಗಣಿಸುತ್ತೆ.
* ತೆರಿಗೆ ಪಾವತಿಸಿ ಕೆಲವೇ ಕೆಲವು ಸೌಲಭ್ಯ ಸಿಗುತ್ತೆ. ಎ - ಖಾತಾ ಮಾದರಿ ಸೇವೆ ಇರಲ್ಲ.
* ಆಸ್ತಿ ಮಾರಾಟ ಅಥವಾ ಖರೀದಿ ಸಮಯದಲ್ಲಿ ಸಮಸ್ಯೆ.
* ಸರ್ಕಾರ ಹೊಸ ನಿಯಮ ಉದಾ: ಇ- ಖಾತಾ ಮಾದರಿ ಜಾರಿ ಮಾಡಿದಾಗ ಸಮಸ್ಯೆ.
ಸರ್ಕಾರದ ನಿಯಮಗಳೇನು: ಇನ್ನು ಈ ವಿಚಾರದಲ್ಲಿ ಹಲವು ನಿಯಮಗಳಿವೆ. ರೆವಿನ್ಯೂ ನಿವೇಶನದಾರರು ಆಸ್ತಿ ಅಥವಾ ಜಾಗದ ಖರೀದಿ ಪತ್ರವನ್ನು ಪಡೆದುಕೊಂಡಿರಬೇಕು. ಅಲ್ಲದೆ ನೋಂದಣಿ ಇಲಾಖೆಯಲ್ಲಿ ನೋಂದಣಿ ಆಗಿರಬೇಕು. ಈಗಾಗಲೇ ಈ ಸಂಬಂಧ ಸರ್ಕಾರ ಬಿ - ಖಾತಾ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು. ಈ ತೀರ್ಮಾನ ಒಮ್ಮೆ ಮಾತ್ರ ಅನ್ವಯ ಆಗಲಿದೆ. ಕಟ್ ಆಫ್ ದಿನಾಂಕ ಹಾಗೂ ಬಿ ಖಾತೆ ಪಡೆದುಕೊಳ್ಳುವ ವಿಧಾನದ ಬಗ್ಗೆ ಸರ್ಕಾರ ಇನ್ನಷ್ಟು ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.












Click it and Unblock the Notifications