Modi In Bengaluru: ಬೆಂಗಳೂರಿನಲ್ಲಿ 36 ಕಿ.ಮೀ. ರೋಡ್‌ ಶೋ ಮಾಡಲಿರುವ ಪ್ರಧಾನಿ ಮೋದಿ : ಯಾವಾಗ, ಎಲ್ಲಿ ತಿಳಿಯಿರಿ

ಕರ್ನಾಟಕದಲ್ಲಿ ಮೋದಿ ಮುಖ ನೋಡಿದರೆ ಮಾತ್ರ ಜನ ಬಿಜೆಪಿಗೆ ಮತ ಹಾಕೋದು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅರ್ಥವಾದಂತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿ ರಾಜ್ಯಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿದ್ದು, ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ನಾಯಕರು ಯೋಜಿಸಿದ್ದು, ಬೃಹತ್ ರೋಡ್ ಶೋ ಮಾಡಲು ನಿರ್ಧರಿಸಿದ್ದಾರೆ.

ಮೇ 6ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು ಬರೋಬ್ಬರಿ 36 ಕಿಲೋ ಮೀಟರ್ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿರುವ ಮೋದಿ ಮತಯಾಚನೆ ಮಾಡಲಿದ್ದಾರೆ. ಆರಂಭದಲ್ಲಿ ಎರಡು ದಿನ ಮೋದಿ ರೋಡ್ ಶೋ ಮಾಡಲು ನಿಗದಿಪಡಿಸಿತ್ತಾದರೂ, ಒಂದು ದಿನಕ್ಕೆ ಮುಗಿಸಲು ನಿರ್ಧರಿಸಿದ್ದಾರೆ.

Prime Minister Narendra Modi Will Hold A Roadshow In Bengaluru On May 6th

ಒಂದೇ ದಿನ ಬೆಳಗ್ಗೆ ಮತ್ತು ಸಂಜೆ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ. ಮೇ 6ರ ಬೆಳಗ್ಗೆ 8 ಕಿಲೋ ಮೀಟರ್ ಮತ್ತು ಸಂಜೆ 28 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಬೆಂಗಳೂರಿನ 23 ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ ನಡೆಯಲಿದೆ.

ಎಲ್ಲೆಲ್ಲಿ ರೋಡ್ ಶೋ

ಮೇ 6ರಂದು ಬೆಳಗ್ಗೆ ರಾಜಧಾನಿಯ ಸಿ.ವಿ.ರಾಮನ್ ನಗರದಿಂದ ಮೋದಿ ಮತಬೇಟೆ ಶುರು ಮಾಡಲಿದ್ದಾರೆ. ಸಿ.ವಿ. ರಾಮನ್ ನಗರದಿಂದ ಬ್ರಿಗೇಡ್ ರಸ್ತೆಯವರೆಗೆ ರೋಡ್ ಶೋ ನಡೆಯಲಿದೆ.

ಅಂದು ಸಂಜೆ ಕೋಣಕುಂಟೆಯಿಂದ ರೋಡ್ ಶೋ ಆರಂಭವಾಗಲಿದ್ದು ಜಯನಗರ, ಗಾಂಧಿ ಬಜಾರ್, ಶಾಂತಿನಗರ, ಬಿನ್ನಿಮಿಲ್, ಮಾಗಡಿ ರಸ್ತೆ, ಟೋಲ್‌ಗೇಟ್, ದಾಸರಹಳ್ಳಿ, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ನವರಂಗ್, ಮಲ್ಲೇಶ್ವರ, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ರೋಡ್​ಶೋ ನಡೆಯಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ಟ್ರಾಫಿಕ್ ಕತೆ ಏನು?

ಪ್ರಧಾನಿ ಮೋದಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮತ್ತೊಂದು ಮೆಗಾ ರೋಡ್ ಶೋ ಹಮ್ಮಿಕೊಂಡಿರುವುದು ನಗರದ ಟ್ರಾಫಿಕ್ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರಲಿದೆ. ಈಗಾಗಲೇ ಅವರು ನೈಸ್‌ ರಸ್ತೆಯಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ವಾಹನ ಸವಾರರು, ಪ್ರಯಾಣಿಕರು ಕನಿಷ್ಠ 2 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಿರಿ ಕಿರಿ ಅನುಭವಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಭದ್ರತೆಗಾಗಿ ಮೋದಿ ಪ್ರಯಾಣಿಸುವ ರಸ್ತೆಗಳನ್ನು ಬಂದ್ ಮಾಡಿದ್ದು ಕೂಡ ಸಾಕಷ್ಟು ಸಮಸ್ಯೆ ಉಂಟು ಮಾಡಿತ್ತು. ಈಗ ಮೇ 6ರಂದು ಬೆಂಗಳೂರಿನಲ್ಲಿ ಮೋದಿ 36 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದು ಅಂದು ಟ್ರಾಫಿಕ್ ಪೊಲೀಸರು ಯಾವ ರೀತಿ ಪರ್ಯಾಯ ಮಾರ್ಗಗಳನ್ನು ನೀಡಿ, ಸಂಚಾರ ದಟ್ಟಣೆ ತಪ್ಪಿಸುತ್ತಾರೆ ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+