Price Hike: ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಬೆಳ್ಳುಳ್ಳಿ: ಶಾಕ್ ಕೊಟ್ಟ ಬೀನ್ಸ್ ಬಟಾಣಿ- ಬೆಂಗಳೂರಿನಲ್ಲಿ ದುಬಾರಿ ತರಕಾರಿ-ಹಣ್ಣು
ಬೆಂಗಳೂರು ಮೇ 14: ಬೆಂಗಳೂರಿನಲ್ಲಿ ಮಳೆ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್ ಸಿಟಿ ತಂಪಾಗಿದೆ. ಈವರೆಗೆ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನ ಈಗ ನಗರದಲ್ಲಿ ತರಕಾರಿ ಹಾಗೂ ಹಣ್ಣಿನ ಬೆಲೆ ಕೇಳಿ ಶಾಕ್ ಆಗಿದ್ದಾರೆ.
ಹೌದು.. ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಮಳೆ ಆರಂಭವಾಗಿದ್ದು ವಾತಾವರಣ ಬದಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಹಣ್ಣಿನ ಬೆಲೆ ಗಗನಕ್ಕೇರಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹಣ್ಣು ತರಕಾರಿ ಬೆಲೆ ಮತ್ತಷ್ಟು ಅಧಿಕವಾಗಿದೆ. ಹಾಗಾದರೆ ಯಾವ ತರಕಾರಿಗೆ ಎಷ್ಟು ಬೆಲೆ ಏರಿಕೆಯಾಗಿದೆ ಸಂಪೂರ್ಣ ಪಟ್ಟಿ ಇಲ್ಲಿದೆ.

ಬೆಂಗಳೂರಿನಲ್ಲಿ ಹಗಲಿನಲ್ಲಿ ಮೋಡ ಕವಿದ ವಾತಾವರಣ ಇರುತ್ತಿದ್ದು ಮಧ್ಯಾಹ್ನ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಮಳೆ ಇಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಳೆ ಸಂದರ್ಭದಲ್ಲಿ ತರಕಾರಿ ಹಾಗೂ ಹಣ್ಣಿನ ಬೆಲೆ ಕಡಿಮೆಯಾಗುತ್ತದೆ. ಆದರೆ ಕಳೆದ ವಾರ ಬಿರು ಬಿಸಿಲಿನ ತಾಪದಿಂದ ಮಾರುಕಟ್ಟೆಗಳು ಹೊರಬಂದಿಲ್ಲ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿ ತಟ್ಟಿದೆ.
ಕಳೆದ ವಾರ ಬಿಸಿಲು ಹೆಚ್ಚಾಗಿದ್ದು ತರಕಾರಿ ಹಾಗೂ ಹಣ್ಣಿನ ಪೂರೈಕೆ ಕಡಿಮೆಯಾಗಿದೆ. ನಗರದಲ್ಲಿ ತರಕಾರಿ ಹಣ್ಣುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾರಾಟಗಾರರು ಇದ್ದ ಅಲ್ಪ ಪ್ರಮಾಣದ ತರಕಾರಿ ಹಾಗೂ ಹಣ್ಣಿನ ಬೆಲೆಯನ್ನು ದ್ವಿಗುಣಗೊಳಿಸಿದ್ದಾರೆ. ಹೀಗಾಗಿ ಪ್ರತಿ ಕೆಜಿ ತರಕಾರಿ ಬೆಲೆ 20 ರೂಪಾಯಿಯಷ್ಟು ಏರಿಕೆಯಾಗಿದೆ. ಬೀನ್ ಹಾಗೂ ಬಟಾಣಿ ಬೆಲೆಯನ್ನು ಗ್ರಾಹಕರಿಗೆ ಕಣ್ಣೀರು ತರಿಸಿದೆ.
ಒಂದು ಕೆಜಿ ಬೆಳ್ಳುಳ್ಳಿ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಬೆಳ್ಳುಳ್ಳಿ ಬೆಲೆ ಬರೋಬ್ಬರಿ 320 ರೂಪಾಯಿ ಆಗಿದೆ. ಇನ್ನೂ ಬೀನ್ಸ್ ಬೆಲೆ ಕೆಜಿಗೆ 220 ರೂಪಾಯಿ ಇದ್ದರೆ, ಹಸಿರುಮೆಣಸಿನಕಾಯಿ ಬೆಲೆ 110 ರೂಪಾಯಿ ಇದೆ. ಅಲ್ಲದೆ ಬಟಾಣಿ ಬೆಲೆ ಕೆಜಿಗೆ 200 ರೂಪಾಯಿ ದಾಟಿದೆ. ಪ್ರತೀ ಬಾರಿ ಒಂದಲ್ಲಾ ಒಂದು ತರಕಾರಿ ಬೆಲೆ ಹೆಚ್ಚಾಗುತ್ತಲೇ ಇದ್ದು ಗ್ರಾಹಕರಿಗೆ ಬೇಸರ ತಂದಿದೆ.

ಇನ್ನೂ ಕ್ಯಾರೇಟ್ 95 ರೂಪಾಯಿ, ನವಿಲುಕೋಸು 80 ರೂ, ಬದನೆಕಾಯಿ 70, ದಪ್ಪ ಮೆಣಸಿನಕಾಯಿ 80, ಬೆಂಡೆಕಾಯಿ 80, ಟೊಮೆಟೋ 35, ಆಲೂಗಡ್ಡೆ 49 ರೂಪಾಯಿ, ಹಾಗಲಕಾಯಿ 80, ಸೋರೆಕಾಯಿ 52 ರೂಪಾಯಿ ಇದೆ. ಅಲ್ಲದೆ ಶುಂಠಿ ಬೆಲೆ 195, ಪಡವಲಕಾಯಿ 47 ರೂಪಾಯಿ, ಗೋರಿಕಾಯಿ 64 ರೂಪಾಯಿ, ಬಟ್ರೋಟ್ ಬೆಲೆ 46 ರೂಪಾಯಿ, ಈರುಳ್ಳಿ 40 ರೂಪಾಯಿ ಇದೆ.
ತರಕಾರಿ ಬೆಲೆ ಒಂದು ಕೆಜಿಗೆ: -
ಹಸಿರುಮೆಣಸಿನಕಾಯಿ:110
ಬೀನ್ಸ್: 220
ಬೆಳ್ಳುಳ್ಳಿ: 320
ಕ್ಯಾರೇಟ್: 95
ನವಿಲುಕೋಸು: 80
ಬದನೆಕಾಯಿ: 70
ದಪ್ಪ ಮೆಣಸಿನಕಾಯಿ: 80
ಬಟಾಣಿ: 200
ಬೆಂಡೆಕಾಯಿ: 80
ಟೊಮೆಟೋ: 35
ಆಲೂಗಡ್ಡೆ: 49
ಹಾಗಲಕಾಯಿ: 80
ಸೋರೆಕಾಯಿ: 52
ಶುಂಠಿ:195
ಪಡವಲಕಾಯಿ: 47
ಗೋರಿಕಾಯಿ: 64
ಬಟ್ರೋಟ್: 46
ಈರುಳ್ಳಿ: 40
ಕಳೆದ ವಾರ ಸೌತೇಕಾಯಿ ಹಾಗೂ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿತ್ತು. ಬೇರೆ ತರಕಾರಿಗಳ ಬೆಲೆ 60ರೂ ಒಳಗೆಯೇ ಇತ್ತು. ಆದರೆ ಈ ವಾರ ಬೀನ್ಸ್, ಕ್ಯಾರೇಟ್, ಬದನೆಕಾಯಿ, ಹಸಿರುಮೆಣಸಿನಕಾಯಿ, ಟೊಮೆಟೋ, ಬಟಾಣಿ, ಬೆಳ್ಳುಳ್ಳಿ ಸತತವಾಗಿ ಏರಿಕೆಯಾಗುತ್ತಿದೆ. ಮಳೆ ಬಂದರೆ ಟೊಮೆಟೋ ಹಾಗೂ ಈರುಳ್ಳಿ ಇರುವುದಿಲ್ಲ ಬೇಗ ಹಾಳಾಗುವುದರಿಂದ ಅದರ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು ಮುಂದಿನ ವಾರ ತರಕಾರಿಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ.

ಇನ್ನೂ ತರಕಾರಿ ಕಥೆ ಹೀಗಾದರೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದ್ದು, ಗ್ರಾಹಕರಿಗೆ ಖರೀದಿಸಲು ಬೇಸರ ತಂದಿದೆ. ಹಾಗಾದರೆ ಹಣ್ಣುಗಳ ಬೆಲೆ ಹೇಗಿದೆ ಎಂದು ತಿಳಿಯೋಣ:-
ಹಣ್ಣುಗಳಲ್ಲಿ ದ್ರಾಕ್ಷಿ ಬೆಲೆ ಒಂದು ಕೆಜಿಗೆ 60 ರೂಪಾಯಿಂದ 80 ರೂಪಾಯಿವರೆಗೆ ಬೆಲೆ ಇದ್ದರೆ, ಮರಸೇಬು ಹಣ್ಣು ಕೆಜಿಗೆ 190 ರೂಪಾಯಿಂದ 200 ರೂಪಾಯಿವರೆಗೆ, ದಾಳಿಂಬೆ ಹಣ್ಣಿನ ಬೆಲೆ 100 ರೂಪಾಯಿಂದ 150 ರೂಪಾಯಿವರೆಗೆ, ಇನ್ನೂ ಕಲ್ಲಂಗಡಿ 40-50 ರೂಪಾಯಿ ಇದ್ದರೆ, ಬಾಳೆಹಣ್ಣು 30-40 ರೂಪಾಯಿ ಇದೆ.
ಜೊತೆಗೆ ಅನಾನಸ್ ಹಣ್ಣು 80-80 ರೂಪಾಯಿ ಇದ್ದರೆ ಆಸ್ಟ್ರೇಲಿಯಾ ಗ್ರೇಪ್ಸ್ 200-150 ರೂಪಾಯಿ, ಸಪೋಟ-60-70 ರೂಪಾಯಿ, ಸೇಬು 100-200 ರೂಪಾಯಿ, ಮಾವಿನ ಹಣ್ಣು 100-150 ರೂಪಾಯಿ, ಕಿತ್ತಾಳೆ ಹಣ್ಣು ಕೆಜಿಗೆ 100-180 ರೂಪಾಯಿ ಮಾರಾಟವಾಗುತ್ತಿದೆ.












Click it and Unblock the Notifications