Get Updates
Get notified of breaking news, exclusive insights, and must-see stories!

108 ಅಡಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಭರದ ಸಿದ್ಧತೆ

ಬೆಂಡಗಳೂರು, ಅಕ್ಟೋಬರ್ 17: ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗುತ್ತಿರುವ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಲಿದ್ದಾರೆ. ಈ ಸಂಬಂಧ ಅಗತ್ಯ ವ್ಯವಸ್ಥೆಗಳು, ಕಾರ್ಯಕ್ರಮ ಆಯೋಜನೆಗೆ ಬೇಕಾದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ.

ನವೆಂಬರ್ 10ರಂದು ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತಿಮೆಯ ಸಮೀಪವೇ ಇರುವ 25-30 ಎಕರೆ ಖಾಲಿ ಜಾಗದಲ್ಲಿ ಬೃಹತ್ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಉದ್ಘಾಟಿಸಲಿದ್ದಾರೆ. ಈ ಸಂಬಂಧ ಐಟಿ, ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

ಪ್ರಧಾನಿಗಳು ಆಗಮಿಸುವುದರಿಂದ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಸೂಕ್ತ ಬಂದೋಬಸ್ತ್ ಮತ್ತು ವಾಹನ ನಿಲುಗಡೆ ಸೇರಿದಂತೆ ಸಕಲ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಯಾವುದ್ದಕ್ಕೂ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸರ್ಕಾರ ಸೂಚಿಸಿದೆ.

ನಾಡಪ್ರಭು ಕೆಂಪೇಗೌಡರ ಜನ್ಮದಿನದಂದು ಅವರ ಬೃಹತ್ ಪ್ರತಿಮೆ ಜೊತೆಗೆ ಥೀಮ್ ಪಾರ್ಕ್ ಉದ್ಘಾಟನೆಯಾಗಲಿದೆ. ಈ ಕುರಿತು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿವೆ.

45ದಿನದ ಮಣ್ಣು ಸಂಗ್ರಹಣೆ ಅಭಿಯಾನ

45ದಿನದ ಮಣ್ಣು ಸಂಗ್ರಹಣೆ ಅಭಿಯಾನ

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾಡಿನ ವಿವಿಧ ಸ್ಥಳಗಳು, ಹೋರಾಟಗಾರ ಮನೆಯಿಂದ ಪವಿತ್ರ ಮೃತ್ತಿಕೆ ಹಾಗೂ ಜಲಸಂಗ್ರಹಿಸುವ ಅಭಿಯಾನದಡಿ ತಾಲ್ಲೂಕು ಕೇಂದ್ರಗಳಿಗೆ ಮಣ್ಣನ್ನು ತಲುಪಿಸುವಂತೆ ಸೂಚನೆ ನೀಡಿದರು. ನಂತರ ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಮಣ್ಣು ತರಿಸುವಂತೆ ತಿಳಿಸಿದರು. ಈ ಸಂಬಂಧ ರಾಜ್ಯದಲ್ಲಿ 45ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಸಮಾರಂಭದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ ಬಿಂಬಿಸುವ ವಿಡಿಯೋ ಮ್ಯಾಪಿಂಗ್ ಹಾಗೂ ನೃತ್ಯ ರೂಪಕ ಆಯೋಜನೆಗೂ ಬೊಮ್ಮಾಯಿ ಅವರು ಈಗಾಗಲೇ ಅನುಮತಿ ನೀಡಿದ್ದಾರೆ.

ಒಕ್ಕಲಿಗರ ಸಂಘ, ಆದಿಚುಂಚನಗಿರಿ ಶ್ರೀಗಳ ಜತೆ ಸಮಾಲೋಚನೆ

ಒಕ್ಕಲಿಗರ ಸಂಘ, ಆದಿಚುಂಚನಗಿರಿ ಶ್ರೀಗಳ ಜತೆ ಸಮಾಲೋಚನೆ

ಉದ್ಘಾಟನೆ ಕಾರ್ಯಕ್ರಮದ ರೂಪರೇಷೆ ಸಂಬಂಧ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉನ್ನತ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳ ಜೊತೆ ಸಮಾಲೋಚಿಸಿದರು. ಮುಖ್ಯಮಂತ್ರಿಗಳ ಸಲಹೆಯಂತೆ ಶ್ರೀಗಳನ್ನು ಸಚಿವರು ಭೇಟಿ ಮಾಡಿ ಸರ್ಕಾರದ ಚಿಂತನೆ ಮತ್ತು ಆಶಯಗಳನ್ನು ಹಂಚಿಕೊಂಡರು. ಜೊತೆಗೆ ಕಾರ್ಯಕ್ರಮದ ಯಶಸ್ಸಿಗೆ ಶ್ರೀಗಳ ಮಾರ್ಗದರ್ಶನವನ್ನು ಕೋರಿದರು.

ಇದಕ್ಕೂ ಮೊದಲು ಸಚಿವ ಅಶ್ವಥ್ ನಾರಾಯಣ್ ಅವರು 20ಕ್ಕೂ ಹೆಚ್ಚು ಪ್ರಮುಖ ಒಕ್ಕಲಿಗ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿದರು. ಸರ್ಕಾರಕ್ಕೆ ಮನವಿಗೆ ಸ್ಪಂದಿಸಿದ ಶ್ರೀಗಳು ಕಾರ್ಯಕ್ರಮದ ಯಶಸ್ಸಿಗೆ ಮಠ ಮತ್ತು ಸಮಾಜದ ವತಿಯಿಂದ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

21ರಂದು ರಥಗಳಿಗೆ ಚಾಲನೆ

21ರಂದು ರಥಗಳಿಗೆ ಚಾಲನೆ

ನ.11ರ ಕಾರ್ಯಕ್ರಮದ ಅಂಗವಾಗಿ ನಾಡಿನೆಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ನಡೆಯಲಿದೆ. ಇದಕ್ಕೆ ಸಿದ್ಧವಾಗಿರುವ ವಿಶೇಷ ರಥಗಳಿಗೆ ಅ.21ರಂದು ವಿಧಾನಸೌಧದ ಮುಂಭಾಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ‌ ಕಾರ್ಯಕ್ರಮದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಅಶ್ವತ್ಥನಾರಾಯಣ ಹೇಳಿದರು.

ಪ್ರತಿಮೆ ನಿರ್ಮಾಣ ಕೆಲಸ ಪೂರ್ಣ

ಪ್ರತಿಮೆ ನಿರ್ಮಾಣ ಕೆಲಸ ಪೂರ್ಣ

ಬೆಂಗಳೂರು ಕಟ್ಟಿದ ದೂರದೃಷ್ಟಿವುಳ್ಳ ನಾಡಪ್ರಭು ಕೆಂಪೇಗೌಡ ಅವರ ಬೃಹತ್ ಪ್ರತಿಮೆ ನಿರ್ಮಾಣ ಕೆಲಸ ಶರವೇಗದಲ್ಲಿ ಮುಗಿದಿದೆ. ಈಗಾಗಗಲೇ ರಾಜ್ಯ ಸರ್ಕಾರ ಕೆಂಪೇಗೌಡರ ಜನ್ಮದಿನವೇ ಪ್ರತಿಮೆ ಅನಾವರಣಕ್ಕೆ ನೀರ್ಧರಿಸಿದ್ದರಿಂದ ನಿರ್ಮಾಣವು ಮತ್ತಷ್ಟು ವೇಗ ಪಡೆದುಕೊಂಡಿತ್ತು. ಇದೀಗ ಪ್ರತಿಮೆ ಕೆಲಸ ಮುಗಿದಿದೆ. ಇನ್ನೂ ವಿಶಾಲವಾದ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಥೀಮ್‌ ಪಾರ್ಕ್‌ ರಾಜ್ಯದ ಜನರನ್ನು ತನ್ನತ್ತ ಸೆಳೆಯುವುದರಲ್ಲಿ ಎರಡು ಮಾತಿಲ್ಲ ಎಂದು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+