• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ನು ಎರಡು -ಮೂರು ದಿನ ಮಳೆ, ಬೆಂಗಳೂರಿಗರಿಗೆ ಎಚ್ಚರ! ಎಚ್ಚರ!

|

ಬೆಂಗಳೂರು, ಮೇ 27: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಕಂಡು ಬಂದಿದ್ದ ಸಂಜೆ ಮಳೆಯ ಆರ್ಭಟ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸೂಚನೆ ಸಿಕ್ಕಿದೆ.

ಬೆಂಗಳೂರಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಕ್ಕೆ ಪಾದಚಾರಿ ಬಲಿ ಬೆಂಗಳೂರಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಕ್ಕೆ ಪಾದಚಾರಿ ಬಲಿ

ಬೆಂಗಳೂರು, ದಕ್ಷಿಣ ಒಳನಾಡು, ಕರ್ನಾಟಕ -ತಮಿಳುನಾಡು ಗಡಿ ಭಾಗದಲ್ಲಿ ಗುಡುಗು ಸಹಿತ ಗಾಳಿ ಮಳೆಯನ್ನು ಇನ್ನು 3 ದಿನಗಳ ಎದುರಿಸಬೇಕಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಭಾನುವಾರದಂದು ಮೇಖ್ರಿ ಸರ್ಕಲ್, ಅರಮನೆ, ಮೆಜೆಸ್ಟಿಕ್, ಜಯನಗರ, ವಿಜಯನಗರ, ಸಂಪಿಗೆ ರಸ್ತೆ, ಜಯಮಹಲ್, ಕೇಂಗೇರಿ, ವೈಯಾಲಿಕಾವಲ್, ಜಯನಗರ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದೆ.

ಸುಮಾರು 40ಕ್ಕೂ ಅಧಿಕ ಮರಗಳು ಧರೆಗುರುಳಿವೆ, 34ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗಂಟೆಗೆ 25 ರಿಂದ 30 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.

ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್

ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಅರಮನೆ ಮೈದಾನ ಸೇರಿದಂತೆ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದಲ್ಲದೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಕೂಡಾ ಬಿರುಸಿನ ಗಾಳಿ ಮಳೆ ಬಿದ್ದಿದೆ.

ಭಾರಿ ಮಳೆಗೆ ಸಿಲುಕಿ ತತ್ತರಿಸಿದವರಿಗೆ ನೆರವಾಗಿ, ಅಗತ್ಯ ಬಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಸಂಸದ ಡಿ.ವಿ ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿಗಳ ಕಚೇರಿಯಿಂದಲೂ ಗಾಳಿ ಮಳೆ ಕುರಿತಂತೆ ಟ್ವೀಟ್ ಮಾಡಲಾಗಿತ್ತು.

ಜನರ ಸಮಸ್ಯೆಗೆ ಸ್ಪಂದಿಸಿ ಎಂದು ಬಿಬಿಎಂಪಿಗೆ ಸೂಚನೆ

ಬೆಂಗಳೂರಿನಾದ್ಯಂತ ಬಾರೀ ಮಳೆ ಸುರಿಯುತ್ತಿದ್ದು ಎಲ್ಲ ಬಿಬಿಎಂಪಿ ಸದಸ್ಯರು ತಮ್ಮ ತಮ್ಮ ವಾರ್ಡಗಳಲ್ಲಿ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿರಿ . ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ . ಅಗತ್ಯ ಬಿದ್ದರೆ ನನ್ನನ್ನು ಸಹ ಸಂಪರ್ಕಿಸಿ ಎಂದು ಟ್ವೀಟ್ ಮಾಡಿದ ಸಂಸದ ಡಿವಿ ಸದಾನಂದ ಗೌಡ.

ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ, ಜಲ ಪ್ರಳಯದ ಆತಂಕಕ್ಕೆ ಸಿಲುಕಿದ ಜನರು! ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ, ಜಲ ಪ್ರಳಯದ ಆತಂಕಕ್ಕೆ ಸಿಲುಕಿದ ಜನರು!

ಮಳೆ ಕುರಿತಂತೆ ಸಿಎಂ ಕಚೇರಿಯಿಂದ ಟ್ವೀಟ್

ಭಾರಿ ಮಳೆ, ಮುನ್ನೆಚ್ಚರಿಕೆ ಕ್ರಮ ಹಾಗೂ ಬಿಬಿಎಂಪಿ ಸಿಬ್ಬಂದಿಗಳಿಗೆ ಸೂಚನೆ ಜೊತೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ BBMPಆಯುಕ್ತರೊಂದಿಗೆ ಮಾತನಾಡಿ ಸೂಕ್ತ ನಿರ್ದೇಶನ ನೀಡಿದ್ದೇನೆ.BBMP 24x7ಸಹಾಯವಾಣಿ ಚಾಲನೆಯಲ್ಲಿದ್ದು ಮಳೆಸಂಬಂಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ

ಬಿಬಿಎಂಪಿ ಸಹಾಯವಾಣಿ ಸಂಖ್ಯೆ ಟ್ವೀಟ್ ಮಾಡಿ

ಬಿಬಿಎಂಪಿ ಮೇಯರ್, ಬಿಬಿಎಂಪಿ ಆಯುಕ್ತರು, ಬೆಸ್ಕಾಂ, ಬಿಡಬ್ಲ್ಯೂ ಎಸ್ಎಸ್ ಬಿ ಟ್ವೀಟ್ ಖಾತೆಗಳಿಗೆ ಟ್ಯಾಗ್ ಮಾಡಿ ಕೂಡಲೇ ಕಾರ್ಯತತ್ಪರರಾಗಿರಿ ಎಂದ ಡಿವಿ ಸದಾನಂದ ಗೌಡ ಅವರು ನಂತರ ಸಿಎಂ ಕಚೇರಿಯ ಟ್ವೀಟ್ ಮರು ಟ್ವೀಟ್ ಮಾಡಿ ಬಿಬಿಎಂಪಿಯ 24 ಗಂಟೆಗಳ ಸಹಾಯವಾಣಿಯ ಸಂಖ್ಯೆಯನ್ನು ಹಾಕಿರಿ ಎಂದಿದ್ದಾರೆ.

ಬಿಬಿಎಂಪಿ ಕಾಲ್ ಸೆಂಟರ್ : 080-22660000

ತ್ರಿಪುರಾದಲ್ಲಿ ಶುಕ್ರವಾರದಿಂದ ಭಾರೀ ಮಳೆ, ನಿರಾಶ್ರಿತರ ಶಿಬಿರಗಳಲ್ಲಿ 700ಕ್ಕೂ ಹೆಚ್ಚು ಮಂದಿ ತ್ರಿಪುರಾದಲ್ಲಿ ಶುಕ್ರವಾರದಿಂದ ಭಾರೀ ಮಳೆ, ನಿರಾಶ್ರಿತರ ಶಿಬಿರಗಳಲ್ಲಿ 700ಕ್ಕೂ ಹೆಚ್ಚು ಮಂದಿ

ಮಳೆ ಹಾನಿ ಬಗ್ಗೆ ಬಿಬಿಎಂಪಿ ಮೇಯರ್ ಟ್ವೀಟ್

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆಯ ಮಳೆ ಮತ್ತು ಗಾಳಿಗೆ ಕೆಳಕಂಡಂತೆ ವಲಯದಲ್ಲಿ ಮರ ಮತ್ತು ಕೊಂಬೆಗಳು ನೆಲಕ್ಕೆ ಉರುಳಿವೆ: ಜಯನಗರ, ಜೆ.ಪಿ.ನಗರ, ಬಸವನಗುಡಿ, ವಿಜಯನಗರ, ಹೆಚ್ ಆರ್ ಬಿ ಆರ್ ಲೇಔಟ್ ಒಟ್ಟು: ಮರ 56. ಕೊಂಬೆಗಳು 596 ಎಂದು ಮೊನ್ನೆ ಬಿದ್ದ ಮಳೆ ಲೆಕ್ಕ ನೀಡಿರುವ ಬಿಬಿಎಂಪಿ ಮೇಯರ್ ಅವರ ಟ್ವೀಟ್, ಜೊತೆಗೆ ಹಾನಿಗೊಂಡಿರುವ ಪ್ರದೇಶಕ್ಕೆ ಬಿಬಿಎಂಪಿ ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ ಅವರು ಭೇಟಿ ನೀಡಿದ ಚಿತ್ರಗಳಿವೆ.

ಸಿಎಂ, ಡಿವಿಎಸ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ನಾಗರಿಕರು

ಮುಖ್ಯಮಂತ್ರಿ ಕಚೇರಿಯ ಟ್ವೀಟ್ ಹಾಗೂ ಸದಾನಂದ ಗೌಡ ಅವರ ಮಳೆ ಕುರಿತ ಟ್ವೀಟ್ ಗೆ ಪ್ರತಿಕ್ರಿಯಿಸಿದ ನಾಗರಿಕರು ತಮ್ಮಮ್ಮ ಪ್ರದೇಶದಲ್ಲಿ ಉಂಟಾದ ಹಾನಿ, ತೊಂದರೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

English summary
Since the last three days, Bengaluru has been receiving good rain and thundershower activities. At present a cyclonic circulation is persisting over South Interior Karnataka and adjoining Tamil Nadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X