ಹವಾಮಾನ ವರದಿ: ಬೆಂಗಳೂರಿನಲ್ಲಿ ಮಾನ್ಸೂನ್ ಪೂರ್ವ ಮಳೆ ಮುಂದುವರಿಕೆ

ಬೆಂಗಳೂರು, ಮಾರ್ಚ್ 17: ಗುರುವಾರ ಮತ್ತು ಶುಕ್ರವಾರ ಬೆಂಗಳೂರಿನಲ್ಲಿ ಸಾಧಾರಣದಿಂದ ಧಾರಾಕಾರ ಮಳೆ ಸುರಿದಿದೆ. ಇದೀಗ ಇಂದೂ ಕೂಡ ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಸಂಬಂಧಿಸಿದ ಮಾಹಿತಿ ನೀಡುವ 'ಸ್ಕೈಮೆಟ್ ವೆದರ್' ಮುನ್ನೆಚ್ಚರಿಕೆ ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಂಗಳೂರಿನ ಆಗಸದಲ್ಲಿ ಮೋಡ ಕವಿದಿದ್ದು ಇನ್ನೂ ಹೆಚ್ಚಿನ ಪ್ರದೇಶಕ್ಕೆ ಮಳೆ ವಿಸ್ತರಣೆಯಾಗಲಿದೆ, ಜತೆಗೆ ಮಳೆ ಮತ್ತು ಗುಡುಗು ಮಿಂಚಿನ ಪ್ರಮಾಣ ಹೆಚ್ಚಾಗಲಿದೆ ಎಂದು ಸ್ಕೈಮೆಟ್ ವೆದರ್ ಹೇಳಿದೆ.

ಇದು ಮುಂಗಾರು ಪೂರ್ವ ಮಳೆ. ಹೀಗಾಗಿ ದಿನದಲ್ಲಿ ಮಧ್ಯಾಹ್ನ ನಂತರವೇ ಮಳೆ ಸುರಿಯಲಿದೆ. ಮಳೆಯ ಸುರಿಯುವ ಅವಧಿ ಸಣ್ಣದಾಗಿರಲಿದ್ದು ಹೆಚ್ಚು ತೀವ್ರವಾಗಿರಲಿದೆ ಎಂದು ಅದು ಹೇಳಿದೆ.

Pre Monsoon Rain To Continue In Bengaluru

ಅರಬ್ಬೀ ಸಮುದ್ರದಲ್ಲಿ ಕಡಿಮೆ ಒತ್ತಡ ನಿರ್ಮಾಣವಾಗಿದ್ದು ಇದು ಗಾಳಿಯ ಬೀಸುವಿಕೆ ಮೇಲೆ ಪರಿಣಾಮ ಬೀಳಲಿದೆ. ಇದರಿಂದ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಮಳೆ ಸುರಿಯಲಿದೆ ಎಂದು ಅದು ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+