• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಣವಾಂಜಲಿ ಅಕಾಡೆಮಿಯ ರಾಜ್ಯೋತ್ಸವ ಕಾರ್ಯಕ್ರಮ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಡಿ 2: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶನಿವಾರ, ಡಿಸೆಂಬರ್ 3ರಂದು ಆಚರಿಸುತ್ತಿದೆ. ಕರ್ನಾಟಕ ಕಲಾಶ್ರೀ ಮಧುರಾ ರವಿಕುಮಾರ್ ಮತ್ತು ಸುಷ್ಮಾ ಹೆಚ್.ಎಂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಧುರ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮವನ್ನು ಜೊತೆಗೆ ಲೋಕೇಶ್ವರ ನಾಟ್ಯ ಟ್ರಸ್ಟ್ ಸಂಸ್ಥೆಯ ಮಕ್ಕಳಿಂದ ಹಾಗೂ ಪ್ರಣವಾಂಜಲಿ ಸಂಸ್ಥೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ.

ಭಾರತದಲ್ಲಿ ಆನ್‌ಲೈನ್ ಕಲಿಕಾ ಅಕಾಡೆಮಿ ಮುಚ್ಚಲಿದೆ ಅಮೆಜಾನ್ ಭಾರತದಲ್ಲಿ ಆನ್‌ಲೈನ್ ಕಲಿಕಾ ಅಕಾಡೆಮಿ ಮುಚ್ಚಲಿದೆ ಅಮೆಜಾನ್

"ಈ ಕಾರ್ಯಕ್ರಮವು ಬನಶಂಕರಿ ಮೊದಲನೇ ಹಂತ, ಶ್ರೀನಿವಾಸನಗರ ಮುಖ್ಯ ರಸ್ತೆಯಲ್ಲಿರುವ ಅಚ್ಯುತ ಪಾರ್ಟಿ ಹಾಲ್ ನಲ್ಲಿ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ" ಎಂದು ಪ್ರಣಾವಂಜಲಿ ಸಂಸ್ಥೆಯ ನಿರ್ದೇಶಕಿ ಪವಿತ್ರ ಪ್ರಶಾಂತ್ ತಿಳಿಸಿದ್ದಾರೆ.

ಪ್ರಣಾವಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಆಚರಿಸಲಾಗಿದ್ದ 'ಪ್ರಕೃತಿ - 2022' ಕಾರ್ಯಕ್ರಮದಲ್ಲಿ 48 ವಿದ್ಯಾರ್ಥಿಗಳು ಭರತನಾಟ್ಯದ ವಿವಿಧ ಪ್ರಾಕಾರದ ನೃತ್ಯದ ಮೂಲಕ ಪ್ರೇಕ್ಷಕರ ಮನ ಸೆಳೆದ್ದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಭರತನಾಟ್ಯ ಪ್ರತಿಭಾ ಅನಾವರಣದ ಭಾಗವಾಗಿ ಪ್ರತೀ ತಿಂಗಳು 'ಈ ನೃತ್ಯ ಸಂಜೆ' ಎನ್ನುವ ಕಾರ್ಯಕ್ರಮವನ್ನು ಆಯೋಜಿಸುವ ಅಕಾಡೆಮಿ, ಈಗಾಗಲೇ ಹಲವಾರು ಪ್ರತಿಭೆಗಳನ್ನು ಕಲಾನೃತ್ಯದ ಮೂಲಕ ಪರಿಚಯಿಸಿದೆ ಗರಿಮೆಯನ್ನು ಹೊಂದಿದೆ.

English summary
Pranavanjali Academy Organizing Kannada Rajyotsava Programme On Dec 3 At Bengaluru. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X