ಮುನ್ನೋಟದಲ್ಲಿ ಈ ಭಾನುವಾರ ವಿಜ್ಞಾನದ ಮಾತುಕತೆ
"ಅರಿಮೆ@ಮುನ್ನೋಟ" ಹೆಸರಿನ ಈ ಸರಣಿಯ ಮೊದಲ ಕಾರ್ಯಕ್ರಮ ಬೆಳಕಿನ ಕುರಿತಾಗಿದ್ದು, ಬೆಳಕೆಂದರೇನು? ಅದರ ಶಕ್ತಿಯೇನು? ಅದರ ಹಿಂದಿರುವ ಗುಟ್ಟೇನು? ಅದರ ವ್ಯಾಪ್ತಿಯೇನು? ವಿಜ್ಞಾನದ ಕಣ್ಣಿನಿಂದ ಅದರಲ್ಲಿ ತಿಳಿಯುವಂತದ್ದೇನು?
ಮುಂದುವರೆದ ನಾಡುಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ತಮ್ಮ ನುಡಿಯಲ್ಲಿ ತಂದಿದ್ದು, ಅವುಗಳು ಏಳಿಗೆ ಹೊಂದಲು ಮುಖ್ಯ ಕಾರಣವಾಗಿರುವುದನ್ನು ಕಾಣಬಹುದು. ಫಿನ್‍ಲ್ಯಾಂಡ್, ಜಪಾನ್, ಕೊರಿಯಾ, ಜರ್ಮನಿ ಮುಂತಾದ ನಾಡುಗಳು ಇದಕ್ಕೆ ಕೆಲವು ಉದಾಹರಣೆಗಳು.
ಕನ್ನಡ ನಾಡು ಕೂಡ ನಿಜ ಅರ್ಥದಲ್ಲಿ ಮುಂದುವರೆಯುವಂತಾಗಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕನ್ನಡದಲ್ಲಿ ಕಟ್ಟಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ಅಲ್ಲಲ್ಲಿ ನಡೆದುಕೊಂಡು ಬಂದಿದ್ದು, ಇನ್ನೂ ವೇಗವಾಗಿ, ಅಚ್ಚುಕಟ್ಟಾಗಿ ನಡೆಯುವ ಅಗತ್ಯವಿದೆ.
ಅರಿಮೆ (arime.org) ಪೋರ್ಟಲ್ ಈ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯಾಗಿದ್ದು, ಕಳೆದ ಸುಮಾರು ಒಂದು ವರುಷದಿಂದ ವಿಜ್ಞಾನದ ಬರಹಗಳು, ಟೆಕ್ನಿಕಲ್ ಪದಗಳಿಗೆ ತಿಳಿಗನ್ನಡದಲ್ಲಿ ಪದಗಳನ್ನು ಕಟ್ಟುವುದು, ವಿಜ್ಞಾನ ಪಠ್ಯಪುಸ್ತಕಗಳ ಅಧ್ಯಯನದಂತಹ ಕೆಲಸಗಳನ್ನು ಮಾಡುತ್ತಾ ಬಂದಿದೆ.

ಅರಿಮೆ ಪೋರ್ಟಲ್ ತನ್ನ ಕೆಲಸವನ್ನು ಮುಂದುವರೆಸುತ್ತಾ, ವಿಜ್ಞಾನದ ವಿಷಯಗಳ ಕುರಿತು ಸರಣಿ ಮಾತುಕತೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ ಪ್ರತಿ ತಿಂಗಳೂ ನಡೆಯಲ್ಲಿದ್ದು, ಶಾಲಾ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರನ್ನು ಗಮನದಲ್ಲಿಟ್ಟುಕೊಂಡು ಅಣಿಗೊಳಿಸಲಾಗಿದೆ.
ಇದರಲ್ಲಿ ಮುಖ್ಯವಾಗಿ ವಿಜ್ಞಾನದ ಪಠ್ಯಪುಸ್ತಕಗಳಿಗೆ ಪೂರಕವಾಗುವಂತಹ ವಿಷಯಗಳನ್ನು ಆದಷ್ಟೂ ತಿಳಿಗನ್ನಡದಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗುತ್ತದೆ. ಪಠ್ಯಪುಸ್ತಕಗಳ ಜತೆಗೆ ವಿಜ್ಞಾನದ ಆಗುಹೋಗುಗಳ ಬಗ್ಗೆಯೂ ಮಾತುಕತೆಯನ್ನು ಹಮ್ಮಿಕೊಳ್ಳಲಾಗುವುದು.
ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ತಿಳಿವಳಿಕೆಯನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮ ಒಂದು ವೇದಿಕೆಯಾಗಲಿದ್ದು, ವಿಜ್ಞಾನದ ವಿಷಯವೊಂದರಲ್ಲಿ ನುರಿತವರು, ಆಸಕ್ತರು ತಮ್ಮ ಅರಿವನ್ನು ಜನಸಾಮಾನ್ಯರೊಡನೆ ಹಂಚಿಕೊಳ್ಳಬಹುದು.
ಈ ಸರಣಿಯ ಮೊದಲ ಹೆಜ್ಜೆಯಾಗಿ ಬರುವ ಭಾನುವಾರ, 26.03.2017ರಂದು ಬೆಳಿಗ್ಗೆ 11.30ಕ್ಕೆ ಬಸವನಗುಡಿಯಲ್ಲಿರುವ, ಕನ್ನಡ-ಕನ್ನಡಿಗ-ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ನಡೆಸಲಾಗುತ್ತಿರುವ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.
ಈ ಸಲದ ಕಾರ್ಯಕ್ರಮ 'ಬೆಳಕು' ಎಂಬ ವಿಷಯದ ಕುರಿತಾಗಿದ್ದು, ಅರಿಮೆ ಮಿಂದಾಣದ ಸಂಪಾದಕರಾದ ಪ್ರಶಾಂತ ಸೊರಟೂರ ಅವರು ನಡೆಸಿಕೊಡಲಿದ್ದಾರೆ. ಈ ಬಾರಿಯ ಕಾರ್ಯಕ್ರಮ ಪಠ್ಯಪುಸ್ತಕಗಳಿಗೆ ಪೂರಕವಾದ ಮತ್ತು ಆಸಕ್ತರಿಗೆ ಮಾಹಿತಿಯನ್ನು ಒದಗಿಸಿಕೊಡುವ ಕಾರ್ಯಕ್ರಮವಾಗಿರಲಿದೆ. ಶಾಲಾ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ವಿಜ್ಞಾನದ ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications