ಆಗಸ್ಟ್ 20ರಂದು ಪ್ರಣವಾಂಜಲಿ ಅಕಾಡೆಮಿಯ ವೈವಿಧ್ಯಮಯ ನೃತ್ಯ ಹಬ್ಬ
ಬೆಂಗಳೂರು, ಆಗಸ್ಟ್ 19: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಬೆಂಗಳೂರಿನ ಜೆ.ಸಿ ರಸ್ತೆ ಯಲ್ಲಿರುವ ನಯನ ಸಭಾಂಗಣದಲ್ಲಿ ನೃತ್ಯ ಸಂಹಿತಾ - 2023 ಎನ್ನುವ ವೈವಿಧ್ಯಮಯ ನೃತ್ಯ ಹಬ್ಬವನ್ನು, 20 ಆಗಸ್ಟ್ 2023 ರಂದು ಸಂಜೆ 4.30 ಗಂಟೆಗೆ ಆಯೋಜಿಸುತ್ತಿದೆ.
ಚರಿಸುತ್ತಿಧರೆ. ಡಾ. ಭಾಗ್ಯಶ್ರೀ ಕಡಬಾ ರವರ ಸಂಸ್ಥೆ ಶ್ರೀ ನೃತ್ಯ ಕಲಾಕೇಂದ್ರ ಉಡುಪಿ, ಪಡುಬಿದ್ರೆ, ಶ್ರೀಮತಿ ರೂಪ ಗಿರೀಶ್ ರವರ ಸಂಸ್ಥೆ ನೃತ್ಯ ಲಹರಿ ಕಲಾಕೇಂದ್ರ, ಬೆಂಗಳೂರು , ಶ್ರೀಮತಿ ದರ್ಶಿನಿ ಮಂಜುನಾಥ್ ರವರ ಸಂಸ್ಥೆ ಶ್ರೀ ನೃತ್ಯ ದಿಶಾ ಟ್ರಸ್ಟ್, ಬೆಂಗಳೂರು ಅವರು ನೃತ್ಯರೂಪಕ ನಡೆಸಿಕೊಡಲಿದ್ದಾರೆ.

ಇದಲ್ಲದೇ, ಶ್ರೀಮತಿ ರೋಹಿಣಿ ಶ್ರೀಧರ್ ರವರ ಸಂಸ್ಥೆ ಕಲಾರಾಧನಾ ಪ್ರತಿಷ್ಠಾನ, ಬೆಂಗಳೂರು, ಶ್ರೀಮತಿ ಗಾಯತ್ರಿ ಮಯ್ಯ ರವರ ಸಂಸ್ಥೆಯ ತಮೋಹ ಆರ್ಟ್ಸ್ ಫೌಂಡೇಶನ್ ಇಂದ ಕುಮಾರಿ ಆದ್ಯ ಮಯ್ಯ ರವರು ಹಾಗೆ ಪ್ರಣವಾಂಜಲಿ ಸಂಸ್ಥೆಯ ನೃತ್ಯ ಕಲಾವಿದರಿಂದ ನೃತ್ಯ ಕಾರ್ಯಕ್ರಮವಿರಲಿದೆ.
ವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲ್ಲಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ನಮ್ರತಾ ಏನ್ ರವರು, ಅನಾದ್ಯ ಸಂಸ್ಥೆಯ ನಿರ್ದೇಶಕಿ ಕಥಕ್ ನೃತ್ಯಕಲಾವಿದೆ ಶ್ರೀಮತಿ ಅರ್ಪಿತಾ ಬ್ಯಾನರ್ಜಿ ರವರು ಹಾಗೆ ಡಾ. ಪವಿತ್ರ ಸಾಂಸ್ಕೃತಿಕ ಸಂಯೋಜಕರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಸಂಯೋಜಕರು, ಪ್ರದರ್ಶನ ಕಲಾ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು, ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ, ಶ್ರೀಮತಿ ಪವಿತ್ರ ಪ್ರಶಾಂತ್ ರವರು ಎಲ್ಲರಿಗೂ ಸ್ವಾಗತವನ್ನು ಕೋರಿದ್ದಾರೆ.

ಪ್ರಣವಾಂಜಲಿ ಸಂಸ್ಥೆಯು ನಗರದ ಶ್ರೀನಿವಾಸನಗರದಲ್ಲಿರುವ ಅಚ್ಯುತ ಪಾರ್ಟಿ ಹಾಲ್ ನಲ್ಲಿ ಆಗಸ್ಟ್ 17, ಗುರುವಾರ ಸಂಜೆ 6-30ಕ್ಕೆ ಸ್ವಾತಂತ್ರ ದಿನಾಚರಣೆಯ ಸಂಭ್ರಮೋತ್ಸವವನ್ನು ಆಚರಿಸಿತ್ತು.
ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ನಮ್ರತಾ ಎನ್. ಹಾಗೂ ಶ್ರೀ ಮುನಿರಾಜು ಎಂ. ಇವರುಗಳು ಆಗಮಿಸಿದ್ದರು. ಸಂಸ್ಥೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪವಿತ್ರ ಪ್ರಶಾಂತ್ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.












Click it and Unblock the Notifications