• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧುಮೇಹ ರೋಗಿಗಳಿಗೆ ಸಕತ್ 'ಸಿಹಿ' ಸುದ್ದಿ

By Mahesh
|

ಬೆಂಗಳೂರು, ಅ.8: ನಗರದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಝೆಡಿಸ್ ಹೆಲ್ತ್ ಕೇರ್ ಐತಿಹಾಸಿಕ ಚಂಗಂಪಲ್ಲಿ ವೈದ್ಯ ಭವನ್ ಸಹಯೋಗದಲ್ಲಿ ಪ್ರಮೇಹ ಮೋಕ್ಷಂ ಎಂಬ ಪರಿಣಾಮಕಾರಿ ಗಿಡಮೂಲಿಕೆಯ ಔಷಧವನ್ನು ಝೆಡಿಸ್ ಹೆಲ್ತ್ ಕೇರ್ ಬಿಡುಗಡೆ ಮಾಡಿದ್ದನ್ನು ನೀವು ಓದಿರುತ್ತೀರಿ. ಈಗ ಇದೇ ಸಂಸ್ಥೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಪ್ರಪ್ರಥಮ ಬಾರಿಗೆ ಮಧುಮೇಹ ರೋಗಿಗಳ ಅನುಕೂಲಕ್ಕಾಗಿ ಪ್ರಮೇಹ ಮೋಕ್ಷಂ ಸಂಸ್ಥೆ 24X7 ಡಯಾಬಿಟಿಸ್ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ನಾಗರಿಕರು 8971744442 ಸಹಾಯವಾಣಿಗೆ ಕರೆ ಮಾಡಿ ಮಧುಮೇಹ ಸಂಬಂಧಿಸಿದ ಯಾವುದೇ ಪ್ರಶ್ನೆ, ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಇದರ ಜೊತೆಗೆ ಈ ಸಹಾಯವಾಣಿ ಮುಖಾಂತರ ಆಯುರ್ವೇದದಿಂದ ಜೀವನಕ್ರಮದಲ್ಲಿ ಸುಧಾರಣೆ ಮಾಡಿಕೊಂಡು ಮಧುಮೇಹದಿಂದ ದೂರವುಳಿಯಬಹುದು. ಬೆಂಗಳೂರು ನಿಧಾನವಾಗಿ 'ಮಧುಮೇಹಿಗಳ ರಾಜಧಾನಿ' ಯಾಗುತ್ತಿದ್ದು, ಪ್ರಮೇಹ ಮೋಕ್ಷಂನಿಂದ ಉತ್ತಮ ಪರಿಹಾರ ನಿರೀಕ್ಷಿಸಬಹುದು ಎಂದು ಝೆಡಿಸ್ ಸಮೂಹದ ಕಂಪನಿಗಳ ಸಿಒಒ ಡಾ. ಆದಿಲ್ ಮಹಮ್ಮದ್ ಹೇಳಿದ್ದಾರೆ.

ಪ್ರಮೇಹ ಮೋಕ್ಷಂ- ಮಧುಮೇಹ ರೋಗಿಗಳಿಗೆ ಚಂಗಂಪಲ್ಲಿ ವೈದ್ಯ ಭವನ್ ನೀಡುತ್ತಿರುವ ಚಿಕಿತ್ಸೆಯಾಗಿದ್ದು ಮಧುಮೇಹ ನಿವಾರಿಸುವ ಥೆರಪಿಯಾಗಿದೆ. ಈ ಥೆರಪಿಯಲ್ಲಿ ಮಧುಮೇಹದ ದೇಹವನ್ನು ಗುಣಪಡಿಸುವುದು, ಮನಸ್ಸು, ದೇಹ ಮತ್ತು ಆತ್ಮವನ್ನು ಸಾಂತ್ವನಗೊಳಿಸುತ್ತದೆ. ಈ ಪ್ಯಾಕೇಜ್ ನಲ್ಲಿ ಹರ್ಬಲ್ ಮೆಡಿಸಿನ್ ಪ್ಯಾಕೇಜ್, ಡಯೆಟ್ ಪ್ಲಾನ್, ವ್ಯಾಯಾಮಗಳು ಇತ್ಯಾದಿ ಒಳಗೊಂಡಿದ್ದು ದೇಹದ ಸಮಗ್ರ ಆರೋಗ್ಯದ ಕಡೆಗೆ ಗಮನ ನೀಡುತ್ತದೆ ಎಂದು ಝೆಡಿಸ್ ಸಮೂಹದ ಸಂಸ್ಥಾಪಕ ಅಧ್ಯಕ್ಷ ಬಸ್ಸಂ ಮೊಹಮ್ಮದ್ ಹೇಳಿದ್ದಾರೆ. [ಮಧುಮೇಹಿಗಳ ಸಂಖ್ಯೆː ಭಾರತಕ್ಕೆ ಎರಡನೇ ಸ್ಥಾನ]

ಝೆಡಿಸ್ ಹೆಲ್ತ್ ಕೇರ್ ಪ್ರೈ.ಲಿ.ಕುರಿತು: ಝೆಡಿಸ್ ಸಮೂಹದ ಅಂಗವಾಗಿರುವ ಈ ಸಂಸ್ಥೆ ಮಧುಮೇಹಕ್ಕೆ ಆರೋಗ್ಯಸೇವಾ ಪರಿಹಾರಗಳನ್ನು ಒದಗಿಸುತ್ತದೆ. ಆರೋಗ್ಯವೇ ಭಾಗ್ಯ' ಎಂಬ ನಾಣ್ಣುಡಿಯಲ್ಲಿ ನಂಬಿಕೆ ಇಟ್ಟಿರುವ ಕಂಪನಿ ಆರೋಗ್ಯಕರ ಸಮುದಾಯ ಸೃಷ್ಟಿಸಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಆಯುರ್ವೇದ ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಚಿಕಿತ್ಸೆಯಾಗಿದ್ದು ಝೆಡಿಸ್ ಹೆಲ್ತ್ ‍ಕೇರ್ ಆಯುರ್ವೇದದ ಚಿಕಿತ್ಸಾ ವಿಧಾನಗಳನ್ನು ಆಧುನಿಕ ರೋಗಪತ್ತೆ ವಿಧಾನಗಳಿಗೆ ಅಳವಡಿಸಿಕೊಂಡಿದೆ. ಕಂಪನಿ ಮತ್ತು ಅದರ ಸಹಸಂಸ್ಥೆಗಳು ಸಮಾಜದಲ್ಲಿ ಆರೋಗ್ಯದ ಕಾಳಜಿಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ.

ಪ್ರಾರಂಭದಿಂದಲೂ ಝೆಡಿಸ್ ಹೆಲ್ತ್‍ಕೇರ್ ವಿವಿಧ ರೋಗಗಳಿಂದ ಬಳಲುವವರಿಗೆ ನೆರವಾಗುತ್ತಿದೆ. ಝೆಡಿಸ್ ಹೆಲ್ತ್ ಕೇರ್ ಅನ್ನು ಅನನ್ಯವಾಗಿಸಿರುವ ಒಂದೇ ಅಂಶವೆಂದರೆ ಕೈಗೆಟುಕುವ ದರದಲ್ಲಿ ಅದರ ಸಮಗ್ರ ಚಿಕಿತ್ಸಾ ವಿಧಾನ. ಝೆಡಿಸ್ ಹೆಲ್ತ್ ಕೇರ್ ನಲ್ಲಿ 'ಆಯುರ್ವೇದವನ್ನು ಮರುಜೀವಿಸಿ' ಎನ್ನುವುದೇ ಮಂತ್ರ.

ಝೆಡಿಸ್ ಸಮೂಹದ ಕಂಪನಿಗಳ ಕುರಿತು: ಝೆಡಿಸ್ ಸಮೂಹ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಭಾರತೀಯ ಸಂಘಟಿತ ವ್ಯಾಪಾರ ಸಂಸ್ಥೆಗಳಾಗಿದ್ದು ಆರೋಗ್ಯಸೇವೆ, ರಿಯಲ್ ಎಸ್ಟೇಟ್, ಹರ್ಬಲ್ ಉತ್ಪನ್ನಗಳು ಮತ್ತು ಇತರೆ ಉತ್ಪನ್ನಗಳನ್ನು ತಯಾರಿಸುತ್ತದೆ. ಗ್ರಾಹಕರ ನಿರೀಕ್ಷೆಗೂ ಮೀರಿ ಉತ್ಪನ್ನಗಳನ್ನು ತಯಾರಿಸಲು ಕಂಪನಿ ಕಂಕಣಬದ್ಧವಾಗಿದೆ. ಪ್ರಸ್ತುತದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅವರು ಸದಾ ಸನ್ನದ್ಧರಾಗಿರುತ್ತಾರೆ. ಝೆಡಿಸ್ ಸಮೂಹ ವಿಭಿನ್ನ ಆಲೋಚನೆಗಳ ಮೂಲಕ ಸಾರ್ವಜನಿಕರಿಗೆ ಶಕ್ತಿ ತುಂಬುವ ತತ್ವವನ್ನು ಆಚರಿಸುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಪ್ರಮೇಹ ಮೋಕ್ಷಂ ವೆಬ್ ಸೈಟ್

English summary
For the first time in Bangalore, an Ayurvedic speciality healthcare solution provider takes the initiative to spread out in the city & reach to everybody suffering from diabetes. Prameha Moksham launched its 24x7 diabetes helpline number, 8971744442 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X