'ಥಿಂಕ್ ಮಾಡಿ ವೋಟ್ ಮಾಡಿ' ಕುರಿತು ಸಿಪಿಎಂ ಮುಖಂಡರೊಂದಿಗೆ ಪ್ರಕಾಶ್ ರೈ ಚರ್ಚೆ
ಬೆಂಗಳೂರು, ಫೆಬ್ರವರಿ 14: ಲೋಕಸಭೆ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ, ಲೇಖಕ ಪ್ರಕಾಶ್ ರೈ ಅವರು ಇಂದು ಸಿಪಿಎಂ ಪಕ್ಷ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.
ಪ್ರಕಾಶ್ ರೈ ಅವರು 'ಥಿಂಕ್ ಮಾಡಿ ವೋಟ್ ಮಾಡಿ' ಧ್ಯೇಯ ವಾಕ್ಯದೊಡನೆ ಪ್ರಚಾರ ನಡೆಸುತ್ತಿದ್ದು, ಇದರ ಬಗ್ಗೆ ಹಾಗೂ ಪ್ರಸ್ತುತ ಚುನಾವಣೆಯ ರೀತಿ-ನೀತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ.ಪ್ರಕಾಶ್ ಕಾರಟ್ ಹಾಗೂ ಎಂ.ಎ.ಬೇಬಿ ಮತ್ತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕಾಂ.ಯು.ಬಸವರಾಜು ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. 'ಥಿಂಕ್ ಮಾಡಿ ಓಟ್ ಮಾಡಿ' ಎಂಬುದು ಅವರ ಪ್ರಚಾರದ ಧ್ಯೇಯ ವಾಕ್ಯವಾಗಿದೆ.












Click it and Unblock the Notifications