ಜು.19ರಂದು ಬೆಂಗಳೂರಲ್ಲಿ ನೀರೂ ಇರಲ್ಲ, ಕರೆಂಟೂ ಇರಲ್ಲ
ಬೆಂಗಳೂರು, ಜು.18: ಭಾರಿ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನಲ್ಲಿ ಹೂಳು ಮಿಶ್ರಿತವಾಗಿರುವ ಕಾರಣ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಬೆಸ್ಕಾಂ ವ್ಯಾಪ್ತಿಯ ಎಫ್ 9 ಫೀಡರ್ 66/11 ಕೆವಿ ನಾಗಪುರ ಉಪಕೇಂದ್ರದಲ್ಲಿ ವಿದ್ಯುತ್ ಸರಬರಾಜು ಉಪಕೇಂದ್ರದಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಗುರುವಾರ ಜು.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮಹಾಲಕ್ಷ್ಮೀಪುರ, ನಾಗಪುರ, ಎಂಎಲ್ ಬಡಾವಣೆ, ಇಸ್ಕಾನ್ ಎದುರು, ಆಂಜನೇಯ ದೇವಸ್ಥಾನ, ಮಹಾಲಕ್ಷ್ಮೀ ಬಡಾವಣೆ 3ರಿಂದ 8 ನೇ ಕ್ರಾಸ್, ಕಮಲಮ್ಮ ಗುಂಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.












Click it and Unblock the Notifications